Headlines

ನೇಹಾ ಹತ್ಯೆ-ಒಗ್ಗಟ್ಟಾದ ಹಿಂದೂ ಮಹಿಳೆಯರು

ಬೆಳಗಾವಿ.
ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಬರ್ಬರ ಹತ್ಯೆಯಿಂದ ರಾಜ್ಯವ್ಯಾಪಿ ಪ್ರತಿಭಟನೆಗಳು ಹೆಚ್ಚಾಗಿವೆ.

ಹಿಂದೂಗಳು ಅಷ್ಟೇ ಅಲ್ಲ ಮುಸ್ಲೀಂ ಸಮಾಜದವರೂ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ,
ಈ ಹೋರಾಟವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಹಿಂದೂ ಸಮಾಜದ ಮಹಿಳೆಯರು ರಾಜಕೀಯ ಬದಿಗೊತ್ತಿ ನಮಗೂ ರಕ್ಷಣೆ ಕೊಡಿ ಎನ್ನುವ ಉದ್ದೇಶವಿಟ್ಟುಕೊಂಡು ಪ್ರತಿಯೊಂದು ಗಲ್ಲಿ ಗಲ್ಲಿಗಳಲ್ಲಿ ಸಭೆಗಳನ್ನು ನಡೆಸುವ ತೀರ್ಮಾನ ಮಾಡಿದ್ದಾರೆ.

oplus_2

ಕಳೆದ ದಿನ ರಾತ್ರಿಯಿಂದಲೇ ಪ್ರತಿಯೊಂದು ಸಭೆಗಳು ನಡೆದಿವೆ. ಮೂಲಗಳ ಪ್ರಕಾರ ವಾರ್ಡನಲ್ಲಿ ಹತ್ತಕ್ಕೂ ಹೆಚ್ಚು ಸಭೆಗಳನ್ನು ನಡೆಸಲು ಮಹಿಳಾ ಮಂಡಳಗಳು ನಿರ್ಧರಿಸಿವೆ.
ಬೆಳಗಾವಿಯಲ್ಲಿರುವ ಪ್ರತಿಯೊಂದು ಮಹಿಳಾ ಮಂಡಳದವರು ಜಸ್ಟೀಸ್ ಫಾರ್ ನೇಹಾ ಎನ್ನುವ ಭಿತ್ತಿಪತ್ರದೊಂದಿಗೆ ಶೃದ್ಧಾಂಜಲಿ ಸಭೆ ನಡೆಸುತ್ತಿದ್ದಾರೆ.ರಾಜಕೀಯೇತರವಾಗಿ ಈ ಸಭೆಗಳು‌ ನಡೆಯುತ್ತಿವೆ.

ಬೆಳಗಾವಿ ಮಹಾನಗರ ಪಾಲಿಕೆ ಅಷ್ಟೇ ಅಲ್ಲ ಪ್ರತಿಯೊಂದು ಕಡೆಗೂ ಅವಳ ಭಾವಚಿತ್ರದ ಮುಂದೆ ಮೆಣಬತ್ತಿ ಹಚ್ಚಿ ಸೃದ್ಧಾಂಜಲಿ ಸಭೆ ನಡೆಸುವ ತೀಮರ್ಾನವನ್ನು ಮಹಿಳೆಯರು ಮಾಡುತ್ತಿದ್ದಾರೆಂದು ಗೊತ್ತಾಗಿದೆ.
ಗಮನಿಸಬೇಕಾದ ಸಂಗತಿ ಎಂದರೆ, ಇಷ್ಟೆಲ್ಲ ರಾಜ್ಯದ ಜನರ ಆಕ್ರೋಶಕ್ಕೆ ಕಾರಣವಾದ ನಂತರ ಕೂಡ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ವರ ಅವರು ನೀಡಿದ ಹೇಳಿಕೆಗಳು ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿವೆ. ಈ ಹಿನ್ನೆಲೆಯಲ್ಲಿ ಈ ಸರ್ಕಾರ ದಿಂದ ನಮಗೆ ರಕ್ಷಣೆ ಸಿಗಲ್ಲ ಎನ್ನುವ ಅಸಮಾಧಾನ ಎಲ್ಲರಲ್ಲಿದೆ,
ಇದು ಮುಂದಿನ ದಿನಗಳಲ್ಲಿ ಮಹಿಳಯರ ಆಕ್ರೋಶ ಯಾವ ರೀತಿ ಬದಲಾವಣೆ ತರಬಹುದು ಎನ್ನುವುದನ್ನು ಕಾದು ನೋಡಬೇಕು,

Leave a Reply

Your email address will not be published. Required fields are marked *

error: Content is protected !!