ರಾತ್ರಿ.10 ಕ್ಕೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೋದಿ.
ಮೋದಿ ಸ್ವಾಗತಿಸಿದ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಡರ್.
ಹೊಟೇಲನತ್ತ ಹೊರಟ ಮೋದಿ.
ಬೆಳಗಾವಿ. ಗಡಿನಾಡ ಬೆಳಗಾವಿ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಆಗಮನ ಒಂದು ದೀತಿಯಲ್ಲಿ ಕಾಂಗ್ರೆಸ್ ಪಾಳಯದಲ್ಲಿ ಭಾರೀ ಪ್ರಮಾಣದಲ್ಲಿ ಮತ ಕಳೆದುಕೊಳ್ಳುವ ಭೀತಿ ಮೂಡಿಸಿದೆ
ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ,ಕೆ, ಶಿವಕುಮಾರ ಅವರು ಬೆಳಗಾವಿಯಲ್ಲಿಯೇ ಇರುವುದರಿಂದ ಮೋದಿ ಏನೆಲ್ಲ ಮಾತಾಡಿ ನಮ್ಮ ಮತ ಬುಟ್ಟಿಗೆ ಕೈ ಹಾಕಬಹುದು ಎನ್ನುವ ಭೀತಿ ಕಾಂಗ್ರೆಸ್ನಲ್ಲಿ ಶುರುವಾಗಿದೆ. ಯಾವುದೇ ಒಂದು ಹೇಳಿಕೆಯನ್ನು ಸ್ಥಳೀಕರು ಕೊಡುವುದು ಬೇರೆ, ಆದರೆ ಅದೇ ಮಾತನ್ನು ಪ್ರಧಾನಿ ಮೋದಿಯವರು ಹೇಳಿದರೆ ಅದರಿಂದ ಆಗುವ ಪರಿಣಾಮವೇ ಬೇರೆ. ಹೀಗಾಗಿ ನಾಳೆ ಪ್ರಧಾನಿ ಮೋದಿಯವರ ಭಾಷಣದತ್ತ ಎಲ್ಲರ ಕುತೂಹಲ ಹೆಚ್ಚಿದೆ.
ಏನೆಲ್ಲ ಪ್ರಸ್ತಾಪಿಸಬಹುದು? ಬೆಳಗಾವಿಯಲ್ಲಿ ಪ್ರಧಾನಿ ಮೋದಿ ಆಡುವ ಒಂದೊಂದು ಮಾತು ಸಹ ಅತ್ಯಂತ ಮಹತ್ವದ್ದಾಗಿರುತ್ತದೆ, ಇಷ್ಟು ದಿನ ಕೇಂದ್ರದಿಂದ ಬರ ಪರಿಹಾರ ಅನುದಾನ ಬಂದಿಲ್ಲ ಎನ್ನುವ ಕಾಂಗ್ರೆಸ್ಗೆ ತಕ್ಕ ಉತ್ತರ ಕೊಡಬಹುದು, ಏಕೆಂದರೆ ಕೇಂದ್ರವು ಸುಮಾರು ಮೂರುವರೆ ಸಾವಿರ ಕೋಟಿ ಅನುದಾನ ಕೊಟ್ಟಿದೆ. ಇದರ ಜೊತೆಗೆ ಅಹಿಂದ ಮತಗಳನ್ನು ಗಮನದಲ್ಲಿರಿಸಿಕೊಂಡು ಮುಸ್ಲೀಂರಿಗೆ ಕೊಡಲಾಗಿದ್ದ ಶೇ, 4 ರಷ್ಟು ಮೀಸಲಾತಿ ರದ್ದತಿ ಬಗ್ಗೆ ಪ್ರಸ್ತಾಪಿಸುವ ಸಾಧ್ಯತೆಗಳಿವೆ, ಇದೆಲ್ಲದರ ಜೊತೆಗೆ ಮುಖ್ಯವಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಿತ್ರಾಜರ್ಿತ ಆಸ್ತಿಯಲ್ಲಿ ಬಹುಪಾಲು ಸಕರ್ಾರಕ್ಕೆ ಹೋಗುತ್ತದೆ ಎನ್ನುವ ಸಂದೇಶ ಕೂಡ ಕೊಡಬಹುದು,
ಲಕ್ಷ ಲಕ್ಷ ಜನ..!
ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮ ಕ್ಕೆ ಕನಿಷ್ಟ ಒಂದು ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಬೆಳಗಾವಿ ತಾಲೂಕಿನ ಮೂರು ಕ್ಷೇತ್ರದಿಂದ ಹೆಚ್ಚು ಜನ ಸೇರಬಹುದು ಎನ್ನಲಾಗುತ್ತಿದೆ. ಬೆಳಗಾವಿ ಯಡಿಯೂರಪ್ಪ ಮಾರ್ಗದಲ್ಲಿ ರುವ ಮಾಲಿನಿ ಸಿಟಿಯಲ್ಲಿ ಕಾರ್ಯಕ್ರಮದ ವ್ಯವಸ್ಥೆ ಆಗಿದೆ.
ಬಿಜೆಪಿಗೆ ಹೆಚ್ವಿದ ಬಲ..!
ಸಹಜವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಆಗಮನದಿಂದ ಬಿಜೆಪಿಗೆ ಆನೆ ಬಲ ಬಂದಂತಾಗಿದೆ. ಅವರ ಸ್ವಾಗತಕ್ಕೆ ಎಲ್ಲ ರೀತಿಯ ತಯಾರಿಗಳು ನಡೆದಿವೆ.
ಬೆಳಗಾವಿ ದಕ್ಷಿಣದಲ್ಲಿ ಶಾಸಕ ಅಭಯ ಪಾಟೀಲರ ಮಾರ್ಗದರ್ಶನ ದಲ್ಲಿ ಪ್ರತಿಯೊಂದು ವಾರ್ಡದಿಂದ ಬೈಕ್ ರ್ಯಾಲಿ ನಡೆಯಕಿದೆ ಅದಕ್ಕಾಗಿ ಸಿದ್ಧತೆಗಳು ನಡೆದಿವೆ. ಮೋದಿ ಆಗಮನದಿಂದ ಬಿಜೆಪಿ ಅಭ್ಯರ್ಥಿಗಳ ಲೀಡ್ ಪ್ರಮಾಣದಲ್ಲಿ ಕೂಡ ಕನಿಷ್ಟ ಶೇ 25 ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನುವ ಮಾತಿದೆ