ಪ್ರಿಯಾಂಕಾಗೆ ಎಲ್ಲರ ಶುಭ ಹಾರೈಕೆ

ಕೈ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿಗೆ ಶುಭ ಕೋರಿದ ಡಾ. ಸಿ.ಎಸ್. ದ್ವಾರಕನಾಥ

ಚಿಕ್ಕೋಡಿ: ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ, ಕೆಪಿಸಿಸಿ ಕಾನೂನು ವಿಭಾಗದ ವಕ್ತಾರ ಡಾ. ಸಿ.ಎಸ್. ದ್ವಾರಕನಾಥ ಅವರು ಚಿಕ್ಕೋಡಿ ಲೋಕಸಭೆ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಶುಭ ಕೋರಿದರು.

ಕವಟಗಿಮಠ ನಗರದಲ್ಲಿ ಇರುವ ಮನೆಯಲ್ಲಿ ಚಿಕ್ಕೋಡಿ ಲೋಕಸಭೆ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ ಕೆಪಿಸಿಸಿ ಕಾನೂನು ವಿಭಾಗದ ವಕ್ತಾರ ಡಾ. ಸಿ.ಎಸ್. ದ್ವಾರಕನಾಥ ಅವರು ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಿದರು.

ಇದೇ ವೇಳೆ ಮಾತನಾಡಿದ ಡಾ. ಸಿ.ಎಸ್. ದ್ವಾರಕನಾಥ ಅವರು, ತಂದೆ, ಸಚಿವರಾದ‌ ಸತೀಶ್‌ ಜಾರಕಿಹೊಳಿ ಅವರ ಕಾರ್ಯಕ್ಷಮತೆ, ಅಭಿವೃದ್ಧಿ ಕೆಲಸ, ಸಮಾಜ ಸೇವೆ, ಕಾಂಗ್ರೆಸ್‌ ಪಕ್ಷ ನೀಡಿರುವ ಗ್ಯಾರಂಟಿ ಯೋಜನೆಗಳು ನಿಮ್ಮ ಗೆಲುವಿಗೆ ಸಹಕಾರಿಯಾಗಲಿವೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬಂಡಾಯ ಸಾಹಿತಿ ಯಲ್ಲಪ್ಪ ಇಮ್ಮಡಿ, ಅಲೆಮಾರಿ ಬುಡಕಟ್ಟು ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗರಾಜ ವಕೀಲರು, ಸಂಜಯ ಲೋಕಾಪುರೆ, ಉದಯ ವಾಗ್ಮುರೆ, ರೀಹಾನಾ ನದಾಪ್, ಮಹಾದೇವ ಪೋಳ, ಸಂಜಯ ಲೋಕಾಪುರೆ, ದಯಾನಂದ ಕಾಂಬಳೆ ಸೇರಿದಂತೆ ಹಲವರು ಇದ್ದರು.

Leave a Reply

Your email address will not be published. Required fields are marked *

error: Content is protected !!