ಶೆಟ್ಟರ್ ಪರವಾಗಿ ವಿಜಯಂದ್ರ ಭರ್ಜರಿ ಕ್ಯಾಂಪೇನ್

ಜಗದೀಶ್ ಶೆಟ್ಟರ್ ಪರವಾಗಿ ವಿಜಯಂದ್ರ ಭರ್ಜರಿ ಕ್ಯಾಂಪೇನ್

ಜಗದೀಶ್ ಶೆಟ್ಟರ್ ಗೆಲ್ಲಿಸಿ ಮೋದಿ ಕೈ ಬಲಪಡಿಸಿ ಎಂದು ಕರೆ ನೀಡಿದ ಕರೆ ನೀಡಿದ ವಿಜಯಂದ್ರ

ಬೆಳಗಾವಿ: ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಅನ್ನೋದು ನನ್ನ ಸಂಕಲ್ಪ.‌ ರಾಜ್ಯದಲ್ಲಿ 28-28 ಕ್ಷೇತ್ರಗಳನ್ನು ಬಿಜೆಪಿ-ಜೆಡಿಎಸ್ ಗೆಲ್ಲಬೇಕು. ಶೆಟ್ಟರ್ ಅವರನ್ನು ಗೆಲ್ಲಿಸುವುದರ ಮೂಲಕ ಮೋದಿ ಕೈ ಬಲಪಡಿಸಿ, ಈ ಸಂಕಲ್ಪಕ್ಕೆ ನೀವೆಲ್ಲರೂ ಕೈ ಜೋಡಿಸಿಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.

ಬೆಳಗಾವಿಯ ಬಾಳೆಕುಂದ್ರಿ ಗ್ರಾಮದಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪರವಾದ ಪ್ರಚಾರ ಪ್ರಚಾರ ಸಮಾವೇಶದಲ್ಲಿ ಭಾಷಣ ಮಾಡಿದ ವಿಜಯೇಂದ್ರ ಅವರು, 10 ದಿನದ ಹಿಂದೆ ಬಿಜೆಪಿ ಪ್ರಣಾಳಿಕೆ ಬಿಡುಗಡೆಯಾತ್ತು. ಆಗ ಮೋದಿ ಒಂದು ಮಾತು ಹೇಳಿದರು. ಮೈ ಇಸ್ ದೇಶ್ ಕೋ ರುಕ್ನೆ ನಹಿ ದೂಂಗಾ. ಮೈ ಇಸ್ ದೇಶ್ ಕೋ ದುಕ್ನೆ ನಹಿ ದೂಂಗಾ ಅಂತ ಮೋದಿ ಹೇಳಿದ್ದಾರೆ.

2008 ರಲ್ಲಿ ಮೋದಿ ಪ್ರಧಾನಿಯಾದಾಗ ಈ ದೇಶಕ್ಕೆ ಭವಿಷ್ಯ ಇಲ್ಲ ಎನ್ನುವ ಮಾತು ಆಡುತ್ತಿದ್ದರು.‌ ಮೋದಿಯವರು ಭ್ರಷ್ಟಾಚಾರ ಮುಕ್ತ ಆಡಳಿತ ಮಾಡಿ ತೋರಿಸಿದ್ದಾರೆ. ಭಾರತವನ್ನು ವಿಶ್ವದ ಅಗ್ರಗಣ್ಯ ದೇಶಗಳೊಂದಿಗೆ ಕೊಂಡೊಯ್ಯಬಹುದು ಎಂದು ಮೋದಿ ತೋರಿಸಿದ್ದಾರೆ. ಒಂದು ದಿನವೂ ಸಹ ರಜೆ ವಿಶ್ರಾಂತಿ ತೆಗೆದುಕೊಳ್ಳದೆ ಮೋದಿ ಕೆಲಸ ಮಾಡುತ್ತಿದ್ದಾರೆ.‌ ಇಂತಹ ಪ್ರಧಾನಿ ನಮಗೆ ಸಿಕ್ಕಿದ್ದು ಸಂತೋಷ ಮತ್ತು ಹೆಮ್ಮೆಯ ವಿಚಾರ ಎಂದು ತಿಳಿಸಿದರು.‌

ಆರ್ಟಿಕಲ್ 370 ಕಾಂಗ್ರೇಸ್ ಪಕ್ಷದ ಪಾಪದ ಕೂಸು. ಅದರಿಂದ ಕಾಶ್ಮೀರ ಉಗ್ರರ ಅಡಗುತಾಣ ಆಗುತಿತ್ತು.‌ ಅಲ್ಲಿರುವ ಹಿಂದೂಗಳು ಕುಟುಂಬಸ್ಥನ್ನು ಕಳೆದುಕೊಂಡಿದ್ದಾರೆ. ಇಷ್ಟೆಲ್ಲಾ ಆದರೂ ಸಹ ಕಾಂಗ್ರೇಸ್ 370 ಆರ್ಟಿಕಲ್ ತೆಗೆದುಹಾಕಲಿಲ್ಲ. ಆದರೆ ಕೊಟ್ಟ ಭರವಸೆಯಂತೆ ಆರ್ಟಿಕಲ್ 370 ತೆಗೆದುಹಾಕಲಾಯಿತು ಎಂದರು

ಯಡಿಯೂರಪ್ಪ ಸಿಎಂ ಆಗುವ ಮುನ್ನ ಬರಗಾಲ ಇತ್ತು. ಯಡಿಯೂರಪ್ಪ ಸಿಎಂ ಆದ ನಂತರ ಮಹಾಪ್ರವಾಹ ಆಗಿ ಬೆಳೆ ಮನೆ ಎಲ್ಲವೂ ಸಹ ಹಾನಿಯಾಗಿತ್ತು. ಯಡಿಯೂರಪ್ಪ ಏಕಾಂಗಿಯಾಗಿದ್ದರು ಕ್ಯಾಬಿನೇಟ್ ಸಹ ಇನ್ನು ಆಗಿರಲಿಲ್ಲ. ಪ್ರತಿ ಹೆಕ್ಟರ್ ಗೆ 14 ಸಾವಿರ, ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ಪರಿಹಾರ ಕೊಟ್ಟಿದ್ದರು. ಈಗಲೂ ಸಹ ಬರಗಾಲ ಇದೆ ಆದರೆ ಕಾಂಗ್ರೇಸ್ ಸರ್ಕಾರ ಬರೀ 2 ಸಾವಿರ ಕೊಡುತ್ತಿದ್ದಾರೆ ಎಂದು ತಿಳಿಸಿದರು.

ನೇಹಾ ಹತ್ಯೆ ಪ್ರಕರಣ ಆಗಿರಬಹುದು, ಅಧಿವೇಶ ನಡೆಯುವ ಸಂದರ್ಭದಲ್ಲಿ ಪರಿಶಿಷ್ಠ ಜಾತಿಯ ಮಹಿಳೆಯನ್ನ ವಿವಸ್ತ್ರಗೊಳಿಸಲಾಯ್ತು. ಅಲ್ಲಿಗೆ ಯಾವ ಸಚಿವರು ಶಾಸಕರು ಹೋಗಿ ಅವರಿಗೆ ಸಾಂತ್ವಾನ‌ ಹೇಳುವ ಕೆಲಸ ಮಾಡಲಿಲ್ಲ.‌ ಮೊನ್ನೆಯಷ್ಟೆ ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಆಗಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಕಾನೂನು ಸುವ್ಯವಸ್ಥೆ ‌ಸಂಪೂರ್ಣ ಹಾಳಾಗಿದೆ ಎಂದು ತಿಳಿಸಿದರು.

ದೇವರಿಗೆ ನಾವು ಪ್ರಾರ್ಥನೆ ಮಾಡುತ್ತೇವೆ ನಮಗೆ ಒಳ್ಳೆದು ಮಾಡಿ ಅಂತ ದೇವರಿಗೆ ಮೊರೆ ಇಡುತ್ತೇವೆ. 7 ನೇ ತಾರೀಕೂ ಮತ್ತೊಂದು ಪುಷ್ಪ ಅರ್ಚನೆ ಮಾಡಿ ದೇವರಿಗೆ ಬೇಡಿ, ಮತ್ತೊಮ್ಮೆ ಮೋದಿ ಪ್ರಧಾನಿಯಾಗಲಿ ಅವರ ಆಯಸ್ಸು ವೃದ್ದಿಸಲಿ ಎಂದು ಪ್ರಾರ್ಥನೆ ಮಾಡಿ, ಕಾಂಗ್ರೆಸ್ ಪಕ್ಷದವರು ಅಧಿಕಾರ ಹಣದ ಬಲದಿಂದ ಗೆಲ್ಲಲು ಹೊರಟಿದ್ದಾರೆ. ಅಪ್ಪಿ ತಪ್ಪಿ ಇಲ್ಲಿ ಕಾಂಗ್ರೇಸ್ ಗೆದ್ದರೂ ಸಹ ದೇಶಾದ್ಯಂತ ಕಾಂಗ್ರೇಸ್ ಗೆಲ್ಲೋದು ಕೇವಲ 40 ಜನ ಎಂಪಿಗಳು, ಇಲ್ಲಿ ಗೆದ್ದರೂ ಸಹ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಬೇಕಾಗುತ್ತದೆ. ಬಿಜೆಪಿ ಇಲ್ಲಿ ಗೆದ್ದರೆ ದೇಶಾದ್ಯಂತೆ 400 ಎಂಪಿಗಳು ಗೆಲ್ಲುತ್ತಾರೆ. ಶೆಟ್ಟರ್ ಅವರನ್ನು ಗೆಲ್ಲಿಸುವುದರ ಮೂಲಕ ಮೋದಿ ಕೈ ಬಲಪಡಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದರು.

ಈ ವೇಳೆ ಸಂಸದೆ ಮಂಗಳ ಅಂಗಡಿ, ಮಾಜಿ ಶಾಸಕರಾದ ಅನಿಲ ಬೆನಕೆ, ಸಂಜಯ ಪಾಟೀಲ್, ಬಿಜೆಪಿ ಜಿಲ್ಲಾದ್ಯಕ್ಷ ಶುಭಾಸ ಪಾಟೀಲ್, ಧನಂಜಯ್ ಜಾಧವ್, ಮುರಗೇಂದ್ರಗೌಡಾ ಪಾಟೀಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!