ಟೇಬಲ್ ಬೆಟ್ಟಿಂಗ್ ಶುರು? ಗೆಲ್ಲೋದು‌ ನಾವೇ !

BJP ಯವರ ಪ್ರಕಾರ ಲೀಡ್ ಆಗುವ ಕ್ಷೇತ್ರಗಳು. ಬೆಳಗಾವಿ ದಕ್ಷಿಣ, ಬೆಳಗಾವಿ ಉತ್ತರ, ಅರಭಾವಿ, ಗೋಕಾಕ, ಬೆಳಗಾವಿ ಗ್ರಾಮೀಣ. ರಾಮದುರ್ಗ, ಬೈಲಹೊಂಗಲ

ಕಾಂಗ್ರೆಸ್ ಪ್ರಕಾರ ಲೀಡ್ ಆಗುವ ಕ್ಷೇತ್ರಗಳು.

ಬೈಲಹೊಙಗಲ, ಸವದತ್ತಿ, ರಾಮದುರ್ಗ, ಬೆಳಗಾವಿ ಗ್ರಾಮೀಣ, ಬೆಳಗಾವಿ ಉತ್ತರ, ಗೋಕಾಕ.

ಸರಿ ಸಮ ಆಗುವ ಕ್ಷೇತ್ರಗಳು.

ಬೆಳಗಾವಿ ಗ್ರಾಮೀಣ, ರಾಮದುರ್ಗ, ಬೈಲಹೊಂಗಲ

ಬೆಳಗಾವಿ.

ಮತದಾನ ಮುಗಿದು ಯಂತ್ರಗಳು ಸ್ರ್ಟ್ರಾಂಗ್ ರೂಂದ ಸೇರುತ್ತುದ್ದಂತೆಯೇ ಅಭ್ಯರ್ಥಿಗಳ ಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ.

ಸಧ್ಯಕ್ಕಂತೂ ಎರಡೂ ಪಕ್ಷದ ವರು ನಾವೇ ಗೆಲ್ಲೊದು ಎನ್ನುತ್ತಿದ್ದಾರೆ. ಆದರೆ ಎರಡೂ ಪಕ್ಷದಲ್ಕಿಇಲ್ಲದವರು ಬಿಜೆಪಿನೇ ಗೆಲ್ಲೊದು! ಯಾರಾದರೂ ಕನಿಷ್ಟ 20 ಲಕ್ಷ ಟೇಬಲ್ ಬೆಟ್ಟಿಂಗ್ ರೆಡಿ ಇದ್ದರೆ ಹೇಳಿ ಎಂದು ಕೇಳುತ್ತಿದ್ದಾರೆ.

ಹೀಗಾಗಿ ಯಾರದ್ದು ಸರಿ ಎನ್ನುವ ಗೊಂದಲ ಶುರುವಾಗಿದೆ. ಮತ್ತೊಂದು ಮೂಲಗಳ ಪ್ರಕಾರ ಮತದಾನ ಪ್ರಮಾಣ ಹೆಚ್ಚಳ ಮತ್ತು ಜನರ ನಾಡಿಮಿಡಿತ ಗಮನಿಸಿದರೆ ಬಿಜೆಪಿ ಕಷ್ಟದಲ್ಲಿ ಗೆಲುವು ಸಾಧಿಸಬಹುದು ಎನ್ನುವ ಮಾತಿದೆ.

ಅದಕ್ಕೆ ಅವರು ತಮ್ಮದೇ ಆದ ರೀತಿಯಲ್ಲಿ ಕ್ಷೇತ್ರವಾರು ವಿವರಣೆ ಸಹ ಕೊಡುತ್ತಾರೆ.

ಜಗದೀಶ ಶೆಟ್ಟರ್

Bjp ಗೆ ಸವದತ್ತಿಯಲ್ಲಿ ಪಂಚಮಸಾಲಿ ಮತಗಳು ಕೈ ಕೊಟ್ಟಿದ್ದರಿಂದ ಅಲ್ಲಿ ಕಾಂಗ್ರೆಸ್ ಗೆ ಸ್ವಲ್ಪ ಮಟ್ಟಿಗೆ ಪ್ಲಸ್ ಆಯಿತು ಎನ್ನಲಾಗುತ್ತಿದೆ ಇದನ್ನು ಹೊರತುಪಡಿಸಿದರೆ ಬೈಲಹೊಂಗಲದಲ್ಲಿ ಸ್ಥಳೀಯ ಶಾಸಕರನ್ನು ಅಷ್ಟೊಂದು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಅಷ್ಟೇ ಅಲ್ಲ ಅಲ್ಲಿನ ಇನ್ನುಳಿದ ಕಾಂಗ್ರೆಸ್ ನವರನ್ಬು ಕರೆದು ಮಾತನಾಡಲಿಲ್ಲ ಎನ್ನುವ ಮಾತಿದೆ. ಹೀಗಾಗಿ ಅಲ್ಲಿನಕೂಡ ಬಿಜೆಪಿಗೆ ಪ್ಲಸ್ ಆಗುತ್ತೆ ಎನ್ನುವ ವಿವರಣೆಯನ್ನು ಕೆಲವರು ನೀಡುತ್ತಾರೆ.

ಇದನ್ಬು ಹೊರತುಪಡಿಸಿದರೆ ರಾಮದುರ್ಗ ಕ್ಷೇತ್ರದಲ್ಲಿ ಬಿಜೆಪಿಗೆ ಈ ಬಾರಿ ಅನುಕೂಲ ಆಗಿದೆ ಎನ್ನುವ ಮಾತಿದೆ. ಅಲ್ಲಿ ಚಿಕ್ಕರೇವಣ್ಣ ಮತ್ತು ಮಹಾದೇವಪ್ಪ ಯಾದವಾಡರ ಶ್ರಮ ಇಲ್ಲಿ ಸ್ವಲ್ಪಮಟ್ಟಿಗೆ ಕೆಲಸ ಮಾಡಿತು ಎನ್ನುವ ಮಾತಿದೆ.

ಅರಭಾವಿ, ಗೋಕಾಕ ವಿಧಾನಸಭಾ ಕ್ಷೇತ್ರಕ್ಕೆ ಬಂದರೆ , ಅಲ್ಲಿನ ಬಿಜೆಪಿ ಲೀಡ್ ಕಟ್ ಮಾಡೋಕೆ ಆಗಲ್ಲ ಎನ್ನುವ ಮಾತುಗಳಿವೆ. ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹಿಡಿತ ತಪ್ಪಿಸಲು ಆಗಲ್ಲ ಎನ್ನಲಾಗುತ್ತಿದೆ. ಇಲ್ಲಿ ಜಾತಿ ಮೀರಿ ಜಾರಕಿಹೊಳಿ ಕುಟುಂಬದ ಮೇಲೆ ಜನರ ವಿಶ್ವಾಸವಿದೆ.

ಬೆಳಗಾವಿ ದಕ್ಷಿಣಕ್ಕೆ ಬಂದರೆ. ಈ ಬಾರಿ ಬಿಜೆಪಿಗೆ ಅತೀ ಹೆಚ್ಚು ಲೀಡ್ ಕೊಡುವ ಕ್ಷೇತ್ರ ಇದು ಎನ್ನುವ ಮಾತಿದೆ. ಗಮನಿಸಬೇಕಾದ ಸಂಗತಿ ಎಂದರೆ ಪ್ರತಿ ಬಾರಿ ಲೋಕಸಭೆಯಲ್ಲಿ ಬಿಜೆಪಿ ಗೆಲುವಿನಲ್ಲಿ ದಕ್ಷಿಣ ಕ್ಷೇತ್ರ ಮಹತ್ವದ ಪಾತ್ರ ವಹಿಸಿದೆ. ಈ ಬಾರಿ ಅದನ್ನು ಕೊನೆಪಕ್ಷ ಸರಿಸಮ ಮಾಡಬೇಕೆಂದು ಕಾಂಗ್ರೆಸ್ ಮಾಡಿದ ಕಸರತ್ತು ಅಷ್ಟಿಷ್ಟಲ್ಲ.ಆದರೆ ಅದನ್ನು ಬ್ರೆಕ್ ಮಾಡಲು ಶಾಸಕ ಅಭಯ ಪಾಟೀಲರ ತಂಡ ಯಶಸ್ವಿಯಾಯಿತು ಎನ್ನುವುದು ಸುಳ್ಳಲ್ಲ.

ಮತದಾನ ಹೆಚ್ಚಾದರೆ ಕಾಂಗ್ರೆಸ್ ಗೆ ಖತರಾ?!

ಪ್ರತಿ ಚುನಾವಣೆ ಬಂದಾಗ ಒಂದು ಮಾತು ಕೇಳಿ ಬರುತ್ತಿದೆ. ಯಾವಾಗ ಮತದಾನ ಕಡಿಮೆ ಆಯಿತು ಅಂದರೆ ಬಿಜೆಪಿಗೆ ಕಷ್ಟ. ಒಂದು ವೇಳೆ ಮತದಾನ ಪ್ರಮಾಣ ಹೆಚ್ಚಾದರೆ ಕಾಂಗ್ರೆಸ್ ಗೆ ಖತರಾ ಎನ್ನುವ ಮಾತಿದೆ.

ಈಗ ಕಳೆದ ಬಾರಿಗಿಂತ ಈ ಸಲ ಮತದಾನ ಪ್ರಮಾಣದಲ್ಲಿ ಹೆಚ್ಚಳ ಕಂಡು ಬಂದಿದೆ.ಹೀಗಾಗಿ ಇದನ್ನು ಯಾವ ರೀತಿ ಅರ್ಥೈಸಿಕೊಳ್ಳುತ್ತೀರಿ ಎನ್ನುವುದು ತಮಗೆ ಬಿಟ್ಟ ವಿಷಯ.

ಮತ್ತೊಂದು ಸಂಗತಿ ಎಂದರೆ, ಬೆಳಗಾವಿ ಗ್ರಾಮೀಣ ಮತ್ತು ಉತ್ತರ ಕ್ಷೇತ್ರದಲ್ಲಿ ಯಾವ ರೀತಿ ಆಗಿದೆ ಎನ್ನುವುದು ಗೊತ್ತಾಗುತ್ತಿಲ್ಲ. ಕೆಲವರ ಪ್ರಕಾರ ಗ್ರಾಮೀಣದಲ್ಲಿ ಕಾಂಗ್ರೆಸ್ ಸ್ವಲ್ಪ ಮಟ್ಟಿಗೆ ಪ್ಲಸ್ ಆಗಿದೆ ಎನ್ನುವ ಮಾತಿದೆ.

ಆದರೆ ಇದನ್ನು ಕೆಲವರು ಒಪ್ಪುತ್ತಿಲ್ಲ. ಇನ್ನು ಉತ್ತರದಲ್ಲಿ ಸ್ವಲ್ಪ ಮಟ್ಟಿಗೆ ಕಾಂಗ್ರೆಸ್ ಪ್ಲಸ್ ಆದರೂ ಅಚ್ಚರಿ ಪಡಬೇಕಿಲ್ಲ ಎನ್ನುವ ಮಾತುಗಳಿವೆ. ಆದರೆ ಮೋದಿ ಪ್ರಭಾವ ಇಲ್ಲಿ ಬಹಳ ಕೆಲಸ ಮಾಡಿದ್ದರಿಂದ ಮತದಾನ ಪ್ರಮಾಣ ಹೆಚ್ಚಾಗಿದೆ ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!