AKBMS ಗೆ ಹಾರನಹಳ್ಳಿಯವರೇ ಯಾಕೆ ಬೇಕು ಗೊತ್ತೆ?

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಚುಕ್ಕಾಣಿ ಹಿಡಿದು ಅಭಿವೃದ್ಧಿಯ ಪಥದಲ್ಲಿ ಮುನ್ನೆಡೆಸುತ್ತಿರುವ ಅಶೋಕ್ ಹಾರನಹಳ್ಳಿಯವರು ತಮ್ಮ ಸಮಾಜಮುಖಿ ಕೆಲಸದಿಂದ ಮತ್ತು ಸಮಾಜ ಬಾಂಧವರೊಡಗಿನ ನಿರಂತರ ಸಂಪರ್ಕದಿಂದ ಮಹಾಸಭಾಕ್ಕೆ ಮತ್ತು ಅದರ ಬೆಳವಣಿಗೆಗೆ ಕಾರಣಿಕರ್ತರಾಗಿದ್ದಾರೆ .

ಹಾರನಹಳ್ಳಿ ಅವರು ಮಹಾಸಭಾದ ಅಧ್ಯಕ್ಷ ಪದವಿಗೆ ಬಂದ ಹೊಸತರಲ್ಲಿ ಹಲವು ಜನರಿಗೆ ಇವರಿಂದ ಸಮಾಜಕ್ಕೆ ಹೇಗೆ ನೆರವಾಗುತ್ತದೆ, ಇವರ ಬಿಡುವಿಲ್ಲದ ಕೆಲಸದ ನಡುವೆ ಸಮಾಜಕ್ಕೆ ಸಮಯ ಎಲ್ಲಿ ಕೊಡಲು ಸಾಧ್ಯ ಎನ್ನುವ ಮಾತುಗಳನ್ನು ಆಡಿದ್ದರು.ಆದರೆ ಅವರ ಸಮಾಜದ ಸರ್ವತೋಮುಖ ಅಭಿವೃದ್ಧಿಯ ಕಡೆಗೆ ತೆಗೆದುಕೊಳ್ಳುವ ನಿರ್ಧಾರ ನೋಡಿ ಮತ್ತು ಸಮಾಜದ ಎಲ್ಲಾ ವರ್ಗದ ಜನರ ಆಶಯಗಳಿಗೆ ಪೂರಕವಾದ ಕಾರ್ಯಕ್ರಮಗಳನ್ನು ನೋಡಿ, ಇವರೇ ಸಮಾಜಕ್ಕೆ ಸೂಕ್ತ ಎನ್ನುವ ಅಭಿಪ್ರಾಯಕ್ಕೆ ಬಂದಿರುವುದು ಸಹಜವೇ.

ಇವರ ವಿರೋಧಿಗಳೂ ಕೂಡಾ ಹಲವು ಸಮಯದಲ್ಲಿ ಇವರ ಕಾರ್ಯವೈಖರಿಯನ್ನು ಹಾಡಿ ಹೊಗಳಿದ್ದುಂಟು.

ಬ್ರಾಹ್ಮಣ ಸಮಾಜಕ್ಕೆ ಸಾಮಾಜಿಕ, ವೈದ್ಯಕೀಯ, ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ನಿರಂತರವಾದ ಕಾರ್ಯಕ್ರಮ ರೂಪಿಸಿ, ಮಹಿಳೆಯರು ಮತ್ತು ಯುವಜನತೆಯಲ್ಲಿ ಮಹಾಸಭಾದ ಇರುವಿನ ಅವಶ್ಯಕತೆಯನ್ನು ಕರ್ನಾಟಕ ರಾಜ್ಯದಲ್ಲಿ ನಿರಂತರ ಪ್ರವಾಸ ಮಾಡುತ್ತಾ ಬ್ರಾಹ್ಮಣ ಸಂಘಟನೆಗಳಿಗೆ ಶಕ್ತಿಯನ್ನು ತುಂಬುತ್ತಿರುವ, ನಮ್ಮ ಅಧ್ಯಕ್ಷರು ನಮ್ಮ ಹೆಮ್ಮೆ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ ಸನ್ಮಾನ್ಯ ಶ್ರೀ ಅಶೋಕ ಹಾರನಹಳ್ಳಿ ರವರು ಮುಂದಿನ ಅವಧಿಗಳಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾಗಿ ಮುಂದುವರಿಯಬೇಕೆಂದು ಸಮಾಜದ ಹಿರಿಯ ಮುಖಂಡರುಗಳ ನೇತೃತ್ವದಲ್ಲಿ ಸಭೆ ಸೇರಿ, ಶ್ರೀ ಅಶೋಕ ಹಾರನಹಳ್ಳಿ ಅವರನ್ನು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ಒಪ್ಪಿಸುವ ಕೆಲಸ ಮಾಡಿರುವುದು ಸಂತಸದ ವಿಷಯ.

ಸಭೆಯಲ್ಲಿ ಮಹಾಸಭಾ ಉಪಾಧ್ಯಕ್ಷರು, ಜಯನಗರ ಕ್ಷೇತ್ರದ ಶಾಸಕ ಸಿ ಕೆ ರಾಮಮೂರ್ತಿ, ರಾಜೇಂದ್ರ ಪ್ರಸಾದ್, ಕೆ ಆರ್ ಪುರಂ‌ ಮುರಳಿಧರನ್ ಕಾರ್ತಿಕ್ ಬಾಪಟ್ ರಾಘವೇಂದ್ರ ಭಟ್, ಛಾಯಾಪತಿ, ಸುಧಾಕರ ಬಾಬು, ಕಾರ್ಯದರ್ಶಿ ಶ್ರೀಧರ ಮೂರ್ತಿ, ಖಜಾಂಚಿಗಳಾದ ವಿ ಎಸ್ ನಾಯಕ್, ಸಂಘಟನಾ ಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿಗಳು, ಮತ್ತಿತರ ಬ್ರಾಹ್ಮಣ ಮುಖಂಡರುಗಳೆಲ್ಲರು ಬ್ರಾಹ್ಮಣ ಸಮಾಜವನ್ನು ವಿನೂತನ ಯೋಜನೆಗಳೊಂದಿಗೆ ಮುನ್ನಡೆಸುತ್ತಿರುವ, ಸಮಾಜದ ಹಿತದೃಷ್ಟಿಯಿಂದ ದೂರದೃಷ್ಟಿತ್ವ ಯೋಜನೆಗಳನ್ನು ಹಮ್ಮಿಕೊಂಡಿರುವ ಶ್ರೀ ಅಶೋಕ ಹಾರನಹಳ್ಳಿ ಅವರನ್ನು ಭಾರಿ ಬಹುಮತದೊಂದಿಗೆ ಗೆಲ್ಲಿಸುವುದರೊಂದಿಗೆ, ಮತ್ತೊಮ್ಮೆ ಮಹಾಸಭಾಧ್ಯಕ್ಷರನ್ನಾಗಿ ಮಾಡುವ ಸಂಕಲ್ಪವನ್ನು ಕೈಗೊಂಡಿರುವುದು ಸ್ವಾಗತಾರ್ಹ.

ಮುಂದಿನ ದಿನಗಳಲ್ಲಿ ನಡೆಯಲಿರುವ ಕಾರ್ಯಕಾರಿಣಿಯಲ್ಲಿ ಈ ಸಂಬಂಧ ನಿಲುವಳಿಯನ್ನು ಮಂಡಿಸುವ ಮೂಲಕ ಹೆಚ್ಚಿನ ಕಾರ್ಯಕರ್ತ ಬಂಧುಗಳ ಆಶಯದೊಂದಿಗೆ ಮುನ್ನಡೆಯನ್ನು ಸಾಧಿಸುವ.

ಇತರರೂ ಈ ಕಾರ್ಯದಲ್ಲಿ ಕೈಜೋಡಿಸುತ್ತಾರೆ ಎಂಬ ನಂಬಿಕೆಯಿದೆ

ಅನಂತಕೃಷ್ಣ ಶರ್ಮ ಬಿ ಎ
ಬೆಂಗಳೂರು

Leave a Reply

Your email address will not be published. Required fields are marked *

error: Content is protected !!