ಬೆಳಗಾವಿ.
ಭರ್ತಿ ತುಂಬಿದ ರೈಲಿನಲ್ಲೇ ಒಬ್ಬರಿಗಲ್ಲ ಬರೊಬ್ಬರಿ ನಾಲ್ಕೈದು ಜನರಿಗೆ ಚೂರಿ ಇರಿದು ಒಬ್ನನ ಸಾವಿಗೆ ಕಾರಣವಾದ ಹಂತಕ ಬರೊಬ್ವರಿ 40 ನಿಮಿಷ ಅದೇ ರೈಲಿನಲ್ಲಿ ಚಲಿಸಿದ್ದಾನೆ.
ಅದರೆ ಅವನು ರೇಲ್ವೆ ಪೊಲೀಸರ ಕಣ್ಣಿಗೆ ಬಿದ್ದಿಲ್ಲ. ಅಷ್ಟೇ ಅಲ್ಲ ಹಂತಕ ರೇಲ್ವೆ ಸ್ಟೇಷನ್ ದಲ್ಲಿ ಇಳಿದು ಹೋಗುವಾಗ ಪೊಲೀಸರು ಕಡ್ಲೆಪುರಿ ತಿನ್ಬುತ್ತ ಕುಳಿತಿದ್ದರು.

ಈಗ ಆತ ಖಾಕಿ ಕಣ್ತಪ್ಪಿಸಿ ಓಡಿ ಹೋದ ಮೇಲೆ ಪೊಲೀಸರು ಆತನ ರೇಖಾ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಅಂದರೆ ಹೈಟೆಕ್ ಯುಗದಲ್ಲಿ ನಮ್ಮ ಪೊಲೀಸಿಂಗ್ ವ್ಯವಸ್ಥೆ ಎಷ್ಟರ ಮಟ್ಟಿಗೆ ಹೊಂದಿಕೊಂಡಿದೆ ಎನ್ನುವುದು ಇದರಿಂದ ಸ್ಪಷ್ಡವಾಗಿ ಗೊತ್ತಾಗುತ್ತದೆ.
ಚಲಿಸುವ ರೈಲಿನಲ್ಲಿ ಟಿಕೆಟ್ ಕೇಳಿದ್ದಕ್ಕಾಗಿ ಚೂರಿ ಇರಿದ ಭಂಡತನ ತೋರಿದ ಹಂತಕ ಅದೇ ರೈಲಿನಲ್ಲಿ ಐಷಾರಾಮಿಯಾಗಿ ಪ್ರಯಾಣಿಸುತ್ತಾನೆ ಅಂದರೆ ರೇಲ್ವೆಯಲ್ಲಿ ಪ್ರಯಾಣಿಕರ ಸುರಕ್ಷತೆ ಬಗ್ಗೆ ಅನುಮಾನ ಮೂಡುತ್ತದೆ.
ಆದ್ದರಿಂದ ರೇಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಸಿಬ್ಬಂದಿ ಕೊರತೆ ಕುಂಟು ನೆಪ ಹೇಳೊದನ್ನು ಬಿಟ್ಡು ಈ ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದವರ ಮೇಲೆ ಕ್ರಮ ತೆಗೆದುಕೊಳ್ಳುವ ಕೆಲಸ ಮಾಡಬೇಕಿದೆ.
ಮುಸುಕುಧಾರಿ ಹಂತಕ

ಪುದುಚೇರಿ-ದಾದರ್ (ಚಾಲುಕ್ಯ ಎಕ್ಸ್‌ಪ್ರೆಸ್)ರೈಲಿನಲ್ಲಿ ಟಿಕೆಟ್ ಕೇಳಿದ್ದಕ್ಕೆ, ಮುಸುಕುಧಾರಿಯೊಬ್ಬ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದನು., ಈ ವೇಳೆ ಓರ್ವ ಮೃತಪಟ್ಟು ಐವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
. ಉತ್ತರ ಪ್ರದೇಶ ಮೂಲದ ಗ್ರುಪ್ ಡಿ ನೌಕರ ದೇವರ್ಷಿ ವರ್ಮಾ (24) ಮೃತಪಟ್ಟವ ಎಂದು ಹೇಳಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೆದ ಮತ್ತು ಖಾನಾಪುರ ಪೊಲೀಸ್ ಇನ್ಸ್‌ಪೆಕ್ಟರ್ ರಾಮಚಂದ್ರ ನಾಯಕ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯ ರೇಖಾಚಿತ್ರ ಮತ್ತು ಫೋಟೋ ಬಿಡುಗಡೆ ಮಾಡಿದ್ದಾರೆ