ಹಿಂದುತ್ವ ಮರೆತರೆ ದೇಶಕ್ಕೆ ಅಪಾಯ-VHP

ವಿಎಚ್ಪಿ ಮುಖಂಡ ಪರಾಂಡೆ ಅಭಿಮತ
`ಹಿಂದೂಗಳ ಮರೆತರೆ ದೇಶಕ್ಕೆ ಅಪಾಯ’

ಬೆಳಗಾವಿ:
ಮುಸ್ಲೀಂರ ತುಷ್ಠೀಕರಣದಲ್ಲಿ ಹಿಂದೂಗಳ ಹಿತವನ್ನು ಮರೆತರೆ ದೇಶಕ್ಕೆ ಅಪಾಯ ಎಂದು ವಿಶ್ವ ಹಿಂದೂ ಪರಿಷತ್ತನ ಕೇಂದ್ರಿಯ ಸಂಘಟನಾ ಕಾರ್ಯದಶರ್ಿ ಮಿಲಿಂದ್ ಪರಾಂಡೆ ಹೇಳಿದರು,


ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುವ ಸರ್ಕಾರಗಳು ಹಿಂದೂ ಹಿತ ಕಾಪಾಡಬೇಕು. ಏಕೆಂದರೆ, ಹಿಂದೂ ಹಿತದಲ್ಲಿಯೇ ದೇಶದ ಹಿತವಿದೆ ಎಂದರು.
ರಾಜ್ಯ ಸರ್ಕಾತ ಸಂಪೂರ್ಣವಾಗಿ ಮುಸ್ಲಿಂ ತುಷ್ಟೀಕರಣ ನೀತಿ ಅನುಸರಿಸುತ್ತಿರುವ ಪರಿಣಾಮ ರಾಜ್ಯದ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಕಲಬುಗರ್ಿ ಸೇರಿದಂತೆ ಹಲವೆಡೆ ನಡೆದ ಕಳವಳಕಾರಿ ಘಟನೆಗಳು ನಡೆದಿವೆ ಎಂದು ಹೇಳಿದರು.


ಹಿಂದೂ ಸಮಾಜದ ಮಹಿಳೆಯರು, ಹಿಂದುಳಿದ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯಗಳಾಗಿವೆ. ಬಲಾತ್ಕಾರ ಆಗಿವೆ, ಹತ್ಯೆಯಾಗಿವೆ. ಗೋಹತ್ಯೆ ಪ್ರಕರಣ ಹೆಚ್ಚಾಗಿವೆ. ಗೋರಕ್ಷಕರ ಮೇಲೆ ದಾಳಿಗಳಾಗುತ್ತಿವೆ. ಸಾಧು ಸಂತರು, ಮಹಿಯರು ಸುರಕ್ಷಿತವಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು

Leave a Reply

Your email address will not be published. Required fields are marked *

error: Content is protected !!