ಬೆಂಗಳೂರು. ಬೈಲಹೊಂಗಲ ಕಾಂಗ್ರೆಸ್ ಶಾಸಕ ಮಹಾಂತೇಶ್ ಕೌಜಲಗಿ ಕಾರು ವಿಧಾನಸೌಧ ಮುಂಭಾಗದಲ್ಲೇ ಅಪಘಾತಕ್ಕೀಡಾಗಿದೆ.
ವಿಧಾನಸೌಧದಿಂದ ಹೊರಕ್ಕೆ ಬರ್ತಿದ್ದ ವೇಳೆ ಶಾಸಕರ ಕಾರ್ ಗೆ ಮತ್ತೊಂದು ಕಾರ್ ಡಿಕ್ಕಿ ಹೊಡೆದಿದೆ .
ಅತಿವೇಗವಾಗಿ ಬಂದ ಕಾರು ಚಾಲಕ ಶಾಸಕರ ಕಾರಿಗೆ ಗುದ್ದಿದ್ದಾನೆ ಎನ್ನಲಾಗಿದೆ. ಘಟನೆಯಲ್ಲಿ ಶಾಸಕರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಅಪಾಯದಿಂದ ಪಾರಾಗಿದ್ದಾರೆ.

ಅಪಘಾತವಾಗ್ತಿದ್ದಂತೆ ಶಾಸಕರು ಬೇರೊಂದು ಕಾರ್ ನಲ್ಲಿ ಆಸ್ಪತ್ರೆಗೆ ತೆರಳಿದರು ಎಂದು ತಿಳಿದು ಬಂದಿದೆ.
ಕಬ್ಬನ್ ಪಾರ್ಕ್ ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.