ವಿದ್ಯಾರ್ಥಿ ಭವಿಷ್ಯದ ಜೊತೆ ಚೆಲ್ಲಾಟ ಇಲ್ಲ- ಸ್ಪಷ್ಟನೆ

ಬೆಳಗಾವಿ.

ಶುಲ್ಕ ಕಟ್ಡದ ವಿದ್ಯಾರ್ಥಿ ಭವಿಷ್ಯದ ಜೊತೆ ಚೆಲ್ಲಾಟ ಎನ್ನುವ ವರದಿ ಸಂಪೂರ್ಣ ಸುಳ್ಳು ಎಂದು ಮಹಿಷವಾಡಗಿಯ ಪದ್ಮಾವತಿ ಇಂಟರ್ ನ್ಯಾಷನಲ್ ಶಾಲೆಯ ಆಡಳಿತಾಧಿಕಾರಿ ರಾಹುಲ್ ಕೋಟಗಿ ಸ್ಪಷ್ಟಪಡಿಸಿದ್ದಾರೆ.

ವಿದ್ಯಾರ್ಥಿ ಆರೋಪಿಸಿದಂತೆ ಸಂಸ್ಥೆ ನಡೆದುಕೊಂಡಿಲ್ಲ. ಶುಲ್ಕ ಕಟ್ಟದಿದ್ದರೂ ಕೂಡ ವಿದ್ಯಾರ್ಥಿ ಡಾಂಗೆ ಪರೀಕ್ಷೆಗಿಂತ ಮೂರು ದಿನ ಮೊದಲೇ ಹಾಲ್ ಟಿಕೆಟ್ ತೆಗೆದುಕೊಂಡು ಹೋಗಿದ್ದಾನೆ. ಅದಕ್ಕೆ ನಮ್ಮ ಬಳಿ ದಾಖಲೆಗಳಿವೆ. ಮೇಲಾಗಿ ಪರೀಕ್ಷೆ ಮುಗಿದು ಬಹಳ ತಿಂಗಳಾಗಿವೆ.

ಒಂದು ವೇಳೆ ಹಾಲ್ ಟಿಕೆಟ್ ಸಿಗದಿದ್ದರೆ ಆಗಲೇ ಅಥಣಿಯಲ್ಲಿರುವ ಬಿ ಇಓ ಕಚೇರಿಗೆ ಹೋಗಿ ಹೇಳಬಹುದಿತ್ತು. ಅದನ್ನು ಬಿಟ್ಟು ಅನಗತ್ಯವಾಗಿ ಈಗಗೊಂದಲ ಸೃಷ್ಟಿಸಿದ್ದಾನೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈಗಾಗಲೇ ಈ ಬಗ್ಗೆ ಬಿ ಇಓ ಕಚೇರಿಗೆ ಎಲ್ಲ ದಾಖಲೆಗಳನ್ನು ಕೊಡಲಾಗಿದೆ ಎಂದು ಅವರು ಹೇಳಿದರು.

ಈ ಹಿಂದೆ ನಾವೇ ಅವನ‌ ಭವಿಷ್ಯ ಹಾಳಾಗಬಾರದು ಎನ್ನುವ ಕಾರಣದಿಂದ ಇಂಟರನಲ್ ಅಂಕಗಳನ್ನು ಹೆಚ್ವಿಗೆ ಕೊಟ್ಟಿದ್ದೇವೆ. ಅದರ ದಾಖಲೆಗಳನ್ನು ಯಾರು ಬೇಕಾದವರು ಪರೀಶಿಲಿಸಬಹುದು ಎಂದರು.

ಗಮನಿಸಬೇಕಾದ ಸಂಗತಿ ಎಂದರೆ ಕಳೆದ 8 ನೇ ತರಗತಿಯಿಂದ ಅವನು ಶಾಲೆಯ ಶುಲ್ಕ ಸರಿಯಾಗಿ ಪೂರ್ತಿ ಕಟ್ಟಲಿಲ್ಲ. ಆದರೂ ನಾವು ಅವನ‌‌ ಭವಿಷ್ಯ ಹಾಳಾಗಬಾರದು ಎಂದು ಸುಮ್ಮನಿದ್ದೇವು. ಮಧ್ಯದಲ್ಲಿ ಶಾಲಾ ಶುಲ್ಕ ಕೇಳಿದ್ದು ನಿಜ. ಅದರಲ್ಲಿ ತಪ್ಪಿಲ್ಲ ಎಂದರು.

ಮಹಿಷವಾಡಗಿ ಯ ನಮ್ಮ ಶಾಲೆಗೆ ಉತ್ತಮ‌ ಹೆಸರಿದೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಎಲ್ಲ ಅನುಕೂಲತೆಗಳನ್ನು ಇಲ್ಲಿ ಒದಗಿಸಿಕೊಡಲಾಗುತ್ತಿದೆ ಎಂದು ಕೋಟಗಿ ಸ್ಪಷ್ಡಪಡಿಸಿದರು.

Leave a Reply

Your email address will not be published. Required fields are marked *

error: Content is protected !!