ಲೋಕಾ ಭೆಟ್ಡಿ ಇದು ಆರಂಭ..
ಐತಿ ಮುಂದ ಮಾರಿ ಹಬ್ಬ. ಭ್ರಷ್ಟರ ಹೆಡಮುರಿ ಕಟ್ಟಲು ಲೋಕಾ ಸಜ್ಜು.
ಪಾಲಿಕೆ ಆಯುಕ್ತ ಲೋಕೇಶಕುಮಾರ ಪತ್ರದ ಎಫೆಕ್ಟ್..
ಈ ಹಿಂದೆ ಪಾಲಿಕೆ ಸಭೆಯಲ್ಲಿ ಲೋಕಾ ತನಿಖೆ ಬಗ್ಗೆ ಠರಾವ್ ಆಗಿತ್ತು.
ಬೆಳಗಾವಿ.
ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಮೇಲೆ ಈಗ ಲೋಕಾಯುಕ್ತರ ಹದ್ದಿನ ಕಣ್ಣು ಬಿದ್ದಿದೆ. ಹೀಗಾಗಿ ಪಾಲಿಕೆಯಲ್ಲಿನ ಭ್ರಷ್ಟರಿಗೆ ಈಗ ಒಂದು ರೀತಿಯ ನಡುಕ ಶುರುವಾಗಿದೆ.
ಪಾಲಿಕೆ ಆಯುಕ್ತ ಲೋಕೇಶ್ ಅವರೂ ಸಹ ಕೆಲವೊಂದು ಪ್ರಕರಣಗಳನ್ನು ಉಲ್ಲೇಖಿಸಿ ಲೋಕಾಯುಕ್ತರಿಗೆ ಪತ್ರ ಬರೆದಿದ್ದರು ಎಂದು ಹೇಳಲಾಗಿತ್ತು.

ಈ ಹಿನ್ನೆಲೆಯಲ್ಲಿ ಲೋಕಾ ದವರು ಆರಂಭಿಕವಾಗಿ ಪಾಲಿಕೆ ಕಚೇರಿಗೆ ಭೆಟ್ಟಿ ನೀಡಿ ಆರಂಭಿಕ ವಿಚಾರಣೆ ನಡೆಸಿದ್ದಾರೆಂದು ಗೊತ್ತಾಗಿದೆ. ಅಷ್ಟೆ ಅಲ್ಲ ಕೆಲ ದಾಖಲೆಗಳನ್ನು ಸಂಗ್ರಹಿಸಿದ್ದಾರೆಙದೂ ತಿಳುದು ಬಂದಿದೆ.

ಇಲ್ಲಿ ಪಾಲಿಕೆ ಆಯುಕ್ತರೊಂದಿಗೆ ಲೋಕಾಯುಕ್ತ ಎಸ್ಪಿ ಅವರು ಸುಧೀರ್ಘ ಚರ್ಚೆ ನಡೆಸಿದ ಸಂದರ್ಭದಲ್ಲಿ ಕೆಲ ಮಹತ್ವದ ದಾಖಲೆಗಳು ಹಸ್ತಾಂತರವಾಗಿವೆ ಎನ್ನಲಾಗಿದೆ
ಮೂಲಗಳ ಪ್ರಕಾರ ಇಂದು ಪಾಲಿಕೆಯ ಆರೋಗ್ಯ , ನಗರ ಯೋಜನೆ ಕಂದಾಯ ಸೇರಿದಂತೆ ಎಲ್ಲ ಶಾಖೆಗೆ ಭೆಟ್ಟಿ ನೀಡಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಲೋಕಾಯುಕ್ತರಿಗೆ ದೂರು ಸಹ ನೀಡಿದ್ದರು ಎನ್ನಲಾಗಿದೆ.
ಈ ಹಿಂದೆ ಕೂಡ ಕೆಲ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಿಕೆ ಸಭೆಯಲ್ಲಿಯೇ ಲೋಕಾಯುಕ್ತ ತನಿಖೆ ಬಗ್ಗೆ ಠರಾವ್ ಸಹ ತೆಗೆದುಕೊಳ್ಳಲಾಗಿತ್ತು.
ಈಗ ಪಾಲಿಕೆ ಆಯುಕ್ತರು ನಿರ್ದಿಷ್ಟ ಪ್ರಕರಣ ಮತ್ತು ಅಲ್ಲಿ ಬೀಡು ಬಿಟ್ಟಿರುವ ಭ್ರಷ್ಟರ ಬೇಟೆ ಬಗ್ಗೆ ಪತ್ರ ಬರೆದಿದ್ದು ಈ ದಾಳಿಗೆ ಕಾರಣ ಎನ್ನಲಾಗಿದೆ.
ಗಮನಿಸಬೇಕಾದ ಸಂಗತಿ ಎಂದರೆ, ಪಾಲಿಕೆಯಲ್ಲಿ ಕೆಲವರ ಆಡಳಿತದ ಬಗ್ಗೆ ಲೋಕಾಯುಕ್ತರು ಗಂಭೀರವಾಗಿ ಪರಿಗಣಿಸಿದ್ದರು.ಈ ಹಿನ್ನೆಲೆಯಲ್ಲಿ ಖುದ್ದು ಲೋಕಾಯುಕ್ತ ವರಿಷ್ಟ ಹನುಮಂತರಾಯ ಅವರೇ ದಾಳಿಯಲ್ಲಿ ಭಾಗವಹಿದರು ಎನ್ನಲಾಗಿದೆ.