Headlines

ಭರ್ಜರಿ ವಿಜಯೋತ್ಸವಕ್ಕೆ ಬಿಜೆಪಿ ಸಿದ್ಧತೆ

ದೊಡ್ಡ ಪರದೇ ಅಳವಡಿಕೆ ಕೆಲಸ ಶುರು.

ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ವಿಜಯೋತ್ಸವದ ಸಿದ್ಧತೆ.

ಕರಡಿ ಮಜಲು ಡೋಲ್ ತಾಷಾ, ಝಾಂಜಪಥಕ ಆಗಮನ

ಶಾಸಕರ ಕಚೇರಿ ಮುಂದೆ ಭರ್ಜರಿ ವಿಜಯೋತ್ಸವಕ್ಕೆ ತಯಾರಿ.

ಗೆಲುವು ಪಕ್ಕಾ ಎಂದ ಶಾಸಕ ಅಭಯ


ಬೆಳಗಾವಿ.
ಲೋಕಸಮರದ ಫಲಿತಾಂಶ ಪ್ರಕಟವಾಗುವ ಮುನ್ನವೇ ಬೆಳಗಾವಿ ಕ್ಷೇತ್ರದಲ್ಲಿ ಭರ್ಜರಿ ವಿಜಯೋತ್ಸವಕ್ಕೆ ಬಿಜೆಪಿ ಸಿದ್ಧತೆ ಮಾಡಿ ಕೊಳ್ಳತೊಡಗಿದೆ.
ಸದಾ ವಿನೂತನ ಕಾರ್ಯಕ್ಕೆ ಹೆಸರಾದ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರ ನೇತೃತ್ವದಲ್ಲಿ ವಿಜಯೋತ್ಸವದ ಸಿದ್ಧತೆಗಳು ನಡೆದಿವೆ,

ಶಾಸಕ ಅಭಯ ಪಾಟೀಲರ ಕಚೇರಿ ಬಳಿಯೇ ಎಲ್ಲರೂ ಒಂದೇ ಕಡೆ ಕುಳಿತು ವಿಜಯೋತ್ಸವ ಸಂಭ್ರಮವನ್ನು ಸವಿಯುವ ದೃಷ್ಟಿಯಿಂದ ದೊಡ್ಡದಾದ ಎಲ್ಇಡಿ ಪರದೆ ಅಳವಡಸುವ ಕೆಲಸ ನಡೆದಿದೆ, ಅಷ್ಟೇ ಅಲ್ಲ ವಿವಿಧ ವಾದ್ಯ ಮೇಳವನ್ನು ತರಿಸಿ ಹಬ್ಬದ ವಾತಾವರಣ ಸೃಷ್ಟಿಸುವ ಕೆಲಸವನ್ನು ಮಾಡಲಾಗುತ್ತಿದೆ,

ಗೆಲುವು ಕಟ್ಟಿಟ್ಟ ಬುತ್ತಿ..!
ಲೋಕ ಸಮರದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎಗೆ ಸ್ಪಷ್ಟ ಬಹುಮತ ಸಿಗುವುದು ನಿಶ್ಚಿತ, ಜೊತೆಗೆ ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಪ್ರಧಾನಿ ಆಗವುದು ಖಚಿತ. ಇನ್ನು ಬೆಳಗಾವಿ ಮತ್ತು ಚಿಕ್ಕೊಡಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯಥರ್ಿಗಳ ಗೆಲವು ಕಟ್ಟಿಟ್ಟ ಬುತ್ತಿ, ಬೆಳಗಾವಿ ಲೋಕಸಭೆ ಬಿಜೆಪಿ ಅಭ್ಯಥರ್ಿ ಗೆಲುವಿನಲ್ಲಿ ದಕ್ಷಿಣ ಕ್ಷೇತ್ರ ಮಹತ್ವದ ಪಾತ್ರ ವಹಿಸುತ್ತದೆ ಎನ್ನುವ ವಿಶ್ವಾಸ ನನ್ನಲ್ಲಿದೆ.

ಅಭಯ ಪಾಟೀಲ,
ಶಾಸಕರು, ಬೆಳಗಾವಿ,

Leave a Reply

Your email address will not be published. Required fields are marked *

error: Content is protected !!