ಕೊಟ್ಟ ಮಾತಿಗೆ ತಪ್ಪದ ಅಭಯ, ಬಾಲಚಂದ್ರ

ಬೆಳಗಾವಿ; ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಗೆಲುವು ಮುಂದಿನ ರಾಜಕಾರಣದ ದಿಕ್ಕು ಬದಲಾಯಿಸುವ ಸಾಧ್ಯತೆಗಳಿವೆ

ಸಹಜವಾಗಿ ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿ ದಕ್ಷಿಣ, ಅರಭಾವಿ ಮತ್ತು ಗೋಕಾಕ ವಿಧಾನಸಭೆ ಕ್ಷೇತ್ರ ಬಿಜೆಪಿಗೆ ಲೀಡ್ ಕೊಡುತ್ತ ಬಂದಿದೆ. ಈ ಬಾರಿ ಅದಕ್ಕೆ ಕಾಂಗ್ರೆಸ್ ಸಚಿವೆ ಹೆಬ್ಬಾಳಕರ ಅವರ ತವರು ಕ್ಷೇತ್ರ ಬೆಳಗಾವಿ ಗ್ರಾಮೀಣ ಸಹ ಸೇರಿಕೊಂಡಿತು.

ಚುನಾವಣೆಯ ಆರಂಭದಿಂದಲೂ ಈ‌ಕ್ಷೇತ್ರದ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಎಲ್ಲ ರೀತಿಯ ಪ್ರಯತ್ನ ನಡೆಸಿತ್ತು. ಆದರೆ ಅದಕ್ಕೆ ಪ್ರಭುದ್ಧ ಮತದಾರ ಮಣಿಯಲಿಲ್ಲ

ಹೀಗಾಗಿ ಕಾಂಗ್ರೆಸ್ ಇಲ್ಲಿ ಹೀನಾಯ ಸೋಲು ಅನುಭವಿಸಬೇಕಾಗಿ ಬಂದಿತು.

ಈ ಚುನಾವಣೆಯಲ್ಲಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮತ್ತು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಪಕ್ಷದ ಹೈ‌ಕಮಾಂಡಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ.


`ಮಹಾ’ ನಾಯಕನ ಅಹಂಕಾರ ಸೋಲಿಗೆ ಕಾರಣ
ಬೆಳಗಾವಿ:
ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಮೂಗು ತೂರಿಸಿದ ಬೆಂಗಳೂರು ಮಹಾನಾಯಕನ ಅಹಂಕಾರದಿಂದ ಕಾಂಗ್ರೆಸ್ ಅಭ್ಯಥರ್ಿ ಮೃಣಾಲ್ ಹೆಬ್ಬಾಳಕರ್ ಸೋಲಾಗಿದೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೆಸರು ಹೇಳದೇ ಈ ರೀತಿ ಮಾಙತನಾಡಿದರು,
ಹಣ ಮತ್ತು ಸೊಕ್ಕಿನ ವಿರುದ್ಧ ನನ್ನ ಹೋರಾಟ ಇತ್ತು. ಅದರಲ್ಲಿ ಯಶಸ್ವಿಯಾಗಿರುವುದಾಗಿ ವಿಶ್ಲೇಷಿಸಿದರು.
ಜಗದೀಶ್ ಶೆಟ್ಟರ್ಗೆ ಟಿಕೆಟ್ ಕೊಟ್ಟ ನಂತರ ಸ್ವಂತ ಹಣ ಖಚರ್ು ಮಾಡಿ ಬಿಜೆಪಿ ಕಾರ್ಯಕರ್ತರು ದುಡಿದಿದ್ದಾರೆ. ಜಗದೀಶ್ ಶೆಟ್ಟರ್ ಗೆಲುವು ಬಿಜೆಪಿಯ ಸಾಮಾನ್ಯ ಕಾರ್ಯಕರ್ತರ ಗೆಲುವು ಎಂದರು.
ಅಹಂಕಾರದಿಂದ ಬಂದ ಅಭ್ಯಥರ್ಿಯನ್ನು ಕ್ಷೇತ್ರದ ಜನ ಸೋಲಿಸಿದ್ದಾರೆ ಎಂದು ಮೃಣಾಲ ಹೆಸರನ್ನೂ ಕೂಡ ಪ್ರಸ್ತಾಪ ಮಾಡದ ರಮೇಶ ಜಾರಕಿಹೊಳಿ, ರಾಜ್ಯದ ಅಂಗನವಾಡಿ ಕಾರ್ಯಕರ್ತರ ಶಾಪದಿಂದ ಬೆಳಗಾವಿಯಲ್ಲಿ ಕಾಂಗ್ರೆಸ್ ಸೋತಿದೆ. ಅಂಗನವಾಡಿಯ ಪ್ರತಿಯೊಬ್ಬ ಕಾರ್ಯಕತರ್ೆಯರಿಂದ ಒಂದು ಲಕ್ಷ ರೂ.ಗಳನ್ನು ವಸೂಲಿ ಮಾಡಲಾಗಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಗಂಭೀರ ಆರೋಪ ಮಾಡಿದರು.

ಹೀಗಾಗಿ, ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಅಂಗನವಾಡಿ ಕಾರ್ಯಕರ್ತರ ಶಾಪದಿಂದ ಕಾಂಗ್ರೆಸ್ ಅಭ್ಯರ್ಥಿ ಸೋಲಾಗಿದೆ. ಬೆಂಗಳೂರು ಮಹಾನಾಯಕನ ಅಹಂಕಾರದಿಂದ ಸೋಲಾಗಿದೆ ಎಂದು ತಮ್ಮದೇ ಆದ ಧಾಟಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.


ಕೋಟಿ ಕೋಟಿ ನಮನಗಳು
ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಅತ್ಯಧಿಕ ಬಿಜೆಪಿಗೆ ಅತ್ಯಧಿಕ ಲೀಡ್ ಕೊಟ್ಟ ಮತದಾರರಿಗೆ ಕೋಟಿ ಕೋಟಿ ಅಭಿನಂದನೆಗಳನ್ನು ಸಲ್ಲಿಸಿದರೂ ಕಡಿಮೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು,

ಬೆಳಗಾವಿ ಲೋಕಸಭೆ ಅಭ್ಯರ್ಥಿ ಶೆಟ್ಟರ್ ಅವರು ಲಕ್ಷಕ್ಕು ಅಧಿಕ ಮತಗಳಿಂದ ಗೆಲ್ಲುತ್ತಾರೆ ಎಣದು ಮೊದಲೇ ಹೇಳಿದ್ದೆ. ಅಷ್ಟೇ ಅಲ್ಲ ಬೆಳಗಾವಿ ದಕ್ಷಿಣದಿಂದಲೇ ಅತೀ ಹೆಚ್ಚು ಮತಗಳು ಬರುತ್ತವೆ ಎಂದೂ ಹೇಳಿದ್ದೆ. ಅದೇ ರೀತಿ ಮತದಾರರು ವಿರೋಧಿಗಳ ಆಮೀಷಕ್ಕೆ ಒಳಗಾಗದೇ ಬಿಜೆಪಿಗೆ ಮತ ನೀಡಿದ್ದಾರೆ, ಹೀಗಾಗಿ ಅವರಿಗೆ ಕೋಟಿ ನಮನಗಳು ಎಂದು ಅವರು ಹೇಳಿದರು,.

ಅತೀ ದೊಡ್ಡ ಪಕ್ಷ
ಬಿಜೆಪಿಯು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ದೇಶದ ಸಮಗ್ರತೆ, ಸುರಕ್ಷತೆ ಹಾಗೂ ಅಭಿವೃದ್ಧಿ ಹಿನ್ನೆಲೆಯಲ್ಲಿ ನಮ್ಮ ದೇಶದ ಜನರು ಬಿಜೆಪಿ ಪರವಾಗಿ ಐತಿಹಾಸಿಕ ತೀಪರ್ು ನೀಡಿದ್ದಾರೆ. ಮೋದಿಯವರ ಸಮರ್ಥ ಆಡಳಿತಕ್ಕೆ ಇಡೀ ರಾಷ್ಟ್ರವೇ ಫೀದಾ ಆಗಿದೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು,
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಬಿಜೆಪಿ ಭರ್ಜರಿಯಾಗಿ ಜಯಗಳಿಸಿದ್ದು, ನಮ್ಮ ಜಿಲ್ಲೆಯ ಎಲ್ಲ ಮುಖಂಡರು ಒಂದಾಗಿ- ಒಗ್ಗಟ್ಟಾಗಿ ಕೆಲಸ ಮಾಡಿದ್ದರಿಂದ ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಗದೀಶ್ ಶೆಟ್ಟರ್ ಜಯಗಳಿಸಿದ್ದಾರೆ. ಮತ ನೀಡಿ ಆಶೀರ್ವದಿಸಿದ ಸಮಸ್ತ ಮತದಾರರು, ಗೆಲುವಿಗೆ ದುಡಿದಿರುವ ಎಲ್ಲ ಕಾರ್ಯಕರ್ತರಿಗೆ ಧನ್ಯವಾದಗಳನ್ನು ಸಲ್ಲಿಸುವೆ ಎಂದರು,
=—

Leave a Reply

Your email address will not be published. Required fields are marked *

error: Content is protected !!