ಎಲ್ಲಿ ಎಷ್ಟು ಲೀಡ್ ಬಿಜೆಪಿಗೆ ಲೀಡ್ ಕೊಟ್ಟ ಕ್ಷೇತ್ರಗಳು ಬೆಳಗಾವಿ ದಕ್ಷಿಣ- 74000. ಬೆಳಗಾವಿ ಗ್ರಾಮೀಣ-49000 ಬೆಳಗಾವಿ ಉತ್ತರ- 4000 ಗೋಕಾಕ 20000 ಅರಭಾವಿ 24000 ಬೈಲಹೊಂಗಲ 9000 ಸವದತ್ತಿ 16000 (ಕಾಂಗ್ರೆಸ್ ಲೀಡ್) ರಾಮದುರ್ಗ 964 (ಕಾಂಗ್ರೆಸ್ ಲೀಡ್)
ನಿಜವಾದ ಇ ಬೆಳಗಾವಿ ಡಾಟ್ ಕಾಮ್ ವರದಿ.
ಸ್ವ ಕ್ಷೇತ್ರದಲ್ಲಿಯೇ ಹಿಡಿತ ಕಳೆದುಕೊಂಡ ಸಚಿವೆ
ಬೆಳಗಾವಿ, `ಇ ಬೆಳಗಾವಿ’ ಡಾಟ್ ಕಾಂ ಎಂದಿಗೂ ಅಂತೆ ಕಂತೆಗಳ ಆಧಾರದಲ್ಲಿ ಸುದ್ದಿ ಪ್ರಕಟಿಸಿಲ್ಲ. ಪ್ರಕಟಿಸುವುದೂ ಇಲ್ಲ. ಏನೇ ಇದ್ದರೂ ನೇರಾ ನೇರ. ಅದು ಈ ಲೋಕಸಮರದ ಚುನಾವಣೆ ಫಲಿತಾಂಶದ ಸಂದರ್ಭದಲ್ಲಿ ಸ್ಪಷ್ಟವಾಗಿದೆ, ಅದೇ ಕಾರಣದಿಂದ ಇ ಬೆಳಗಾವಿ ಓದುಗರ ಸಂಖ್ಯೆ ಕೇವಲ ವರ್ಷ ತುಂಬುವುದರೊಳಗೆ ಒಂದುವರೆ ಲಕ್ಷದ ಗಡಿ ದಾಟಿದೆ ಎಂದು ಹೇಳಲು ನಮಗೆ ಹೆಮ್ಮೆ ಎನಿಸುತ್ತದೆ,
ಈ ಬೆಳಗಾವಿ ಜಿಲ್ಲೆಯ ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಫಲಿತಾಂಶ ಏನು ಬರಬಹುದು ಎಂದು ಸ್ಪಷ್ಟವಾಗಿ ಹೇಳಿತ್ತು, ಅಷ್ಟೇ ಅಲ್ಲ ಬೆಳಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಯಾವ ಯಾವ ಕ್ಷೇತ್ರದಲ್ಲಿ ಪೆಟ್ಟು ಬೀಳಬಹುದು ಮತ್ತು ಯಾವ ಕಾರಣಕ್ಕೆ ಎನ್ನುವುದನ್ನು ಉಲ್ಲೇಖ ಮಾಡಿತ್ತು, ಅದೆಲ್ಲವೂ ಈಗ ನಿಜವಾಗಿದೆ,
ಅದರಲ್ಲಿ ರಾಮದುರ್ಗ ಮತ್ತು ಸವದತ್ತಿ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಮುನ್ನಡೆ ಸಾಧಿಸಬಹುದು, ಸವದತ್ತಿಯಲ್ಲಿ ಹೆಚ್ಚಿಲ್ಲವೆಂದರೆ 18 ಸಾವಿರ ಮತಗಳು ಕಾಂಗ್ರೆಸ್ಗೆ ಹೆಚ್ಚಿಗೆ ಬರಬಹುದು ಎಂದು ಹೇಳಲಾಗಿತ್ತು, ಅದು ನಿಜವಾಗಿದೆ, ಅದನ್ನು ಬಿಟ್ಟರೆ ಬೆಳಗಾವಿ ಗ್ರಾಮೀಣದಲ್ಲಿ ಮತದಾರರು ಇಷ್ಟರ ಮಟ್ಟಿಗೆ ಕಾಂಗ್ರೆಸ್ ನ್ನು ತಿರಸ್ಕರಿಸುತ್ತಾರೆ ಎನ್ನುವ ನಿರೀಕ್ಷೆ ಇರಲಿಲ್ಲ. ಅದಕ್ಕೆ ಕಾರಣ ಬೇರೆ ಬೇರೆ ಇವೆ,
ಈ ಗ್ರಾಮೀಣ ಕ್ಷೇತ್ರದ ಮತದಾರರನ್ನು ಸಚಿವರು ಅಷ್ಟು ಹಗುರವಾಗಿ ಪರಿಗಣಿಸಿದ್ದರು, ಹೀಗಾಗಿ ಮತದಾನ ಸಂದರ್ಭದಲ್ಲಿ ಏನು ಮಾಡಬೇಕು ಅದನ್ನು ಮತದಾರರು ಮಾಡಿ ತೋರಿಸಿದ್ದಾರೆ,
ಕೊಟ್ಟ ಮಾತಿನಂತೆ ನಡೆದ ಅಭಯ
ಇದನ್ನು ಬಿಟ್ಟರೆ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಗೆ ಏನಿಲ್ಲವೆಂದರೂ ಕನಿಷ್ಟ 70 ಸಾವಿರ ಲೀಡ್ ಕೊಡುವುದಾಗಿ ಶಾಸಕ ಅಭಯ ಪಾಟೀಲ ಹೇಳುತ್ತ ಬಂದಿದ್ದರು. ಅವರು ಇಲ್ಲಿ ಹೇಳಿದಂತೆ ನಡೆದುಕೊಂಡಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗರು ಮತದಾರರನ್ನು ಓಲೈಸಿಕೊಳ್ಳಲು ಏನೆಲ್ಲ ಕಸರತ್ತು ಮಾಡಿದರು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ,
‘ಖುದ್ದು ಶಾಸಕ ಅಭಯ ಪಾಟೀಲರೇ ಮಧ್ಯರಾತ್ರಿಯ ತನಕ ಶಹಾಪುರ ಪೊಲೀಸ್ ಠಾಣೆ ಬಳಿ ನಿಂತಿದ್ದನ್ನು ಗಮನಿಸಿದರೆ ಯಾವ ಮಟ್ಟಕ್ಕೆ ಪರಿಸ್ಥಿತಿ ಹೋಗಿತ್ತು ಎನ್ನುವುದನ್ನು ಊಹಿಸಬಹುದು, ಆದರೂ ಮತದಾರರು ಮಾತ್ರ ಕಾಂಗ್ರೆಸ್ಗೆ ಕೈ ಕೊಟ್ಟು ಅಭಯ ಪಾಟೀಲರ ಅಭಿವೃದ್ಧಿಗೆ ಜೈ ಎನ್ನುವುದರ ಮೂಲಕ ಬಿಜೆಪಿಗೆಬಹುಪರಾಕ್ ಎಂದಿದ್ದಾರೆ,
ಮಾತಿಗೆ ತಪ್ಪದ ಬಾಲಚಂದ್ರ..! ಅರಭಾವಿ ಶಾಸಕ ಬಾ;ಲಚಂದ್ರ ಜಾರಕಿಹೊಳಿ ಕೂಡ ಮತಗಳ ವಿಷಯದಲ್ಲಿ ಕೊಟ್ಟ ಮಾತಿಗೆ ತಪ್ಪಿಲ್ಲ ಎನ್ನವುದು ಸ್ಪಷ್ಟವಾಗಿದೆ, ಈ ಬಾರಿ ಕೂಡ ಅರಭಾವಿ ಕ್ಷೇತ್ರದಿಂದ 25 ಸಾವಿರ ಮತ್ತುಗೋಕಾಕ ಕ್ಷೇತ್ರದಿಂದ 20 ಸಾವಿರ ಲೀಡ್ ಕೊಡುವುದಾಗಿ ಹೇಳಿದ್ದರು, ಅದಕ್ಕೆ ತಕ್ಕಂತೆ ಬಿಜೆಪಿಗೆ ಮತಗಳು ಬಂದಿವೆ, ಈ ಕ್ಷೇತ್ರದಲ್ಲಿ ಕೂಡ ಕಾಂಗ್ರೆಸ್ನವರು ಪಂಚಮಸಾಲಿ ಅಸ್ತ್ರವನ್ನು ಪ್ರಯೋಗ ಮಾಡಿದರು, ಆದರೂ ಪ್ರಭುದ್ಧ ಮತದಾರರು ಅದರತ್ತ ಗಮನಹರಿಸಲಿಲ್ಲ. ಅಷ್ಟೇ ಅಲ್ಲ ಆಮಿಷ ಕೊಡಲು ಬಂದವರಿಗೆ ಬುದ್ದಿ ಮಾತು ಹೇಳಿ ಕಳಿಸುವ ಕೆಲಸ ಮಾಡಿದರು,
ಕಾಂಗ್ರೆಸ್ನವರಾದ ನೀವು ಚುನಾವಣೆ ಬಂದಾಗ ಮಾತ್ರ ಬಂದು ಕೊಡ್ತಿರಿ, ಆದರೆ ನಮ್ಮ ಬಾಲಚಂದ್ರ ಜಾರಕಿಹೊಳಿ ಸಾಹುಕಾರರಯ ಕೊಡುಗೈ ದಾನಿ. ಕಷ್ಟ ಅಂತ ಹೋದಾಗಲೊಮ್ಮೆ ಅಭಯ ಹಸ್ತ ಚಾಚುತ್ತಾರೆ. ಹೀಗಾಗಿ ನಿಮ್ಮ ಆಮಿಷ ನಮಗೆ ಬೇಡ ಎಂದು ವಾಪಸ್ಸು ಕಳಿಸಿದ್ದಾರೆಂದು ಹೇಳಲಾಗಿತ್ತು,
ಭಾರೀ ಮುಖಭಂಗ ಇಂದು ಪ್ರಕಟಗೊಂಡ ಫಲಿತಾಂಶವನ್ನು ಗಡಿನಾಡ ಬೆಳಗಾವಿ ಲೋಕಸಭೆ ಕುರುಕ್ಷೇತ್ರದ ಫಲಿತಾಂಶವು ರಾಜ್ಯ ಸಕರ್ಾರದಲ್ಲಿ ಪ್ರಭಾವಿ ಸಚಿವೆ ಎಂದು ಕರೆಯಿಸಿಕೊಳ್ಳುವ ಲಕ್ಷ್ಮೀ ಹೆಬ್ಬಾಳಕರಗೆ ಭಾರೀ ಮುಖಭಂಗವನ್ನುಂಟು ಮಾಡಿದೆ, ಸಹೋದರ ಚನ್ನರಾಜ ಹಟ್ಟಿಹೊಳಿಯನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದ್ದ ಸಚಿವೆ ಹೆಬ್ಬಾಳಕರಗೆ ತನ್ನ ಪುತ್ರ ಮೃನಾಲನನ್ನು ಗೆಲ್ಲಿಸಿಕೊಂಡು ಬರಲು ಸಾಧ್ಯವಾಗಲಿಲ್ಲ. ಇಡೀ ಚುನಾವಣೆಯಲ್ಲಿ ಜಗದೀಶ ಶೆಟ್ಟರ್ ಅವರನ್ನು ವಲಸಿಗರು, ಹುಬ್ಬಳ್ಳಿಯಿಂದ ಬಂದವರು, ಅವರ ಅಡ್ರೆಸ್ ಎಲ್ಲಿ ಎಂದು ಹಿಯ್ಯಾಳಿಸುವ ಕೆಲಸವನ್ನು ಸಚಿವೆ ಹೆಬ್ಬಾಳಕರ ಮಾಡಿದ್ದರು, ಆದರೆ ಮನೆ ಮಗ ಎಂದು ಹೇಳಿಕೊಂಡಿದ ್ದಮೃನಾಲ್ ಹೆಬ್ಬಾಳಕರ ಅವರನ್ನು ಬೆಳಗಾವಿ ಲೋಕಸಭೆ ಕ್ಷೇತ್ರದ ಪ್ರಜ್ಞಾವಂತ ಮತದಾರರು ಮನೆಗೆ ಬಿಟ್ಟು ಬರುವ ಕೆಲಸ ಮಾಡಿದ್ದಾರೆ,
Oplus_0
ಗಮನಿಸಬೇಕಾದ ಸಂಗತಿ ಎಂದರೆ, ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ತಮ್ಮ ತವರು ವಿಧಾನಸಭೆ ಕ್ಷೇತ್ರ ಬೆಳಗಾವಿ ಗ್ರಾಮೀಣದಲ್ಲಿಯೇ ಭಾರೀ ಹಿನ್ನೆಡೆ ಅನುಭವಿಸಿದ್ದಾರೆ, ಇದು ಒಂದು ರೀತಿಯ ಮುಜುಗುರಕ್ಕೂ ಕಾರಣವಾಗಿದೆ.