ಶೆಟ್ಟರ್ ಗೆಲುವಿನ ಭವಿಷ್ಯ ಹೇಳಿದ್ದ ಬಸ್ಸಣ್ಣ

ಬೆಳಗಾವಿ.

ಬೆಳಗಾವಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಗೆಲುವು ಕಟ್ಟಿಟ್ಟ ಬುತ್ತಿಯಾಗಿತ್ತು.

ಆದರೆ ಕಾಂಗ್ರೆಸ್ ನಾಯಕರು ಮಾತ್ರ ಈ ಸಂಗತಿಯನ್ನು ಒಪ್ಪುತ್ತಿರಲಿಲ್ಲ. ನಾವೇ ಒಂದು ಲಕ್ಷಕ್ಕೂ ಅಧಿಕ ಮತದಿಂದ ಗೆಲ್ಲೋದು ಎಂದು ಹೇಳಿಕೊಂಡಿದ್ದರು.

ಆದರೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಕಾಂಗ್ರೆಸ್ ಭರವಸೆ ಠುಸ್ ಆಗಿದೆ.

ಇಲ್ಲಿ ಶೆಟ್ಟರ್ ಅವರು ಒಂದುವರೆ ಲಕ್ಷ ಮತಗಳಿಂದ ಗೆದ್ದೆ ಗೆಲ್ತಾರೆ ಎಂದು ಹೇಳಿದವರಲ್ಲಿ ಬಸವರಾಜ ಪೂಜಾರಿ ಕೂಡ ಒಬ್ಬರು.

ಹಾಗೇ ನೋಡಿದರೆ ಇವರು ಶಾಸಕ ಅಭಯ ಪಾಟೀಲರ ಕಾರು ಚಾಲಕ. ನಿಷ್ಠಾವಂತ ಎನ್ನುವುದರಲ್ಲಿ ಎರಡು ಮಾತಿಲ್ಲ.ಅವರು ಚುನಾವಣೆಗೂ ಮುನ್ನವೇ ಶೆಟ್ಟರ್ ಅವರು ಒಂದುವರೆ ಲಕ್ಷ ಮತದ ಅಂತರದಿಂದ ಬರ್ತಾರೆ ಎಂದು ಹೇಳಿದ್ದರು. ಇದರ ಜೊತೆಗೆ ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಕನಿಷ್ಟ ಸುಮಾರು 75 ಸಾವಿರ ಮತದ ಲೀಡ್ ಬರುತ್ತೆ ಎಂದೂ ಹೇಳಿದ್ದರು. ಈಗ ಅವರು ಹೇಳಿದಂತೆಯೇ ಫಲಿತಾಂಶ ಬಂದಿದೆ.

Leave a Reply

Your email address will not be published. Required fields are marked *

error: Content is protected !!