ಬಡಾವಣೆಯ ನಡು ರಸ್ತೆಯಲ್ಲೇ ಡ್ರೈನೇಜ್ ಹೋಲ್ ನಿರ್ಮಾಣ:
ಬೆಳಗಾವಿ: ಕತ್ತಲಾದರೆ ಸಾಕು ಆ ಬಡಾವಣೆಯ ಜನರಿಗೆ ಯಾಕಾದ್ರೂ ಕತ್ತಲಾಯ್ತೊ ಅನ್ನೊ ಭಯ ಶುರುವಾಗಿ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಬಡಾವಣೆಯ ಓಣಿಯ ರಸ್ತೆ ಅವೈಜ್ಞಾನಿಕವಾಗಿ ರಸ್ತೆ ಮದ್ಯೆದಲ್ಲೇ ಒಳಚರಂಡಿ ಗುಂಡಿ ನಿರ್ಮಾಣ ಮಾಡಿದ್ದರಿಂದ, ಬಡಾವಣೆ ಜನರು ದಿನ ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ.
ಹೌದು ಇದು ಬೆಳಗಾವಿ ನಗರದ ಮಹಾನಗರ ಪಾಲಿಕೆಯ ಜ್ಞಾನೇಶ್ವರ ನಗರದ ಜನರ ದಿನ ನಿತ್ಯದ ಗೋಳಾಗಿದೆ. ಕಳೆದ ನಾಲ್ಕು-ಐದು ತಿಂಗಳ ಹಿಂದೆ ಇಲ್ಲಿ ಅವೈಜ್ಞಾನಿಕವಾಗಿ ರಸ್ತೆಯ ಮದ್ಯದಲ್ಲಿಯೇ ಡ್ರೈನೇಜ್ ನಿರ್ಮಾಣ ಮಾಡಲಾಗಿದೆ. ಇದರಿಂದಾಗಿ ಬಡಾವಣೆ ಜನರು ನಿತ್ಯ ಸಂಚಾರ ಮಾಡಲು ಸಮಸ್ಯೆ ಎದುರಿಸುತ್ತಿದ್ದಾರೆ.

ಸತೀಶ್,ರಾಜು ಓಕೆ, .ಫಿರೋಜ್ ಯಾಕೆ?

https://ebelagavi.com/index.php/2023/08/19/hi-8/
ಮಳೆಯಾದರೆ ಓಣಿಯಲ್ಲೇ ಮಳೆ ನೀರು ನಿಂತು ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದ್ದು ಮಲೇರಿಯಾ ರೋಗದ ಭಯ ಶುರುವಾಗಿದೆ. ಅಲ್ಲದೇ ರಾತ್ರಿಯಲ್ಲಿ ಮಕ್ಕಳು, ವಯೋವೃದ್ದರು ಅಡ್ಡಾಡುವುದು ಕಷ್ಟವಾಗುತ್ತಿದೆ. ಜನರು ಬಿದ್ದು ಕಾಲ ಮುರಿದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರಿಯಾದ ರಸ್ತೆ ಇಲ್ಲವಾಗಿದ್ದರಿಂದ ಕಸ ವಿಲೇವಾರಿ ವಾಹನ ಸಹ ಬರುತ್ತಿಲ್ಲ, ಸರಿಯಾದ ವಿದ್ಯುತ್ ಬೆಳಕಿನ ವ್ಯವಸ್ಥೆ ಕೂಡ ಇಲ್ಲವಾಗಿದ್ದರಿಂದ ಬಡಾವಣೆಯ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇನ್ನು ಅವೈಜ್ಞಾನಿಕವಾಗಿ ರಸ್ತೆ ಮೇಲೆ ಒಳಚರಂಡಿ ನಿರ್ಮಾಣ ಮಾಡಿದ್ದರಿಂದ ಹಲವು ದಿನಗಳಿಂದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಅಕ್ಕ ಪಕ್ಕದ ಬಡಾವಣೆ ಅಭಿವೃದ್ಧಿಯಾಗಿದೆ. ಆದರೆ ಈ ಬಡಾವಣೆಯ ಅಭಿವೃದ್ಧಿ ಮರಿಚಿಕೆಯಾಗಿದೆ. ರಸ್ತೆ ಮೇಲೆ ಡ್ರೈನೇಜ್ ನಿರ್ಮಾಣ ಮಾಡಿದ್ದರಿಂದ ವಾಹನಗಳನ್ನ ದೂರದ ರಸ್ತೆ ಮಲೇ ನಿಲ್ಲಿಸಿ ಬರಬೇಕಾಗಿದೆ. ಇನ್ನು ಈ ಬಡಾವಣೆ ಸಮಸ್ಯೆ ಕುರಿತು ನಗರ ಸೇವಕರ ಗಮನಕ್ಕೆ ತಂದು ಸರಿ ಮಾಡುವಂತೆ ಮನವಿ ಮಾಡಲಾಗಿದೆ. ಅವರೂ ಭರವಸೆ ನೀಡಿದ್ದಾರೆಂದು ನಿವಾಸಿಗಳು ತಿಳಿಸಿದರು.

ಒಟ್ಟಿನಲ್ಲಿ ಹೇಳುವುದಾದರೆ ಕಷ್ಟಕ್ಕೆ ಕರಿಬೇಡಿ ಊಟಕ್ಕೆ ಬರಿ ಬೇಡಿ ಎನ್ನುವಂತಾಗಿದೆ ಜ್ಞಾನೇಶ್ವರ ನಗರದ ಬಡಾವಣೆ ಜನರ ಸ್ಥಿತಿ.
ಸಂಬಂಧಿಸಿದ ಅಧಿಕಾರಿಗಳು ಜನ ಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸಿ ಸಮಸ್ಯೆ ಸರಿಪಡಿಸುತ್ತಾರಾ ಕಾದುನೋಡಬೇಕು