ದುಡ್ಡು, ಜಾತಿ ನೋಡದೆ ಬಿಜೆಪಿ ಬೆಂಬಲಿಸಿದ ಮತದಾರ..

ಬೆಳಗಾವಿ ಲೋಕಸಭೆ ಫಲಿತಾಂಶ.

ಕೈ ನಾಯಕರ ಲೆಕ್ಕಾಚಾರ ಉಲ್ಟಾ ಮಾಡಿದ ಫಲಿತಾಂಶ.

ದುಡ್ಡು, ಜಾತಿ ನೋಡದೇ ಬಿಜೆಪಿ ಬೆಂಬಲಿಸಿದ ಮತದಾರ,

ದಕ್ಷಿಣದಲ್ಲಿ ಮತ ಖರೀದಿಗೆ ಸುರಿದ ಹಣ ಎಷ್ಟು ಗೊತ್ತಾ? ಬಿಜೆಪಿ ಸೋಲಿಸಲು ಕೈ ಕಸರತ್ತು ವ್ಯರ್ಥ.

ಬೆಳಗಾವಿ ಜಿಲ್ಲಾ ರಾಜಕೀಯಕ್ಕೆ ಹೊಸ ರಂಗು.

ಬೆಳಗಾವಿ.

ದುಡ್ಡು ಕೊಟ್ಟರೆ ಮತಗಳು ತನ್ನಿಂದ ತಾನೇ ಬರ್ತಾವೆ. ಚುನಾವಣೆ ಗದ್ದೆ ಗೆಲ್ತೇವೆ ಎನ್ನುವವರ ಭ್ರಮೆ ಈಗ ಹುಸಿಯಾಗಿದೆ.

ಲೋಕ ಕುರುಕ್ಷೇತ್ರದಲ್ಲಿ ದುಡ್ಡಿ‌ನ ಮೂಲಕ ಗೆದ್ದು ತಮ್ಮದೇ ಸಾಮ್ರಾಜ್ಯ ಕಟ್ಟಬೇಕು ಎಂದು ಹೊರಟವರಿಗೆ ಮತದಾರ ಪ್ರಭು ಪೂರ್ಣ ಪ್ರಮಾಣದ ಬ್ರೆಕ್ ಹಾಕಿದ್ದಾನೆ. ಇದು ಬೆಳಗಾವಿ ಅಷ್ಟೇ ಅಲ್ಲ ಇನ್ನುಳಿದ ಕ್ಷೇತ್ರಗಳಲ್ಲಿಯೂ ಇದು ಅನ್ವಯಿಸುತ್ತದೆ.

ಇಲ್ಲಿ ದೂರದ ಕ್ಷೇತ್ರದ ಸ್ಥಿತಿಗತಿಯನ್ನು ಬಿಡಿ ಬೆಳಗಾವಿ ಲೋಕಸಭೆಯಲ್ಲಿ ಬಿಜೆಪಿಯನ್ನು ಸೋಲಿಸಲೇ ಬೇಕೆಂದು ವಿರೋಧ ಪಕ್ಷ ಮಾಡಿದ ಸರ್ಕಸ್ ಅಷ್ಟಿಷ್ಟಲ್ಲ.

ಅದನ್ನು ಬಿಡಿ ಬಿಜೆಪಿಗೆ ಲೀಡ್ ಕೊಡುವ ಬೆಳಗಾವಿ ದಕ್ಷಿಣ, ಅರಭಾವಿ ಮತ್ತು ಗೋಕಾಕ ಕ್ಷೇತ್ರದಲ್ಲಿ ವಿರೋಧಿಗಳ ಗ್ಯಾರಂಟಿ ವರ್ಕೌಟ ಆಗಲೇ ಇಲ್ಲ. ಇದರ ಜೊತೆಗೆ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಗಿಂತ ಕನಿಷ್ಟ ಒಂದೇ ಒಂದು ಮತ ಲೀಡ ತೆಗೆದುಕೊಳ್ಳಬೇಕು ಎನ್ನುವ ನಿಟ್ಟಿನಲ್ಕಿ ವಿರೋಧಿ ಪಕ್ಷದವರು ಮತದಾರರನ್ನು ಖರೀದಿ ಮಾಡುವ ಕೆಲಸಕ್ಕೆ ಕೈಹಾಕಿದರು. ಇಲ್ಲಿ ವಿರೋಧಿಗಳ ತಂತ್ರಗಾರಿಕೆಯನ್ನು ತಡೆಗಟ್ಟಲು ನಾವು ಪಟ್ಟ ಶ್ರಮ ಅಷ್ಟಿಷ್ಟಲ್ಲ ಎಂದು ಬಿಜೆಪಿ ಶಾಸಕ ಅಭಯ ಪಾಟೀಲ ಹೇಳಿದ್ದಾರೆ.

ಅವರ ಪ್ರಕಾರ ಬೆಳಗಾವಿ ದಕ್ಷಿಣ ವೊಂದರಲ್ಲಿಯೇ ಸಿಕ್ಕಾಪಟ್ಟೆ ಹಣದ ಹೊಳೆ ಹರಸಿದ್ದರು.‌ಆದರೆ ಮತದಾರ ಪ್ರಭು ಮಾತ್ರ ಅದಕ್ಕೆ ಬೆಲೆನೇ ಕೊಡಲಿಲ್ಲ. ಬದಲಾಗಿ ನಿರೀಕ್ಷೆಗಿಂತ ಮೀರಿ ಮತದಾರರು ಬಿಜೆಪಿಗೆ ಮತ ನೀಡಿದ್ದಾರೆ. ಅದಕ್ಕೆ ನಾನು ಕ್ಷೇತ್ರಷ ಮತದಾರರಿಗೆ ಚಿರಋಣಿ ಎಂದು ಶಾಸಕ ಅಭಯ ಪಾಟೀಲರು ಹೇಳಿದ್ದಾರೆ.

ಯುದ್ಧ ಶುರುವಾಗಿದೆ…

ಲೋಕಸಮರ ಫಲಿತಾಂಶ ಪ್ರಕಟಗೊಂಡ ಬೆನ್ನ ಹಿಂದೆಯೆ ಕಾಂಗ್ರೆಸ್ನಲ್ಲಿ ಅಂತರಿಕಯುದ್ಧ ಶುರುವಾಗಿವೆ..


ಜಿಲ್ಲಾ ಮತ್ತು ತಾ;ಲೂಕು ಪಂಚಾಯತಿ ಚುನಾವಣೆ ಸನ್ನಿಹಿತ ಎನ್ನುತ್ತಿರುವಾಗಲೇ ಕಾಂಗ್ರೆಸ್ನಲ್ಲಿ ನಡೆದ ಟಾಕ್ ವಾರ್ ಮುಂದಿನ ದಿನಗಳಲ್ಲಿ ಯಾವ ಮಟ್ಟಕ್ಕೆ ಹೋಗಿ ನಿಲ್ಲಬಹುದು ಎನ್ನುವುದು ಊಹಿಸಲು ಆಗದು,

ಇನ್ನು ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿದ್ದರೂ ಕೂಡ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಯಾರ ವಿರುದ್ಧವೂ ಆರೋಪ ಮಾಡದ ಸ್ಥಿತಿಗೆ ಬಂದು ನಿಂತಿದ್ದಾರೆ.
ಏಕೆಂದರೆ ಅವರ ತವರು ಕ್ಷೇತ್ರ ಬೆಳಗಾವಿ ಗ್ರಾಮೀಣದಲ್ಲಿಯೇ ಬಿಜೆಪಿಗೆ ಸುಮಾರು 50 ಸಾವಿರಕ್ಕೂ ಹೆಚ್ಚು ಮತಗಳು ಬಂದಿವೆ, ಹೀಗಾಗಿ ಸಚಿವೆ ಹೆಬ್ಬಾಳಕರ ಇನ್ನುಳಿದ ಕ್ಷೇತ್ರಗಳ ಕಾಂಗ್ರೆಸ್ ಶಾಸಕರನ್ನು ಬಹಿರಂಗವಾಗಿ ಪ್ರಶ್ನೆ ಮಾಡುವ ಗೋಜಿಗೆ ಹೋಗುತ್ತಿಲ್ಲ.
ಆದರೆ ಅಂತರಿಕವಾಗಿ ಸೋಲಿನ ಬಗ್ಗೆ ಆತ್ಮಾವಲೋಕನ ನಡೆಸಿದ್ದಾರೆ ಎಂದು ಗೊತ್ತಾಗಿದೆ.
ಬೆಳಗಾವಿ ಗ್ರಾಮೀಣದಲ್ಲಿ ಯಾವ ಕಾರಣದಿಂದ ಇಷ್ಟೊಂದು ಮತಗಳು ಬರಲಿಲ್ಲ ಎನ್ನುವ ಕಾರಣ ಹುಡುಕುವಲ್ಲಿ ಅವರು ನಿರತರಾಗಿದ್ದಾರೆ. ಕ್ಷೇತ್ರದ ಜನ ಹೇಳಿದಂತೆ ಸಚಿವರು ಬರೀ ಗ್ಯಾರಂಟಿ ಮಾತಿನ ಭರದಲ್ಲಿ ಅಭಿವೃದ್ಧಿಯನ್ನೇ ಮರೆತರು ಎನ್ನುವ ದೂರು ಕೇಳಿ ಬರುತ್ತಿದೆ,
ಇದನ್ನು ಹೊರತುಪಡಿಸಿದರೆ ಹಳೆಯ ಕಾರ್ಯಕರ್ತರನ್ನು ಕಡೆಗಣಿಸಿ ಹೊಸ ತಂಡ ಕಟ್ಟಲು ಮುಂದಾಗಿದ್ದು ಕಾಂಗ್ರೆಸ್ ಸೋಲಿಗೆ ಕಾರಣ ಎನ್ನುವ ಮಾತಿದೆ,

ಬೆಳಗಾವಿ ಉತ್ತರ ಮತ್ತು ಬೈಲಹೊಂಗಲ ಕ್ಷೇತ್ರದಲ್ಲಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲಿಲ್ಲ. ಬೆಳಗಾವಿಯಲ್ಲಿ ಆಸೀಫ್ ಶೇಠ ಬದಲಿಗೆ ಮಾಜಿ ಶಾಸಕ ರಮೇಶ ಕುಡಚಿಯನ್ನು ಪ್ರಚಾರಕ್ಕೆ ತೆಗೆದುಕೊಂಡು ತಿರುಗಾಡಿದರು, ಹೀಗಾಗಿ ಹಾಲಿ ಶಾಸಕ ಶೇಠ ಸುಮ್ಮನೆ ಕುಳಿತರು, ಬದಲಾಗಿ ಅವರು ಚಿಕ್ಕೊಡಿ ಕ್ಷೇತ್ರದತ್ತ ಮುಖ ಮಾಡಿದರು. ಬೈಲಹೊಂಗಲದಲ್ಲಿ ಕೂಡ ಇದೇ ಪರಿಸ್ಥಿತಿ ಬಂದೊದಗಿತು, ಮೇಲಾಗಿ ಅಲ್ಲಿನ ಬಿಜೆಪಿಯ ಮಾಜಿ ಶಾಸಕರು ಒಂದಾಗಿ ಕೆಲಸ ಮಾಡಿದರು. ಹೀಗಾಗಿ ಬಿಜೆಪಿಗೆ ಪ್ಲಸ್ ಆಯಿತು.

ಹೈಕಮಾಂಡಗೆ ಮುಜುಗುರ?

ಬೆಳಗಾವಿ ಜಿಲ್ಲೆಯ ಈ ಸೋಲು ಗೆಲುವಿನ ಲೆಕ್ಕಾಚಾರದ ನಂತರ ಕಾಂಗ್ರೆಸ್ನಲ್ಲಿ ನಡೆದ ಅಂತರಿಕ ಬೆಳವಣಿಗೆಗಳು ಪಕ್ಷದ ಹೈ ಕಮಾಂಡಗೆ ಮುಜುಗುರ ತರುವ ಸಾಧ್ಯತೆಗಳಿವೆ,
ಸಧ್ಯ ಹೆಬ್ಬಾಳಕರ ಮೌನಕ್ಕೆ ಶರಣಾಗಿದ್ದರೂ ಕೂಡ ಹೈಕಮಾಂಡಗೆ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವ ಸಾಧ್ಯತೆಗಳಿವೆ.
ಹೀಗಾಗಿ ಈ ಹಿಂದೆ ನಡೆದಂತೆ ಪಿಎಲ್ಡಿ ಬ್ಯಾಂಕಿನ ವಿಷಯದಲ್ಲಿ ಆದಂತೆ ಘಟನೆಗಳು ಮತ್ತೇ ಭುಗಿಲೆಳುವುದು ನೂರಕ್ಕೆ ನೂರರಷ್ಟು ಸತ್ಯ. ಕಾದು ನೋಡಬೇಕು.

ಜಾತಿ ಲೆಕ್ಕ ಉಲ್ಟಾ?

ಬೆಳಗಾವಿ ಲೋಕಸಭೆಯಲ್ಲಿ ಜಾತಿ ಲೆಕ್ಕಾಚಾರ ಹೆಚ್ಚಿಗೆ ವರ್ಕೌಟ ಆಗುತ್ತದೆ ಎನ್ನುವ ಮಾತಿತ್ತು. ಹೀಗಾಗಿ ಬಿಜೆಪಿಗೆ ಕಷ್ಟ ಎನ್ನುವ ಮಾತುಗಳು ಆರಂಭದಲ್ಲಿ ಕೇಳಿ ಬಂದಿದ್ದವು.

ಬೆಳಗಾವಿ ಲೋಕಸಭೆ ವ್ಯಾಪ್ತಿಯಲ್ಲಿ‌ ಅತೀ ಹೆಚ್ಚು ಪಂಚಮಸಾಲಿ ಜನಾಂಗವಿದೆ. ಈ ಪಂಚಮಸಾಲಿ Answers ಹೋರಾಟದಲ್ಲಿ ಸಚಿವೆ ಹೆಬ್ಬಾಳಕರ ಮತ್ತು ಅವರ ಕುಟುಂಬ ಸಕ್ರೀಯವಾಗಿ ತೊಡಗಿಸಿಕೊಂಡಿತ್ತು. ಅಷ್ಟೇ ಅಲ್ಲ ಅವರ ಪರವಾಗಿ

Leave a Reply

Your email address will not be published. Required fields are marked *

error: Content is protected !!