Headlines

ಬ್ರಾಹ್ಮಣ ಬಡ ವಿದ್ಯಾರ್ಥಿಗಳಿಗೆ ಸಹಾಯ ಧನ ಚೆಕ್ ವಿತರಣೆ

ಬೆಳಗಾವಿ ಉದ್ಯಮಬಾಗದಲ್ಲಿರುವ ಫೌಂಡ್ರಿ ಕ್ಲಸ್ಟರ್ ನಲ್ಲಿ ದಿ. 3 ರಂದು ನಡೆಯುವ ಕಾರ್ಯಕ್ರಮ.

ಬೆಳಗಾವಿ ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ ವತಿಯಿಂದ ಚೆಕ್ ವಿತರಣೆ.

ಟ್ರಸ್ಟ್ ಅಧ್ಯಕ್ಷ ರಾಮ ಭಂಡಾರಿ ಮತ್ತು ಉಪಾಧ್ಯಕ್ಷ ಭರತ ದೇಶಪಾಂಡೆ ಉಪಸ್ಥಿತಿ.

ಬೆಳಗಾವಿ
ಬ್ರಾಹ್ಮಣ ಸಮಾಜದ ಬಡ ವಿದ್ಯಾರ್ಥಿಗಳ‌ ವಿದ್ಯಾಭ್ಯಾಸಕ್ಕೆ ಅಭಯ ಹಸ್ತ ಚಾಚುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ್ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.

ರಾಮ ಭಂಢರೆ ಭರತ ದೇಶಪಾಂಡೆ

ಸಮಾಜದ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಶುಲ್ಕವನ್ನು ಟ್ರಸ್ಟ್ ವತಿಯಿಂದ ನೀಡಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಇದೇ ದಿ. 3 ರಂದು ಸಂಜೆ 5 ಕ್ಕೆ ಉದ್ಯಮಬಾಗದಲ್ಲಿರುವ ಫೌಂಡ್ರಿಕ್ಲಸ್ಟರನಲ್ಲಿ ಚೆಕ್ ವಿತರಣಾ ಸಮಾರಂಭ ನಡೆಯಲಿದೆ.

ಬ್ರಾಹ್ಮಣ ಸಮಾಜ ಟ್ರಸ್ಟ ಅಧ್ಯಕ್ಷ ರಾಮ‌ ಭಂಡಾರಿ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಉಪಾಧ್ಯಕ್ಷ ಭರತ ದೇಶಪಾಂಡೆ ಸೇರಿದಂತೆ ಮತ್ತಿತರರು ಉಪಸ್ಥಿತಿ ಇರಲಿದ್ದಾರೆ. ಆದ್ದರಿಂದ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿರಬೇಕೆಂದು ಕಾರ್ಯದರ್ಶಿ ವಿಲಾಸ ಬಾದಾಮಿ ಕೋರಿದ್ದಾರೆ..

Leave a Reply

Your email address will not be published. Required fields are marked *

error: Content is protected !!