ಬೆಳಗಾವಿ.
ನಮ್ಮನ್ನು ಲೋಕಸಭೆ ಚುನಾವಣೆಯಲ್ಲಿ ಸೋಲಿಸಲೇಬೇಕೆಂದು ಡೈರೆಕ್ಷನ್ ಎಲ್ಲಿಂದ ಬಂದಿತ್ತು ಗೊತ್ತಿದೆ ಎನ್ನುವ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಉಂಟು ಮಾಡಿದೆ.
ಅಷ್ಟೇ ಅಲ್ಲ ಬೆಳಗಾವಿ ಜಿಲ್ಲಾ ಕಾಂಗ್ರೆಸ್ನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಈಗ ಮತ್ತೊಮ್ಮೆ ಸ್ಪಷ್ಟವಾಗಿದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಇಂತಹ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದವು. ಆದರೆ ಈಗ ಸಚಿವರು ಆಡಿದ ಮಾತನ್ನು ಸೂಕ್ಷ್ಮವಾಗಿ ಗಮನಿಸಿದರೆ ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯ ದಂಗಲ್ ಶುರುವಾಗಬಹುದು ಎನ್ನುವ ಅನುಮಾನ ಎಲ್ಲರನ್ನು ಕಾಡುತ್ತಿದೆ.
ಏನಂದ್ರು ಸಚಿವ ಸತೀಶ್?
ನಿಮಗೆ ಟಿಕೇಟ್ ಕೊಡಿಸಿ ಸಪೋಟರ್್ ಮಾಡಿದೆವು. ನೀವ್ಯಾಕೆ ಹೀಗೆ ಮಾಡಿದಿರಿ ಎಂದು ಸಚಿವ ಸತೀಶ್ ಜಾರಕಿಹೊಳಿ ಅರು ಶಾಸಕ ಮಹೇಂದ್ರ ತಮ್ಮಣ್ಣವರ ಅವರನ್ನು ಪ್ರಶ್ನೆ ಮಾಡಿದರು, ಕೇವಲ ತಮ್ಮಣ್ಣವರ್ ಮಾತ್ರ ಅಲ್ಲ ನಮ್ಮ ವಿರುದ್ದ ಹೇಳಿಕೆ ಕೊಡುವವರು ರಾಜ್ಯದ ತುಂಬ ಇದ್ದಾರೆ. ದೇವೆಗೌಡ, ಸಿದ್ದರಾಮಯ್ಯ, ಯಡಿಯೂರಪ್ಪ ಬಹಳ ಜನರನ್ನು ಬೆಳೆಸಿದರು. ಆದರೆ ಈಗ ಅವರನ್ನು ಬೈತಾರೆ. ನಾವು ಇದನ್ನ ಗಂಭೀರವಾಗಿ ಪರಿಗಣಿಸಲ್ಲ.
ಆದರೆ ಬೇಟೆ ಸಿಗೋದನ್ನು ಕಾಯುತ್ತ ಕೂತಿರುತ್ತೇವೆ. ರಾಜಕಾರಣ ಯಾರ ಮನೆಯ ಆಸ್ತಿಯೂ ಅಲ್ಲ. ಜನ ಯಾರನ್ನು ಬೇಕಾದರೂ ಗೆಲ್ಲಿಸುತ್ತಾರೆ ಮತ್ತು ಸೋಲಿಸುತ್ತಾರೆ ಎಂದು ಸಚಿವರು ಹೇಳಿದರು.
ತಮ್ಮಣ್ಣವರಗೆ ಡೈರೆಕ್ಷನ್ ಎಲ್ಲಿಂದ?
ಸಧ್ಯ ಸಚಿವರು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಅವರನ್ನು ಗುರಿಯಾಗಿಟ್ಟುಕೊಂಡು ಆ ಮಾತನ್ನು ಹೇಳಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಆದರೆ ತಮ್ಮಣ್ಣವರ ಅವರಿಗೆ ಆ ರೀತಿಯ ಡೈರೆಕ್ಷನ್ ಎಲ್ಲಿಂದ ಬಂದಿತ್ತು ಎನ್ನುವುದನ್ನು ಕೆದಕುತ್ತ ಹೋದರೆ ಮತ್ತೇ ಬೊಟ್ಟು ಬೇರೆಡೆ ಕೇಂದ್ರಿಕೃತವಾಗುತ್ತದೆ.
ಆರ್ಟಿಓ ಕಡೆ ಪಾಸಾಗಬೇಕು…!
ಇನ್ನೂ ನೀವು ಸಣ್ಣವರಿದ್ದೀರಿ. ಈಗ ಎಲ್ ಬೋಡರ್್ದಲ್ಲಿದ್ದಿರಿ ಅಂದರೆ ಲನಿರ್ಂಗ್ ಸ್ಟೇಜ್ನಲ್ಲಿದ್ದೀರಿ. ಈಗ ಒಂದು ವರ್ಷ ಆಯ್ತು ಅಷ್ಟೆ. ಗಾಡಿ ಬಹಳ ಸ್ಲೋ ಇರಬೇಕು. ಬೀಳಬಾರದು ಬಿದ್ದರೆ ಆರ್ಟಿಓ ಲೈಸನ್ಸ್ ಕೊಡಲ್ಲ. ಆರ್ ಟಿ ಒ ಕೈಯಲ್ಲಿ ದಾಟಬೇಕು ಎಂದರೆ ಎಲ್ಲ ಪರಿಶೀಲಿಸಿ ನಂತರ ಲೈಸನ್ಸ್ ಕೊಡ್ತಾರೆ.
ಈ ಮಾತನ್ನು ಸಚಿವ ಜಾರಕಿಹೊಳಿ ಅವರು ತಮ್ಮನ್ನು ತಾವು ಆರ್ಟಿಓ ಗೆ ಹೋಲಿಸಿಕೊಂಡು ಕುಡಚಿ ಶಾಸಕ ತಮ್ಮನ್ನವರ್ ವಿರುದ್ಧ ಗುಡುಗಿದರು.
ಆ ಮತಗಳು ಬಿಜೆಪಿಗೆ ಹೋಗಿವೆ…!
ಹಾರುಗೇರಿಯಲ್ಲಿ ನಡೆದ ಚಿಕ್ಕೋಡಿಯ ನೂತನ ಸಂಸದರ ಅಭಿನಂದನಾ ಸಮಾವೇಶದಲ್ಲಿ ಸತೀಶ್ ಜಾರಕಿಹೊಳಿ ಅವರು ಮಾತಾಡಿದರು,
ಕುಡಚಿ ಒಂದೇ ಊರಲ್ಲಿ 18 ಸಾವಿರ ಮತಗಳು ಬಂದಿವೆ. ಇನ್ನು ನಾಲ್ಕು ಸಾವಿರ ಮತಗಳು ಮಾತ್ರ ಉಳಿದವು. .ಕಳೆದ ಬಾರಿ ತಮ್ಮಣ್ಣವರಿಗೆ ಬಿದ್ದ ಮತಗಳು ಈ ಬಾರಿ ಬಿಜೆಪಿಗೆ ಹೋಗಿವೆ ಎಂದರು,
ಸುಮ್ಮನೆ ಆರೋಪ ಮಾಡಲು ನಾನು ಖಾಲಿ ಇಲ್ಲ. ಯಾರು ಕೆಲಸ ಮಾಡಿಲ್ಲವೋ ಅವರ ವಿರುದ್ಧ ಆರೋಪ ಮಾಡಿದ್ದೇನೆ. ಎಲ್ಲಾ ಕಡೆ ಮೋಸ ಆಗಿದ್ದರೆ ನಾವು ಗೆಲ್ಲುವುದು ಕಠಿಣ ಆಗುತ್ತಿತ್ತು, ಈಗ ತಪ್ಪಾಯ್ತು ಎಂದು ಒಪ್ಪಿಕೊಂಡು ಸರಿಪಡಿಸಿಕೊಳ್ಳುವುದು ಒಳ್ಳೆಯದು ಎಂದು ಸತೀಶ್ ಅವರು ಶಾಸಕ ತಮ್ಮಣ್ಣವರ್ಗೆ ಕಿವಿಮಾತು ಹೇಳಿದರು.
ನನ್ನ ಹೆಂಡತಿ ಮಾತೂ ಕೇಳಲ್ಲ…!
ರಾಜಕೀಯದಲ್ಲಿ ಹೊಂದಾಣಿಕೆ ಇರಬೇಕು ಸರಿಪಡಿಸಿಕೊಳ್ಳಬೇಕು. ನಮ್ಮನ್ನ ಸೋಲಿಸಲು ಎಲ್ಲಿಂದ ಡೈರೆಕ್ಷನ್ಬಂದಿದೆ ಎಂದು ನನಗೆ ಗೊತ್ತಿತ್ತು ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಘಾಟಗೆಯವರ ಚಾಡಿ ಮಾತು ಕೇಳುತ್ತಾರೆ ಅಂತ ಹೇಳಿದರು. ನಾನು ಘಾಟಗೆ ಅಲ್ಲ, ನನ್ನ ಹೆಂಡತಿ ಮಕ್ಕಳ ಮಾತೂ ಕೇಳಲ್ಲ ಎಂದು ಸಚಿವರ ಸ್ಪಷ್ಟಪಡಿಸಿದರು.
ಅವರ ಕೆಲಸ ಇದ್ದರೆ ಕೆಲಸ ನಾವು ಮಾಡುತ್ತೇವೆ. ನಿಮ್ಮದಿದ್ರೆ ನಿಮ್ಮ ಕೆಲಸ ಮಾಡ್ತಿವಿ. ಘಾಟಗೆ ಹಾಗೂ ನೀವು ಕುಸ್ತಿ ಹಿಡಿಯಿರಿ. ಈಗ ಚುನಾವಣೆಗೆ ನಿಂತಿದ್ದು ನಾವು. ನಮ್ಮ ಚುನಾವಣೆಗೆ ಯಾಕೆ ತೊಂದರೆ ಮಾಡಿದಿರಿ ಎಂದು ಶಾಸಕ ತಮ್ಮಣ್ಣವರ ಅವರನ್ನು ಸಚಿವರು ಪ್ರಶ್ನಿಸಿದರು.
ಬೇರೆ ಪಕ್ಷಗಳಿಗೆ ಭವಿಷ್ಯ ಇಲ್ಲ ಎಂದು ಎಲ್ಲರೂ ಬಿಜೆಪಿಗೆ ಹೊರಟಿದ್ದರು. ಆದರೆ ಒಂದೇ ಚುನಾವಣೆಯಲ್ಲಿ ಜನ ಎಲ್ಲಾ ಸಾಧ್ಯ ಇದೆ ಎನ್ನುವುದು ತೋರಿಸಿದರು. ಅವಕಾಶ ಸಿಕ್ಕಾಗ ಒಳ್ಳೆಯ ಕೆಲಸ ಮಾಡಲು ಕಲಿಯಬೇಕು ಎಂದ ಸತೀಶ ಜಾರಕಿಹೊಳಿ ಹೇಳಿದರು.