ಡೆಂಘೀಗೆ ಅರಣ್ಯ ಇಲಾಖೆನೇ ಕಾರಣ?

Oplus_0

ಬೆಳಗಾವಿ‌ ವಾರ್ಡ‌ ನಂಬರ 43 ರ ಚಿದಂಬರ ನಗರದಲ್ಲಿ ದೊಡ್ಡ ಮರಗಳ ಕಡಿತ.

ಕಡಿತಗೊಂಡ ಮರಗಳ ಟೊಂಗೆಗಳನ್ನು ತೆಗೆದುಕೊಂಡು ಹೋಗದ ಅರಣ್ಯ ಇಲಾಖೆ .

ಈಗ ಮಳೆಯಲ್ಲಿ ಕೊಳೆತಿರುವ ಎಲೆಗಳು. ಡೇಂಘಿ ಭೀತಿಯಲ್ಲಿ ನಗರ ನಿವಾಸಿಗಳು.

ನಗರಸೇವಕಿ ವಾಣಿ ಜೋಶಿ ಮನವಿಯನ್ನು ಲೆಕ್ಕಿಸದ ಅರಣ್ಯ ಇಲಾಖೆ.

ಇವತ್ತು ಕಸ ಎತ್ತದಿದ್ದರೆ ಅದನ್ನು ಅರಣ್ಯ ಇಲಾಖೆ ಮುಂದೆ ಹಾಕುವ ಬೆದರಿಕೆ ಹಾಕಿದ ನಗರಸೇವಕಿ

ಬೆಳಗಾವಿ.

ಗಡಿನಾಡ ಬೆಳಗಾವಿಯಲ್ಲಿ ಮೊದಲೇ ಡೇಂಘೀ ಹಾವಳಿ ಜಾಸ್ತಿಯಾಗಿದೆ. ಮಹಾನಗರ ಪಾಲಿಕೆ ಸ್ವಚ್ಚತೆ ದೃಷ್ಟಿಯಿಂದ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದೆ.

ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರು ಕ್ಲೀನ್ ಸಿಟಿಗೆ ಆಧ್ಯತೆ ಕೊಡುವ ನಿಟ್ಟಿನಲ್ಲಿ ಬೆಳ್ಳಂ ಬೆಳಿಗ್ಗೆ ಸಿಟಿ ರೌಂಡ್ಸ್ ಮಾಡುತ್ತಿದ್ದಾರೆ.ಮತ್ತೊಂದು ಕಡೆಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲರೂ ಕೂಡ ಡೇಂಘೀ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಖುವಂತೆ ಸೂಚನೆ ನೀಡಿದ್ದಾರೆ. ಅಷ್ಟೇ ಏಕೆ ಇಡೀ ರಾಜ್ಯ ಸರ್ಕಾರ ಕೂಡ ಈ ನಿಟ್ಡಿನಲ್ಲಿ ಕ್ರಮಕ್ಕೆ ಸೂಚನೆ ನೀಡಿದೆ.

ಆದರೆ ಇವರೆಲ್ಲರ ಪ್ರಯತ್ನಕ್ಕೆ ಬೆಳಗಾವಿ ಅರಣ್ಯ ಇಲಾಖೆ ಎಳ್ಖು ನೀರು ಬಿಡುವ ಕೆಲಸ ಮಾಡುತ್ತಿದೆ.

ಸಹಜವಾಗಿ ಮಳೆಗಾಲದ ಸಂದರ್ಭದಲ್ಲಿ ಅಪಾಯಕಾರಿ‌ ಮರ ಅಥವಾ ಅದರ ಟೊಂಗೆಗಳನ್ನು ಕಟ್ ಮಾಡುವ ಕೆಲಸವನ್ನು ಅರಣ್ಯ ಇಲಾಖೆ ಮಾಡುತ್ತದೆ. ಇಲ್ಲಿ ಮರದ ಟೊಂಗೆಗಳನ್ನು ಗುತ್ತಿಗೆದಾರರ ಮೂಲಕ ಕಡಿತ ಮಾಡಿಸುತ್ತದೆ. ಆದರೆ ಕಡಿತವಾದ ನಂತರ ಅದರ ತೊಪ್ಪಲು‌ ಮತ್ತು ಎಲ್ಲವನ್ನೂ ಸಂಬಂಧಪಟ್ಟ ಗುತ್ತಿಗೆದಾರರು ತೆಗೆದುಕೊಂಡು ಹೋಗಬೇಕು.

ಆದರೆ ಇಲ್ಲಿ ಗುತ್ತಿಗೆದಾರರು ಮಾಡುತ್ತಿಲ್ಲ. ಹೀಗಾಗಿ ಮರದ ಎಲೆಗಳು ಕೊಳೆತು ಡೇಂಘೀ ಆಗುವ ಸಾಧ್ಯತೆಗಳು ಹೆಚ್ಚಾಗಿವೆ.

ಕಳೆದ ಎರಡು ದಿನಗಳ ಹಿಂದೆ ವಾರ್ಡನಂಬರ 43 ರಲ್ಲಿ ಬರುವ ಚಿದಂಬರ ನಗರದ ಸಮುದಾಯ ಭವನದ ಮುಂದೆ ಎರಡು ಮರಗಳನ್ನು ಕಟ್ ಮಾಡಲಾಗಿದೆ. ಇಲ್ಲಿ ಮರದ ರೆಂಬೆಗಳನ್ನು ಮಾತ್ರ ಕಡಿತ ಮಾಡಬೇಕಾಗಿದ್ದ ಅರಣ್ಯ ಇಲಾಖೆ ಗುತ್ತಿಗೆದಾರ ಅರ್ಧ ಬಡ್ಡಿಯನ್ನು ಉಳಿದಿದ್ದನ್ನು ಕಟ್ ಮಾಡಿದ್ದಾನೆ.ಇಲ್ಲಿ ಕಡಿತ ಮಾಡಿದ ಟೊಂಗೆ, ಎಲೆಗಳನ್ನು ಅಲ್ಲಿಯೇ ಮನೆಯೊಂದರ ಮುಂದೆ ಇಟ್ಟು ನಾಪತ್ತೆಯಾಗಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಸುರಿಯುವ ಮಳೆಯಿಂದ ಕಡಿತ ಮಾಡಿದ ಎಲೆಗಳು ಕೊಳೆತಿವೆ. ಇದು ಡೇಂಘೀ ಹರಡಲು ಕಾಎಣವಾಗುತ್ತಿದೆ.

ಈ ಬಗ್ಗೆ ವಾರ್ಡನ ನಗರಸೇವಕಿ ವಾಣಿ ಜೋಶಿ ಅವರು ಅದನ್ನು ಸ್ವಚ್ಚ ಮಾಡುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿಕೊಙಡರೂ ಯಾವುದೇ ಪ್ರಯೋಜನವಾಗಿಲ್ಲ.

Leave a Reply

Your email address will not be published. Required fields are marked *

error: Content is protected !!