ಡಿಸಿ ಅಂದ್ರ ಇವರಂಗಿರಬೇಕ ನೋಡ್ರಿಪಾ..!

ರೈತರ ಬೆನ್ನೆಲುಬಾಗಿ ಕೆಲಸ ಮಾಡಿದ ಡಿಸಿ ನಿತೇಶ ಪಾಟೀಲ.

ಹಿರೇಬಾಗೇವಾಡಿ RCU ವಿಷಯದಲ್ಲಿ ರೈತರ ಪರ ನಿಂತು ಸಮಸ್ಯೆ ಬಗೆಹರಿಸಿದ ಡಿಸಿ ಇವರು.

ಕಬ್ಬಿನ ಬಿಲ್ ಬಾಕಿವುಳಿಸಿಕೊಂಡ ಕಾರ್ಖಾನೆಗಳ ಬೆಂಡೆತ್ತಿದ್ದ ಡಿಸಿ.


ಬೆಳಗಾವಿ:
ಸರ್ಕಾರಿ ಅಧಿಕಾರಿಗಳಿಗೆ ವರ್ಗಾವಣೆ ಹೊಸದೇನಲ್ಲ. ಆದರೆ ಅವರು ತಮ್ಮ ಅಧಿಕಾರವಧಿಯಲ್ಲಿ ಮಾಡಿದ ಕೆಲಸಗಳು, ಸಮಸ್ಯೆಗಳಿಗೆ ಸ್ಪಂದಿಸಿದ ರೀತಿ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುತ್ತವೆ.

ಹೀಗಾಗಿ ಅಂತಹ ಡಿಸಿ ಇನ್ನೂ ಬೆಳಗಾವಿಯಲ್ಲಿಯೇ ಮುಂದುವರೆಯಬೇಕು ಎನ್ನುವ ಅಭಿಪ್ರಾಯದ ಮಾತುಗಳು ಬಹುತೇಕರಿಂದ ವ್ಯಕ್ತವಾಗುತ್ತವೆ.
ಈಗ ಬೆಳಗಾವಿಯಲ್ಲಿ ಕಳೆದ ಎರಡು ವರ್ಷಗಳ ಕಾಲ ಜಿಲ್ಲಾಧಿಕಾರಿಯಾಗಿ ಕೆಲಸ ನಿರ್ವಹಿಸಿದ ನಿತೇಶ ಪಾಟೀಲರ ವಿಷಯದಲ್ಲಿ ಕೂಡ ಜನ ಅದೇ ರೀತಿ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ
.
ಆರಂಭದ ದಿನಗಳಲ್ಲಿ ನಿತೇಶ ಪಾಟೀಲರು ಡಿಸಿಯಾಗಿ ಅಧಿಕಾರ ವಹಿಸಿಕೊಂಡಾಗ ಕೆಲವರಿಗೆ ಸಿಟ್ಟಿನವರು ಎನಿಸಿಕೊಂಡಿದ್ದರು, ಆದರೆ ಅವರು ಸಮಸ್ಯೆಗಳನ್ನು ಹೊತ್ತುಕೊಂಡು ಡಿಸಿ ಕಚೇರಿ ಮಟ್ಟಿಲು ಹತ್ತಿದವರಿಗೆ ಎಂದಿಗೂ ನಿರಾಶೆ ಮಾಡಿ ಕಳಿಸಿದ ಉದಾಹರಣೆ ಇಲ್ಲ.

ಹೊಸ ಡಿಸಿಯೊಂದಿಗೆ‌ ನಿತೀಶ್ ಪಾಟೀಲ

ಅದು ಆರ್ಸಿಯು ವಿವಾದ..
ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯ ಗುಡ್ಡದ ಮಲ್ಲಪ್ಪನ ಜಾಗೆಯಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕಟ್ಟಡ ಕಾಮಗಾರಿ ನಡೆದಿದೆ, ಅಲ್ಲಿನ ರೈತರು ಈ ಕಾರ್ಯಕ್ಕೆ ಸಂಪೂರ್ಣ ಸಹಕಾರ ಕೊಟ್ಟರೂ ಕೂಡ ಆರ್ಸಿಯುದವರು ದಬ್ಬಾಳಿಕೆ ನಡೆಸಿ ರೈತರಿಗೆ ಅನ್ಯಾಯ ಮಾಡುತ್ತಿದ್ದರು, ಸವರ್ೇ ಮಾಡುವ ನೆಪದಲ್ಲಿ ರೈತರ ಜಮೀನಿನಲ್ಲಿನ ಬೆಳೆಗಳನ್ನು ನಾಶ ಮಾಡಿದರು, ಅಷ್ಟೇ ಅಲ್ಲ ಕಬ್ಬು ಸಾಗಾಟ ಮಾಡಲೂ ಆಗದ ರೀತಿಯಲ್ಲಿ ಆವರಣ ಗೋಡೆ ಕಟ್ಟಿಸಿದರು,

ವರ್ಗಾವಣೆಗೊಂಡ ಡಿಸಿ ನಿತೇಶ ಪಾಟೀಲರಿಗೆ ಆತ್ಮೀಯ ಬೀಳ್ಕೊಡುಗೆ.


ಈ ಬಗ್ಗೆ ರೈತರು ಪ್ರತಿಭಟಿಸಿದಾಗ ಜಿಲ್ಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ರೈತರನ್ನೇ ವಿಲನ್ ಎನ್ನುವಂತೆ ಬಿಂಬಿಸಿದ್ದರು., ಕೊನೆಗೆ ಜಿಲ್ಲಾಧಿಕಾರಿ ನಿತೇಶ ಪಾಟೀಲರು ಖುದ್ದು ಸ್ಥಳಕ್ಕೆ ಭೆಟ್ಟಿ ನೀಡಿ ವಾಸ್ತವತೆಯನ್ನು ಪರಿಶೀಲಿಸಿದರು, ನಂತರ ತಪ್ಪು ಸಂದೇಶ ನೀಡಿದ ವಿವಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು. ಹೀಗಾಗಿ ರೈತರಿಗೆ ಆಗುತ್ತಿರುವ ಬಹುದೊಡ್ಡ ಸಮಸ್ಯೆಯನ್ನು ಬಗೆಹರಿಸುವ ಕೆಲಸವನ್ನು ಅವರು ಮಾಡಿದರು, ಇದೇ ಕಾರಣದಿಂದ ಬೆಳಗಾವಿ ಡಿಸಿ ನಿತೇಶ ಪಾಟೀಲರನ್ನು ಹಿರೇಬಾಗೇವಾಡಿ ಭಾಗದ ರೈತರು ಈಗಲೂ ನೆನಪಿಸಿಕೊಳ್ಳುತ್ತಾರೆ.

ಭೀಕರ ಬರಗಾಲ
2022-23 ರಲ್ಲಿ ಬೆಳಗಾವಿಗೆ ಭೀಕರ ಬರಗಾಲ ಎದುರಾಗಿದ್ದು, ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಡಿಸಿ ಅವರು ರೈತರ ಬಗ್ಗೆ ವಿಷೇಶ ಕಾಳಜಿ ತೋರಿ, ರೈತರ ಸಮಸ್ಯೆ ಪರಿಹರಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು.
ಕಳೆದ ಎರಡು ವರ್ಷಗಳಲ್ಲಿ ಸ್ಮಾಟರ್್ ಸಿಟಿ ಅಭಿವೃದ್ಧಿ ಸೇರಿದಂತೆ ಜಿಲ್ಲೆಯಲ್ಲಿ ಕಾಮಗಾರಿ ಕೆಲಸಗಳಿಗೆ ವೇಗ ನೀಡಿ ಅಪರೂಪದ ಡಿಸಿ ಎನಿಸಿಕೊಂಡಿದ್ದಾರೆ,
ಕಚೇರಿ ಅಚ್ಚುಕಟ್ಟು..
ಡಿಸಿ ಕಚೇರಿ ಅಂದರೆ ಹೀಗಿರಬೇಕು ಎನ್ನುವಂತೆ ಮಾಡಿದ ಹೆಗ್ಗಳಿಕೆ ನಿತೇಶ ಪಾಟೀಲರಿಗೆ ಸಲ್ಲುತ್ತದೆ,
ಡಿಸಿ ಕಚೇರಿ ಮೆಟ್ಟಿಲು ಹತ್ತಿದರೆ ಸಾಕು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳ ಭಾವಚಿತ್ರಗಳು , ಎಲ್ಲಾ ಮಹನೀಯರ ಪುಸ್ತಕಗಳನ್ನು ಒಂದೇ ಸೂರಿನಡಿಯಲ್ಲಿ ವ್ಯವಸ್ಥೆ ಮಾಡಿದ್ದು ಎಲ್ಲರ ಗಮನ ಸೆಳೆಯುತ್ತಿವೆ.
ಇನ್ನುಳಿದಂತೆ ಸುಸೂತ್ರ ಚುನಾವಣೆ ನಡೆಯಲು ಇವರು ಪಟ್ಟ ಶ್ರಮ ಅಷ್ಟಿಷ್ಟಲ್ಲ.

ಕಬ್ಬಿನ ಬಿಲ್ ಬಾಕಿ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಹೊತ್ತುಕೊಂಡು ಬಂದವರತ್ತ ಸಮಾಧಾನದಿಂದ ಮಾತಾಡಿ ನಂತರ ಸಂಬಂಧಿಸಿದವರನ್ನು ಬೆಂಡೆತ್ತುವ ಕೆಲಸವನ್ನು ನಿತೇಶ ಪಾಟೀಲ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!