Headlines

ಛತ್ತೀಸಗಡದಲ್ಲಿ ಬಿಜೆಪಿ‌ ಗೆಲುವಿಗೆ ಅಭಯ ತಾಲೀಮು

ಛತ್ತೀಸಗಡ- ದೇಶದಲ್ಲಿ ಪಂಚರಾಜ್ಯಗಳ ವಿಧಾನಸಭೆ ನಡೆಯಲಿದ್ದು ಪಂಚರಾಜ್ಯಗಳಲ್ಲಿ ಗೆಲುವು ಸಾಧಿಸಲು ಬಿಜೆಪಿ ತಾಲೀಮು ಶುರುವಾಗಿದೆ.

ಈ ಕುರಿತು ಛತ್ತೀಸಗಡ ರಾಯಾಪೂರದಲ್ಲಿ ಪಂಚರಾಜ್ಯಗಳ ಆಯ್ದ ಶಾಸಕರ ಮಹತ್ವದ ಅಭ್ಯಾಸ ವರ್ಗ ನಡೆಯಿತು ಈ ಅಭ್ಯಾಸ ವರ್ಗದಲ್ಲಿ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಚುನಾವಣೆಯಲ್ಲಿ ಅನುಸರಿಸಬೇಕಾದ ತಂತ್ರಗಾರಿಕೆಯ ಬಗ್ಗೆ ಪಂಚ ರಾಜ್ಯಗಳ ಶಾಸಕರಿಗೆ ವಿಶೇಷ ಉಪನ್ಯಾಸ ಮಾಡಿದರು.

ಪಶ್ಚಿಮ ಬಂಗಾಳ ,ಬಿಹಾರ, ಜಾರ್ಖಂಡ,ಆಸ್ಸಾಂ ಹಾಗೂ ಓಡಿಸಾ ರಾಜ್ಯಗಳ ಸುಮಾರು 55 ಶಾಸಕರು ಹಾಗೂ ಪಂಚರಾಜ್ಯಗಳ ಬಿಜೆಪಿಯ ವಿಶೇಷ ಪ್ರತಿನಿಧಿಗಳು ಈ ಅಭ್ಯಾಸ ವರ್ಗದಲ್ಲಿ ಭಾಗವಹಿಸಿದ್ದರು.

ಎಂಟು ದಿನಗಳ ಕಾಲ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮಾಡಬೇಕಾದ ಪಕ್ಷದ ಚಟುವಟಿಕೆ ಮತ್ತು ,ಗೆಲುವಿನ ಕಾರ್ಯವಿಧಾನಗಳ ಬಗ್ಗೆ ಶಾಸಕ ಅಭಯ ಪಾಟೀಲ ಅವರು ಟ್ರೇನಿಂಗ್ ನಿಡುವ ಮೂಲಕ ಪಂಚರಾಜ್ಯಗಳ ಗಮನ ಸೆಳೆದರು.

ಈ ಕಾರ್ಯಕ್ರಮದಲ್ಲಿ ಛತ್ತೀಸಗಡ ಅಭಿಯಾನದ ಪ್ರಭಾರಿಯಾಗಿದ್ದ ಅಭಯ ಪಾಟೀಲ,ಛತ್ತೀಸಗಡ ಬಿಜೆಪಿ ರಾಜ್ಯಾಧ್ಯಕ್ಷ ಅರುಣ ಶಾವೋ,ಛತ್ತೀಸಗಡ ವಿರೋಧ ಪಕ್ಷದ ನಾಯಕ ನಾರಾಯಣ ಜೀ ಹಾಗೂ ಪಂಚ ರಾಜ್ಯಗಳ ಬಿಜೆಪಿಯ ಪ್ರಮುಖ ನಾಯಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!