ಪಾಲಿಕೆ ಸ್ಥಾಯಿ ಸಮಿತಿಯಲ್ಲೂ ಬೇಕಿದೆ ಶಿಸ್ತು..!

ಬೆಳಗಾವಿ.

ಬಿಜೆಪಿ ಹಿಡಿತದಲ್ಲಿರುವ ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ ಎರಡನೇ ಅವಧಿಗೆ ಸ್ಥಾಯಿ ಸಮಿತಿಗಳು ಈಗ ಪೂರ್ಣ ಪ್ರಮಾಣದಲ್ಲಿ ರಚನೆಯಾಗಿವೆ. ಅಧ್ಯಕ್ಷರಾದವರು ಅಧಿಕಾರ ಸಹ ಸ್ವೀಕರಿಸಿದ್ದಾರೆ.

ಇನ್ನೇನು ಸ್ಥಾಯಿ ಸಮಿತ ಸಭೆಗಳೂ ಸಹ ನಡೆಯಬೇಕಿವೆ. ಈ ಮೂಲಕ ಅಭಿವೃದ್ಧಿಗೆ ಚಾಲನೆ‌ ಸಿಗಬೇಕಿದೆ.

ಆದರೆ ಈ ಸ್ಥಾಯಿ ಸಮಿತಿ ಸಭೆಗಳಲ್ಲಿ ಶಿಸ್ತು ತರುವ ಕೆಲಸ ಪ್ರಮುಖವಾಗಿ ಆಗಬೇಕಿದೆ. ನಿಯಮಾನುಸಾರ ಆಯಾ ಸ್ಥಾಯಿ ಸಮಿತಿಗೆ ಸದಸ್ಯರು ಮಾತ್ರ ಭಾಗವಹಿಸಬೇಕು. ಅದನ್ಬು ಬಿಟ್ಡು ಇನ್ನುಳಿದವರು ತಮ್ಮ ಸಮಸ್ಯೆ ಗಳಿದ್ದರೆ ಅದಕ್ಜೆ ಸಂವಂಧಿಸಿದಙತೆ ಸಮಿತಿ ಅಧ್ಯಕ್ಷರಿಗೆ ಪತ್ರ ಕೊಡಬೇಕು. ಅದರ ಬಗ್ಗೆ ಚರ್ಚೆ ನಡೆಸಿ ಉತ್ತರ ರವಾನಿಸುವ ಕೆಲಸವನ್ನು ಅಧ್ಯಕ್ಷರು ಮಾಡಬೇಕು.

ಆದರೆ ಈಗ ಏನಾಗುತ್ತಿದೆ ಅಂದರೆ, ಸ್ಥಾಯಿ ಸಮಿತಿ ಸದಸ್ಯರಲ್ಲದವರೂ ಕೂಡ ಸಭೆಯಲ್ಲಿ ಭಾಗವಹಿಸಿ ತಮಗಿಷ್ಟ ಬಂದಂತೆ ಪ್ರಶ್ನೆ ಮಾಡುತ್ತಿರುವುದು ಕಳೆದ ಬಾರಿ ಕಂಡು ಬಂದಿತ್ತು.ಇದು ಒಂದು ರೀತಿಯಲ್ಲಿ ಅಶಿಸ್ತು ಎನ್ನಬಹುದು.

ಇದನ್ನು ಗಂಭೀರವಾಗಿ ಗಮನಿಸಿದ ಶಾಸಕ ಅಭಯ ಪಾಟೀಲರು ಅನೇಕ ಬಾರಿ ತಮ್ಮ ಪಕ್ಷದ ನಗರಸೇವಕರಿಗೆ ಬುದ್ದಿ ಮಾತು ಹೇಳಿದ್ದರು. ಆದರೂ ಕೆಲವರು ಕೇಳಲೇ ಇಲ್ಲ. ಹೀಗಾಗಿ ಸ್ಥಾಯಿ ಸಮಿತಿಯಲ್ಲಿ ಶಿಸ್ತು ಮಾಯವಾಗಿತ್ತು. ಈಗ ಅಶಿಸ್ತನ್ನು ಹೋಗಲಾಡಿಸಿ ಶಿಸ್ತು ತರುವ ಕೆಲಸವನ್ನು ಮತ್ತೇ ಶಾಸಕ ಅಭಯ ಪಾಟೀಲ ಮತ್ತು ಮಾಜಿ ಶಾಸಕ ಅನಿಲ ಬೆನಕೆ ಮಾಡಬೇಕಿದೆ.

ಈ ಹಿಂದೆ ಕಡತ ನಾಪತ್ತೆ ಸೇರಿದಂತೆ ಇನ್ನಿತರ ಘಟನೆಗಳು ನಡೆದಿದ್ದವು.‌ಈಗಲೂ ಕೂಡ ಕೆಲ ಕಡತಗಳು ನಾಪತ್ತೆ ಆಗುತ್ತಿವೆ French ಮಾಹಿತಿ ಲಭ್ಯವಾಗಿವೆ. ಒಟ್ಟಾರೆ ಬಿಜೆಪಿ ವರ್ಚಸ್ಸಿಗೆ ಧಕ್ಕೆ ಬಾರದ ರೀತಿಯಲ್ಲಿ ಆಡಳಿತ ನಡೆಸುವ ಹೊಣೆ‌ ನಗರಸೇವಕರಲ್ಲಿದೆ‌ ಕಾದು ನೋಡಬೇಕು

Leave a Reply

Your email address will not be published. Required fields are marked *

error: Content is protected !!