ಬೆಳಗಾವಿ.
ಅಗ್ನಿಪಥ ಯೋಜನೆ ಕುರಿತು ಹಗುರವಾಗಿ ಮಾತನಾಡಿದ ಲೋಕಸಭೆಯ ಪ್ರತಿಪಕ್ಷದ ನಾಯು ರಾಹುಲ್ ಗಾಂಧಿ ಅವರು ಸೈನಿಕರಿಗೆ ಮಾಡಿದ ಅವಮಾನ. ಆದ್ದರಿಂದ ಕೂಡಲೇ ಅವರು ಕ್ಷಮೆ ಕೇಳಬೇಕೆಂದು ಬಿಜೆಪಿ ಮುಖಂಡ ಕುಮಾರ ಹಿರೇಮಠ ಆಗ್ರಹಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಗ್ನಿಪಥ ಯೋಜನೆಯು ಭಾರತದ ಸೈನ್ಯವನ್ನು ಬಲಪಡಿಸುವ ಹಾಗೂ ದೇಶ ಕಾಪಾಡುವ ದೇಶ ಸೇವೆಯಾಗಿದೆ.

ಆದರೆ, ಕಾಂಗ್ರೆಸ್ಸಿಗರು ಅದರಲ್ಲೂ ರಾಹುಲ್ ಗಾಂಧಿಯವರು ಈ ಯೋಜನೆ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಪ್ರಧಾನಿ ಮೋದಿಯವರು ಭಾರತೀಯ ಸೈನ್ಯಕ್ಕೆ ಬಲ ತುಂಬುತ್ತಿದ್ದಾರೆ. ಸೈನಿಕರಿಗೆ ಎಲ್ಲಾ ಸೌಕರ್ಯಗಳನ್ನು ಒದಗಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಯುವ ಸೈನಿಕರು ಹೆಚ್ಚಾಗಬೇಕು ಎಂಬ ಉದ್ದೇಶದಿಂದ ಅಗ್ನಿಪಥ ಯೋಜನೆ ಜಾರಿಗೆ ತಂದಿದ್ದಾರೆ. ಈಗಾಗಲೇ ಸುಮಾರು 80 ಸಾವಿರ ಯುವಕರು ಈಯೋಜನೆಯಡಿ ದೇಶ ಸೇವೆ ಮಾಡುತ್ತಿದ್ದಾರೆ ಎಂದರು.

ಯುವಕರಿಗೆ ಆಸರೆಯಾಗಿರುವ, ದೇಶ ಪ್ರೇಮ ಬೆಳೆಸುವ ಯೋಜನೆ ಕುರಿತು ಕಾಂಗ್ರೆಸ್ ಮುಖಂಡರು ಹಗುರವಾಗಿ ಮಾತನಾಡುತ್ತಿದ್ದು, ಸರಿಯಲ್ಲ ಎಂದರು.
ಮಹೇಶ್ ಮೋಹಿತೆ, ಸಚಿನ್ ಕಡಿ, ಬಾಳೇಶ್ ಚವ್ವನ್ನವರ, 1 ರಮೇಶ ಚೌಗಲಾ, ಜಗದೀಶ್ ಪೂಜೇರಿ ಮುಂತಾದವರು ಹಾಜರಿದ್ದರು