ಬೆಳಗಾವಿ:
ಕಾಂಗ್ರೆಸ್ ಪಕ್ಷಕ್ಕೆ ಹೋದ ಬಳಿಕ ಸಿದ್ದರಾಮಯ್ಯ ಕಾಂಗ್ರೆಸ್ ಡಿಎನ್ಎ ಸಂಪೂರ್ಣವಾಗಿ ಅಳವಡಿಸಿಕೊಂಡಿದ್ದು, ಪರಮ ಭ್ರಷ್ಟರಾಗಿ ಹೊರ ಹೊಮ್ಮಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಾಗ್ದಾಳಿ ಮಾಡಿದರು.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ನೇರ ಹಸ್ತಕ್ಷೇಪ ಮತ್ತು ಆಶೀರ್ವಾದಿಂದ ವಾಲ್ಮೀಕಿ ನಿಗಮ ಮತ್ತು ಮುಡಾ ಎರಡೂ ಹಗರಣಗಳು ನಡೆದಿವೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸಿಬಿಐ ತನಿಖೆ ಎದುರಿಸಬೇಕು. ಶುದ್ಧಹಸ್ತರಾದರೆ ಮತ್ತೆ ಅವರನ್ನೆ ಬೇಕಾದರೆ ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಮಾಡಬೇಕು ಎಂದು ಒತ್ತಾಯಿಸಿದರು.

. ಭ್ರಷ್ಟಾಚಾರ ಎನ್ನುವ ಲಕ್ಷಾಂತರ ಮೊಟ್ಟೆಗಳನ್ನು ಇಟ್ಟು ಅದಕ್ಕೆ ಸದಾಕಾಲ ಕಾವು ಕೊಟ್ಟು ಬಂದಿದ್ದು ಕಾಂಗ್ರೆಸ್ ಪಕ್ಷ. ಜವಾಹಾರಲಾಲ್ ನೆಹರು ಕಾಲದಿಂದ ಹಿಡಿದು ಕಾಂಗ್ರೆಸ್ ನ ಎಲ್ಲಾ ಪ್ರಧಾನಮಂತ್ರಿಗಳ ಕಾಲದಲ್ಲಿಯೂ ಬ್ರಹ್ಮಾಂಡ ಭ್ರಷ್ಟಾಚಾರಗಳು, ಹಗರಣಗಳು ನಡೆದಿವೆ ಎಂದು ಪ್ರಹ್ಲಾದ್ ಜೋಶಿ ಆರೋಪಿಸಿದರು.
ಈಗ ಸಿದ್ದರಾಮಯ್ಯ ನೇತೃತ್ವದಲ್ಲಿ 189 ಕೋಟಿ ರೂ. ವಾಲ್ಮೀಕಿ ಹಗರಣ ನಡೆದಿದೆ. ಸಿದ್ದರಾಮಯ್ಯನವರು ಅತ್ಯಂತ ಬಾಲಿಶವಾಗಿ ಮತ್ತು ನಿರ್ಲಜ್ಜತನದಿಂದ ತಮ್ಮನ್ನು ಸಮರ್ಥಿಸಿಕೊಳ್ಳುವ ಮಟ್ಟಕ್ಕೆ ಇಳಿದಿದ್ದಾರೆ. ಅಧಿಕಾರಿಗಳಿಂದ ಆಗಿದ್ದು ಎಂದಾದರೆ ನಾಗೇಂದ್ರ ರಾಜೀನಾಮೆ ಯಾಕೆ ಕೊಡಿಸಿದಿರಿ..? ಎಸ್ಐಟಿ ಅವರನ್ನು ಯಾಕೆ ಕರೆಸಿತ್ತು. ಕರೆಸಿ ಏನೂ ಮಾಡಿಲ್ಲ ಎಂಬುದು ನಮಗೂ ಗೊತ್ತಿದೆ. ಆದರೆ, ಈ ಡ್ರಾಮಾ ಯಾಕೆ ಮಾಡಿದಿರಿ ಎಂದು ಪ್ರಹ್ಲಾದ್ ಜೋಶಿ ಕುಟುಕಿದರು.

ಬೆಳಗಾವಿಯಲ್ಲಿ ಪಾರಸ ಸಹಕಾರಿ ಸಂಘವನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಿದರು.
ನನ್ನ ಸಾರ್ವಜನಿಕ ಬದುಕು ಅತ್ಯಂತ ಶುದ್ಧ ಹಸ್ತವಾಗಿದೆ ಎಂದಿರುವ ಸಿದ್ದರಾಮಯ್ಯ ಹ್ಯಾಬ್ರೋಡ್ ವಾಚ್ ತೆಗೆದುಕೊಂಡಿದ್ದು ಯಾಕೆ..? ಅರ್ಕಾವತಿ ರಿಡೂ ಹಗರಣದಲ್ಲಿ ಇವತ್ತಿಗೂ ಕೆಂಪಣ್ಣ ಆಯೋಗದ ವರದಿ ಯಾಕೆ ಜಾರಿ ಮಾಡುತ್ತಿಲ್ಲ ಎಂದು ಪ್ರಹ್ಲಾದ ಜೋಶಿ ಕಿಡಿಕಾರಿದರು.
. ಹಿಂದೆ ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಮನೆ ಬಿದ್ದರೆ ನಾವು 5 ಲಕ್ಷ ಪರಿಹಾರ ಮಾಡಿದ್ದೇವು. ಈಗ ಅದನ್ನು 1 ಲಕ್ಷ ರೂ. ಕಡಿಮೆ ಮಾಡಿದ್ದಾರೆ. ಮನೆಯೊಳಗೆ ನೀರು ಹೊಕ್ಕರೆ 10 ಸಾವಿರ ಕೊಡುತ್ತಿದ್ದೇವು. ಅದನ್ನು 5 ಸಾವಿರ ರೂಪಾಯಿಗೆ ಇಳಿಸಿದ್ದಾರೆ. ಜನರ ಬಗ್ಗೆ ಕಾಳಜಿ ಇಲ್ಲ. ಗ್ಯಾರಂಟಿ ಹೆಸರಿನಲ್ಲಿ ಅರ್ಧಮರ್ಧ ಗ್ಯಾರಂಟಿ ಕೊಟ್ಟು, ಪೆಟ್ರೋಲ್-ಡಿಸೇಲ್ ಏರಿಸಿದ್ದಾರೆ. ಇತ್ತಿಚೆಗೆ ಯಾವ ರಾಜ್ಯದಲ್ಲೂ ತೈಲ ಬೆಲೆ ಏರಿಸಿಲ್ಲ. ಆದರೆ, ಇವ್ರು ಜಾಸ್ತಿ ಮಾಡಿ ಜನರ ಮೇಲೆ ಹೊರೆ ಹಾಕಿದ್ದಾರೆ. ಹಾಗಾಗಿ, ತಕ್ಷಣವೇ ಎಚ್ಚೆತ್ತುಕೊಂಡು ಕೆಲಸ ಮಾಡಿ. ಮೊದಲು ನೀವು ರಾಜೀನಾಮೆ ಕೊಡಿ, ಉಳಿದಿದ್ದೆಲ್ಲಾ ಸರಿಯಾಗುತ್ತದೆ
ಪ್ರವಾಹ ಪರಿಸ್ಥಿತಿ ಉದ್ಭವಿಸಿದರೂ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡದಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ತಮ್ಮ ಕ್ಷೇತ್ರಗಳಲ್ಲೆ ಉಳಿದು ಬಿಟ್ಟಿದ್ದಾರೆ ಎಂದು ಆರೋಪಿಸಿದರು.