ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸತತ 7ನೇ ಬಾರಿಗೆ ಕೇಂದ್ರ ಬಜೆಟ್ ಮಂಡನೆ ಮಾಡಿದ್ದಾರೆ. ಮೋದಿ ಸರ್ಕಾರದ ಮೂರನೇ ಅವಧಿಯ ಸರ್ಕಾರದ ಮೊದಲ ಬಜೆಟ್ ಇದಾಗಿದೆ. 6 ಬಾರಿ ಪೂರ್ಣಾವಧಿ ಹಾಗೂ ಒಂದು ಬಾರಿ ಮಧ್ಯಂತರ ಬಜೆಟ್ ಅನ್ನು ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ.

ಬಜೆಟ್ ಪ್ರಮುಖ ಅಂಶಗಳು ಇಲ್ಲಿವೆ *
1.52 ಲಕ್ಷ ಕೋಟಿ ರೂ. ಹಣ ಕೃಷಿ ವಲಯಕ್ಕೆ ಮೀಸಲು
- ದೇಶದ 100 ಜಿಲ್ಲೆಗಳಲ್ಲಿ ಡಿಜಿಟಲ್ ಬೆಳೆ ಸರ್ವೆ ನಡೆಸಲು ಯೋಜನೆ
- ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನ 5 ರಾಜ್ಯಗಳಲ್ಲಿ ನೀಡಲು ಕೇಂದ್ರ ಸಿದ್ದತೆ
- ಸಹಜ ಕೃಷಿಗೆ ಆದ್ಯತೆ ನೀಡಲು ಸರ್ಕಾರದ ಸರ್ವ ಕ್ರಮ
- ತರಕಾರಿ ಬೆಳೆಗಳ ಉತ್ಪಾದನೆ, ಸಂಗ್ರಹ ಉತ್ತೇಜನಕ್ಕಾಗಿ ರೈತರಿಗೆ ನೆರವು
- ಗ್ರಾಮೀಣ ಭಾಗದ ಆರ್ಥಿಕತೆ ವೃದ್ದಿಗೆ ಆದ್ಯತೆ
- ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಮುಂದಿನ 5 ವರ್ಷಕ್ಕೆ ವಿಸ್ತರಣೆ
- ಉದ್ಯೋಗ, ಎಂಎಸ್‌ಎಂಇ ಹಾಗೂ ಮಧ್ಯಮ ವರ್ಗದವರನ್ನು ಗುರಿಯಾಗಿಸಿ ಹಲವು ಯೋಜನೆ

- ಬಡವರು, ಮಹಿಳೆಯರು, ರೈತರು ಹಾಗೂ ಯುವಕರತ್ತ ಸರ್ಕಾರದ ಚಿತ್ತ
- ವಿಕಸಿತ ಭಾರತದ ಆಶಯದೊಂದಿಗೆ ಹಲವು ಆರ್ಥಿಕ ಸುಧಾರಣಾ ಕ್ರಮ
- ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿಗೆ 1.48 ಲಕ್ಷ ಕೋಟಿ ಮೀಸಲು
- ಕೇಂದ್ರ ಬಜೆಟ್‌ನಲ್ಲಿ ಒಟ್ಟು 9 ಅಂಶಗಳಿಗೆ ಆದ್ಯತೆ * ಕೃಷಿ, ಉದ್ಯೋಗ, ಸಾಮಾಜಿಕ ನ್ಯಾಯ, ಸೇವೆ, ನಗರ ಅಭಿವೃದ್ಧಿ, ಇಂಧನ ಹಾಗೂ ಸಂಶೋಧನೆಗೆ ಆದ್ಯತೆ
- ‘ಪಿಎಂ ಸೂರ್ಯ ಘರ್’ ಯೋಜನೆ ಅಡಿ ರೂಫ್ ಟಾಪ್ ಸೋಲಾರ್ ಶಕ್ತಿ ಯೋಜನೆ * 300 ಯುನಿಟ್‌ವರೆಗೆ ಉಚಿತ ವಿದ್ಯುತ್ ಬಳಕೆಗೆ ಅವಕಾಶ
- 26 ಸಾವಿರ ಕೋಟಿ ರೂ. ವೆಚ್ಚದಲ್ಲಿ ದೇಶಾದ್ಯಂ ತ ರೈಲ್ವೆ ಯೋಜನೆಗಳು Budget 2024: ಮೋದಿ ಸರ್ಕಾರಕ್ಕೆ ಬಂತಾ ಬುದ್ಧಿ? ಉದ್ಯೋಗ ಸೃಷ್ಟಿಗೆ ಕೊನೆಗೂ ಆದ್ಯತೆ!
- ಬಿಹಾರದಲ್ಲಿ ರಸ್ತೆ ಅಭಿವೃದ್ದಿಗೆ 26 ಸಾವಿರ ಕೋಟಿ
- ಬೆಂಗಳೂರು – ಹೈದರಾಬಾದ್ ಹೆದ್ದಾರಿ ಅಭಿವೃದ್ದಿ ಯೋಜನೆ
- ಪ್ರಧಾನ ಮಂತ್ರಿ ಆವಾಸ್ ಯೋಜಹನೆ ಅಡಿ ದೇಶಾದ್ಯಂತ ಮೂರು ಕೋಟಿ ಹೊಸ ಮನೆಗಳ ನಿರ್ಮಾಣ Budget 2024: ಷೇರುಮಾರುಕಟ್ಟೆಗೆ ಆಘಾತ; ಆರಂಭದಲ್ಲೇ ಭಾರಿ ಕುಸಿತ
- ಬಿಹಾರ ಹಾಗೂ ಆಂಧ್ರ ಪ್ರದೇಶ ರಾಜ್ಯಗಳಿಗೆ ವಿಶೇಷ ಅನುದಾನದ ಭರವಸೆ
- ಆಂಧ್ರ ಪ್ರದೇಶಕ್ಕೆ ಪುನರ್ ನಿರ್ಮಾಣ ಮನವಿಗೆ ಕೇಂದ್ರದ ಅಸ್ತು
- ಬಿಹಾರ ರಾಜ್ಯದ ಅಭಿವೃದ್ಧಿಗೂ ಹೊಸ ಯೋಜನೆ
- ಉದ್ಯೋಗ ಸೃಷ್ಟಿಗೆ ಮೂರು ಕೌಶಲ್ಯ ಯೋಜನೆಗಳ ಜಾರಿ
- ದೇಶೀಯ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳಿಗೆ 10 ಲಕ್ಷ ರೂ.ವರೆಗೆ ಸಾಲ ಸೌಲಭ್ಯ
- ಪ್ರತಿ ವರ್ಷ 1 ಲಕ್ಷ ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯ