ಬೆಳಗಾವಿ.ಗಡಿನಾಡ ಬೆಳಗಾವಿಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯ ಅರ್ಭಟದಿಂದ ಆಗುತ್ತಿರುವ ಅನಾಹುತಗಳನ್ನು ಪರಿಶೀಲಿಸಲು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮತ್ತು ಶಾಸಕ ಅಭಯ ಪಾಟೀಲ ಖುದ್ದು ಫೀಲ್ಡಿಗಿಳಿದಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರು ಇವತ್ತು ರಾಯಬಾಗ, ಕುಡಚಿ ಭಾಗದಲ್ಲಿ ಪ್ರವಾಸ ಮಾಡಿ ಪ್ರವಾಹ ಪೀಡಿತ ಪ್ರದೇಶಕ್ಕೆ ಭೆಟ್ಟಿ ನೀಡಿದರು.

ಇತ್ತ ಮತ್ತೊಂದು ಕಡೆಗೆ ಶಾಸಕ ಅಭಯ ಪಾಟೀಲರು ದಕ್ಷಿಣ ಕ್ಷೇತ್ರದ ಪ್ರವಾಹ ಪಿಡೀತ ಭಾಗದಲ್ಲಿ ಸಂಚರಿಸಿದರು.
ಇದರ ಜೊತೆಗೆ ಆಯಾ ಭಾಗದ ನಗರಸೇವಕರು ತಮ್ಮ ತಮ್ಮ ವಾರ್ಡಗಳಲ್ಲಿ ಸಂಚರಿಸಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿದರು.