insta love ಗೆ ಬಿಗ್ ಟ್ವಿಸ್ಟ್. ಆ ಪತ್ರ ಬಹಿರಂಗಪಡಿಸಿತು ಅಸಲಿ ಕಹಾನಿ
ಬೆಳಗಾವಿ: ಕೋಟ್ಯಾಧೀಶರ ಪುತ್ರಿಯೆಂದು ಹೇಳಿಕೊಂಡು ಹುಡುಗರನ್ನು ಯಾಮಾರಿಸಿ ಮೋಸದಿಂದ ಮದುವೆ ಮಾಡುತ್ತಾ ಹಣ ಪೀಕುವುದಕ್ಕೆ ಸ್ಕೆಚ್ ಹಾಕುತ್ತಿದ್ದ ಐನಾತಿ ಗೌಡತಿಯೊಬ್ಬಳು ಬೆಳಗಾವಿ ಪೊಲೀಸರ ಮುಂದೆ ಲಾಕ್ ಆಗಿದ್ದಾಳೆ.

ಹೌದು, ನಿನ್ನೆಯಷ್ಟೇ ಲವ್ ಮ್ಯಾರೇಜ್ ಮಾಡಿಕೊಂಡು ಪೊಲೀಸ್ ರಕ್ಷಣೆ ಕೇಳಿದ ಯುವತಿಯೇ ಈಗ ಮತ್ತೊಬ್ಬನ ಪತ್ನಿ ಎಂಬ ಅಂಶ ಬಯಲಾಗಿದ್ದು, ಬೆಂಗಳೂರಿನ ಕಸ್ತೂರಿನಗರದವಳೆಂದು ಹೇಳಿಕೊಳ್ಳುತ್ತಿದ್ದ ಯುವತಿ ಶಿವಮೊಗ್ಗ ಮೂಲದವಳು ಎಂಬ ಅಂಶ ವಿಚಾರಣೆ ವೇಳೆ ಬಯಲಾಗಿದೆ.

ಅಂದಹಾಗೆ ಬೆಳಗಾವಿಯ ಆಲಾರವಾಡದ ರಾಹುಲ್ ಕೋಲಕಾರನನ್ನು ಪಾರಿಶ್ವಾಡದ ದೇವಸ್ಥಾನದಲ್ಲಿ ಪ್ರೇಮವಿವಾಹವಾದ ಪ್ರಿಯಾಂಕಾಗೌಡ ಕಿತಾಪತಿ ಇದು. ಹನಿಟ್ರ್ಯಾಪ್ ಮಾದರಿಯಲ್ಲಿ ಗಂಡಸರನ್ನು ಮದುವೆಯಾಗುವುದಾಗಿ ನಂಬಿಸಿ ನಂತರ ಮೋಸ ಮಾಡಿ ಹೋಗಿ ಮತ್ತೊಬ್ಬನನ್ನು ವರಿಸುವುದೇ ಪ್ರಿಯಾಂಕಾ ಚಾಳಿ ಎಂಬ ಬಗ್ಗೆಯೂ ಶಂಕೆ ಮೂಡುತ್ತದೆ.
ಯೀಳರಾಗ ಯಾರೂ ಹುಟ್ಟಿಲ್ಲ..!
https://youtube.com/shorts/aG1PQhj0za0?si=7gXrfqsW5Mt1aAlF
ಈಗಾಗಲೇ ಎರಡು ಮದುವೆಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಬೆಳಗಾವಿಯ ರಾಹುಲ್ ಪ್ರಿಯಂಕಾಗಳ ಮೂರನೇ ಪತಿ ಎಂಬ ಮಾಹಿತಿಯನ್ನು ಶಿಡ್ಲಘಟ್ಟದ ನಿವಾಸಿ, ಪ್ರಿಯಾಂಕಾ ಪರಿಚಿತ ಗೋಪಾಲ ಅವರು ಬಿಚ್ಚಿಟ್ಟಿದ್ದಾರೆ. ಮದುವೆ ಹೆಸರಿನಲ್ಲಿ ದೇವಾಲಯದಲ್ಲಿ ತಾಳಿ ಕಟ್ಟಿಸಿಕೊಂಡು ನಂತರ ಮರ್ಯಾದೆಗೆ ಅಂಜಿಸಿ ಸೆಟ್ಲ್‌ಮೆಂಟ್ ಹೆಸರಿನಲ್ಲಿ ಹಣ ಪೀಕುವುದೇ ಈ ಯುವತಿಯ ಉದ್ದೇಶವಿರಬಹುದು ಎಂಬ ಅನುಮಾನ ಮೂಡುವಂತಾಗಿದೆ.
ಒಟ್ಟಿನಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಜಾಲ ಬೀಸಿರುವ ಪ್ರಿಯಾಂಕ ಬಗ್ಗೆ ಹಲವು ಅನುಮಾನ ಎದ್ದಿದ್ದು, ಪ್ರಕರಣವನ್ನು ಬೆಳಗಾವಿ ಪೊಲೀಸರು ಬೇಧಿಸುವ ವಿಶ್ವಾಸವಿದೆ. ಸದ್ಯ ಪ್ರಿಯಾಂಕಾಳ ಪತಿ ಸುಧಾಕರ ಬೆಳಗಾವಿಗೆ ಆಗಮಿಸಿದ್ದು, ವಿಚಾರಣೆ ಬಳಿಕವಷ್ಟೇ ಮತ್ತಷ್ಟು ಮಾಹಿತಿಗಳು ಹೊರಬೀಳಲಿದೆ.