ಬೆಳಗಾವಿ.
ಕರ್ನಾಟಕದ ಗಂಡು ಮೆಟ್ಟಿದ ನಾಡು ಎಂದುಕರೆಯಿಸಿಕೊಳ್ಖುವ ಈ ಕನ್ನಡ ನೆಲದಲ್ಲಿ ಈಗ ಪೊಲೀಸರು ವಿರೋಧ ವ್ಯಕ್ತಪಡಿಸುತ್ತುದ್ದಾರೆಯೇ?
ಉಚಗಾವಿ ಗ್ರಾಮದಲ್ಲಿ ಕಳೆದ ಎರಡು ವರ್ಷದಿಂದ ಕನ್ನಡ ಬಾವುಟ ಹಾರಿಸಬೇಕು ಎನ್ನುವ ಮನವಿಗೆ ಅಲ್ಲಿನ ಪಂಚಾಯತಿಯವರು ಅನುಮತಿ ನೀಡಲಿಲ್ಕ.ಈಗ ಶಾಂತಿ ಕದಡುವ ನೆಪವಿಟ್ಟುಕೊಂಡು ನಾಡದ್ರೋಹಿಗಳ ತಾಳಕ್ಕೆ ತಕ್ಕಂತೆ ಪೊಲೀಸ ಇಲಾಖೆ ಕುಣಿಯುತ್ತಿದೆ. ಹೀಗಾಗಿ ಕನ್ನಡಿಗರ ಆಸೆಗೆ ತಣ್ಣೀರು ಹಾಕುವ ಕೆಲಸವನ್ನು ಮಾಡಲಾಗುತ್ತಿದೆ.

ಉಚಗಾವಿಯಲ್ಲಿ ರಾಯಣ್ಣ ಪುತ್ಥಳಿ ಕನ್ನಡ ಭಾವುಟ ಹಾರಿಸಲು ಅನುಮತಿ ಸಿಗದ ಪೊಲೀಸರ ಕ್ರಮದ ವಿರುದ್ಧ ಕನ್ನಡಪರ ಸಂಘಟನೆಗಳು ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದವು.
ಉಚಗಾಂವ ಗ್ರಾಮದಲ್ಲಿ ರಾಯಣ್ಣ ಪುತ್ಥಳಿ ಹಾಗೂ ಕನ್ನಡ ಭಾವುಟಕ್ಕೆ ಪೋಲಿಸರು ವಿರೋಧ ವ್ಯಕ್ತಪಡಿಸುತ್ತಿದ್ದಾರೆಂದು ಸಂಘಟನೆಗಳು

ಕರವೇ ಶಿವರಾಮೇಗೌಡ ಬಣ ಹಾಗೂ ಕರವೇ ಕನ್ನಡ ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಕರವೇ ಕನ್ನಡ ಸೇನೆ ರಾಜ್ಯಾಧ್ಯಕ್ಷ ಅನಿಲ್ ಕುಮಾರ, ಕರವೇ ಶಿವರಾಮೇಗೌಡ ವಾಜೀದ್ ಹಿರೇಕೂಡಿ,ಅನಿಲ ದಡ್ಡಿಮನಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಹಲವು ಬಾರಿ ಮನವಿ ಸಲ್ಲಿಸಿದರೂ ಕೂಡ ಉಚಗಾಂವ ಗ್ರಾಮದಲ್ಲಿ ಎರಡು ವರ್ಷದಿಂದ ಕನ್ನಡ ಭಾವಟ ಹಾರಿಸಲು ಅನುಮತಿ ಸಿಗುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶವ್ಯಕ್ತಪಡಿಸಿದರು.