ವಿಜಯಪುರ, ಗೋವಾ, ತೆಲಂಗಾಣ ಮುಗೀತು.ಈಗ. ಮಹಾ ಸರದಿ.
ಮಹಾ ಚುನಾವಣೆಯಲ್ಲೂ ಅಭಯ ಪಾಟೀಲಗೆ ಮಹತ್ವದ ಜವಾಬ್ದಾರಿ ಕೊಟ್ಟ ಬಿಜೆಪಿ ಹೈಕಮಾಂಡ.
ಅಭಯ ಕಾಲಿಟ್ಟಕಡೆಗೆಲ್ಲಾ ಸೋಲು ಅನ್ನೋದೇ ಇಲ್ಲ

ಬೆಳಗಾವಿ
ಮುಂಬರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ, ಭಾರತೀಯ ಜನತಾ ಪಕ್ಷ ದೇಶದ 25 ನಾಯಕರನ್ನು ಉಸ್ತುವಾರಿಗಳಾಗಿ ನೇಮಿಸಲಾಗಿದೆ. ಇದರಲ್ಲಿ ಶಾಸಕ ಅಭಯ ಪಾಟೀಲ ಅವರನ್ನು ಆಯ್ಕೆ ಮಾಡಲಾಗಿದೆ.

ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಕೊಲ್ಲಾಪುರ ಜಿಲ್ಲಾ ಪ್ರವಾಸಿ ಉಸ್ತುವಾರಿಯಾಗಿ 10 ಕ್ಷೇತ್ರಗಳ ಜವಾಬ್ದಾರಿಯನ್ನು ಶಾಸಕ ಅಭಯ ಪಾಟೀಲ ಅವರಿಗೆ ವಹಿಸಿದ್ದಾರೆ.
4ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಅಭಯ ಪಾಟೀಲರು ಈ ಹಿಂದೆ ಛತ್ತೀಸ್‌ಗಢ ರಾಜ್ಯದ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದರು.

ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲೂ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿದ್ದರು. ಇವರ ಚುನಾವಣಾ ಉಸ್ತುವಾರಿಯಲ್ಲಿ ಇಡೀ ತೆಲಂಗಾಣ ರಾಜ್ಯದಲ್ಲಿ ಬಿಜೆಪಿಗೆ ಭರ್ಜರಿ ಯಶಸ್ಸು ಸಿಕ್ಕಿದೆ. ಈ ಸಂಪೂರ್ಣ ಯಶಸ್ಸು ಪರಿಗಣಿಸಿದ ಪಕ್ಷ ಶಾಸಕ ಅಭಯ ಪಾಟೀಲ ಅವರಿಗೆ ಮಹಾರಾಷ್ಟ್ರ ರಾಜ್ಯದ ಚಂದಗಡ, ರಾಧಾನಗರ, ಕಾಗಲ್, ಕೊಲ್ಲಾಪುರ ದಕ್ಷಿಣ, ಕರವೀರ, ಕೊಲ್ಲಾಪುರ ಉತ್ತರ, ಸಾಹುವಾಡಿ, ಆತಕನಗಲೆ, ಇಂಚಲಕರಂಜಿ ಹಾಗೂ ಶಿರೋಳ ಮತಕ್ಷೇತ್ರಗಳ ಉಸ್ತುವಾರಿ ನೀಡುವುದರೊಂದಿಗೆ ಮತ್ತೊಂದು ಮಹತ್ವದ ಜವಾಬ್ದಾರಿ ವಹಿಸಿದ್ದಾರೆ.