ಹೊಸ ಸಿಎಂ ರೇಸನಲ್ಲಿ ಸತೀಶ ಜಾರಕಿಹೊಳಿ. ಜಿ. ಪರಮೇಶ್ವರ, ಬಿ.ಕೆ. ಹರಿಪ್ರಸಾದ?
ಸಚಿವ ಸತೀಶ್ ಜಾರಕಿಹೊಳಿಯವರಿಗೆ ಸಿಎಂ ತಪ್ಪಿದರೆ ಕೆಪಿಸಿಸಿ ಸಾರಥ್ಯ.ಸಿದ್ದರಾಮಯ್ಯನವರಿಗೆ ಸತೀಶ್ ಜಾರಕಿಹೊಳಿ ಪರಮಾಪ್ತರು.
ಬೆಂಗಳೂರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಶನ ಗೆ ಅನುಮತಿ ನೀಡಿದ ನಂತರ ಮುಂದಿನ ಸಿಎಂ ಯಾರು ಎನ್ನುವ ಚರ್ಚೆ ಜೋರಾಗಿ ನಡೆದಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜೀನಾಮೆ ನೀಡಲೇಬೇಕೆಂದು ಪಕ್ಷದೊಳಗೆ ಮತ್ತು ಹೊರಗೆ ಪ್ರತಿಭಾನೆಗಳು ಜೋರಾಗಿ ನಡೆದಿವೆ.

ಮತ್ತೊಂದು ಕಡೆಗೆ ಸಿಎಂ ಅವರು ಕಾನೂನು ಸಮರಕ್ಕೂ ರೆಡಿ ಆಗಿದ್ದಾರೆ. ಆದರೆ ಇದೆಲ್ಲದರ ನಡುವೆ ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಚರ್ಚೆ ಜೋರಾಗಿ ನಡೆದಿದೆ.

ಕಾಂಗ್ರೆಸ್ ಪಕ್ಷದಲ್ಲಿ ಸಿದ್ದುಬಣವು ಯಾವುದೇ ಕಾರಣಕ್ಕೂ ಡಿ.ಕೆ ಶಿವಕುಮಾರ ಮಾತ್ರ ಮುಖ್ಯ ಮಂತ್ರಿ ಆಗಬಾರದು ಎಂದು ಪಟ್ಟು ಹಿಡಿದಿದೆ. ಒಂದು ವೇಳೆ ಸಿಎಂ ಗಾದಿಗೆ ಡಿ.ಕೆ ಶಿ ಅವರು ಬಂದರೆ ಸರ್ಕಾರ ಪತನ ಗ್ಯಾರಂಟಿ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಹೀಗಾಗಿ ಸಿಎಂ ಗಾದಿಗೆ ಮೂವರ ಹೆಸರು ಪ್ರಭಲವಾಗಿ ಕೇಳಿ ಬರುತ್ತಿದೆ.
ಸಧ್ಯ ಬಂದಿರುವ ಮಾಹಿತಿ ಪ್ರಕಾರ ಜಿ. ಪರಮೇಶ್ವರ, ಬಿ.ಕೆ. ಹರಿಪ್ರಸಾದ್ ಅಥವಾ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೆಸರು ಸಿಎಂ ರೇಸ್ ನಲ್ಲಿ ಕೇಳಿ ಬರುತ್ತಿವೆ.

ಒಂದು ವೇಳೆ ಸಿದ್ದು ಸಿಎಂ ಹುದ್ದೆಯಿಂದ ಕೆಳಗಿಳಿದರೆ ಈ ಮೂವರಲ್ಲಿ ಒಬ್ಬರು ಮುಖ್ಯಮಂತ್ರಿ ಆಗಬೇಕು ಎನ್ನುವ ಕೂಗು ಹೆಚ್ಚಾಗಿದೆ.
ಇಲ್ಲಿ ಸತೀಶ್ ಜಾರಕಿಹೊಳಿ ಅವರಿಗೆ ಒಂದು ವೇಳೆ ಸಿಎಂ ಗಾದಿ ತಪ್ಪಿದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಪಕ್ಕಾ ಎನ್ನುವ ಮಾತಿದೆ.
