ಬೆಳಗಾವಿ ಪಾಲಿಕೆ ಮೇಲೆ ನ್ಯಾಯಾಂಗ ತೂಗುಗತ್ತಿ’
ಪಾಲಿಕೆ ಆಯುಕ್ತರು ಮತ್ತು ಉಪ ವಿಭಾಗಾಧಿಕಾರಿಗಳಿಗೆ ಖುದ್ದು ಹಾಜರಾತಿಗೆ ಹೈಕೋರ್ಟ ಸೂಚನೆ.
ತುರ್ತು ವಿಶೇಷ ಸಭೆ ಕರೆಯುವ ಅಜೆಂಡಾ ಪತ್ರತೆಗೆದುಕೊಂಡು ಕೋರ್ಟಗೆ ಹೋಗುವ ಸಿದ್ಧತೆ.
GST ಸಹ ಪಾವತಿಸದ ಮಹಾನಗರ ಪಾಲಿಕೆ
ಬೆಳಗಾವಿ.
ಅಭಿವೃದ್ಧಿ ಕಾಮಗಾರಿಗಳಿಗಾಗಿ ಅನುದಾನಕ್ಕೆ ಪರದಾಟ ನಡೆಸಿರುವ ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಮೇಲೆ ಈಗ 20 ಕೋಟಿ ರೂ ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ನಿಂದನೆ ತೂಗುಗತ್ತಿ ನೇತಾಡುತ್ತಿದೆ.
ಈ ನಿಟ್ಟಿನಲ್ಲಿ ಬೀಸೋ ದೊಣ್ಣೆಯಿಂದ ಪಾರಾಗುವ ನಿಟ್ಟಿನಲ್ಲಿ ಪಾಲಿಕೆಯ ವಿಶೇಷ ಸಭೆ ಕರೆದು ಚರ್ಚೆ ನಡೆಸುವ ಬಗ್ಗೆ ತೀರ್ಮಾನ ಮಾಡಲಾಗಿದೆ.

ಇದೆಲ್ಲದರ ಮಧ್ಯೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಬೆಳಗಾವಿ ಪಾಲಿಕೆ ಆಯುಕ್ತರು ಮತ್ತು ಉಪವಿಭಾಗಾಧಿಕಾರಿಗಳಿಗೆ ಖುದ್ದು ಹಾಜರಾತಿಗೆ ಹೈ ಕೋರ್ಟ ನಿರ್ದೇಶನ ನೀಡಿದೆ .
ಅವರ ಕೈಗೆ ಸಭೆ ಕರೆದು ಚರ್ಚೆ ನಡೆಸುವ ಪತ್ರವನ್ನು ಕೊಟ್ಟು ಕಳಿಸಲು ಪಾಲಿಕೆ ನಗರಸೇವಕರು ನಿರ್ಧರಿಸಿದ್ದಾರೆಂದು ಗೊತ್ತಾಗಿದೆ.

ಅಭಿವೃದ್ಧಿ ಅನುದಾನಕ್ಕೆ ಪರದಾಟ ನಡೆಸಿದ್ದ ಮಹಾನಗರ ಪಾಲಿಕೆಗೆ ಈ 20 ಕೋಟಿ ಹಣ ಪಾವತಿಯದ್ದೇ ದೊಡ್ಡ ತಲೆನೋವಾಗಿದೆ.
ಇದರ ಜೊತೆಗೆ ಮಹಾನಗರ ಪಾಲಿಕೆ ಜಿಎಸ್ಟಿ ಹಣ 5 ಕೋಟಿ ರೂ. ಪಾವತಿ ಮಾಡಬೇಕಿತ್ತು. ಈಗ ಅದರ ದಂಡ ಸೇರಿ 8 ಕೋಟಿ ಪಾವತಿಸಬೇಕೆಂದು ಇಲಾಖೆ ಸೂಚನೆ ನೀಡಿದೆ ಎಂದು ಹೇಳಲಾಗಿದೆ.