ಬೆಳಗಾಂ ಶುಗರ್ಸ್: ಆ. 31ರಂದು ಸಕ್ಕರೆ ವಿತರಣೆ ಮುಕ್ತಾಯ
*ಕಬ್ಬು ಪೂರೈಸಿದ ರೈತರಿಗೆ ವಿಶೇಷ ಸೂಚನೆ
ಬೆಳಗಾವಿ: ಹುದಲಿಯ ಬೆಳಗಾಂ ಶುಗರ್ಸ ಪ್ರೈ ಲಿ ಕಾರ್ಖಾನೆಗೆ ಕಬ್ಬು ಪೂರೈಸಿದ ರೈತರಿಗೆ ರಿಯಾಯಿತಿ ದರದಲ್ಲಿ ಸಕ್ಕರೆ ವಿತರಣೆ ಮಾಡಲಾಗುತ್ತಿದ್ದು, ಈ ಸಕ್ಕರೆ ವಿತರಣೆ ದಿನಾಂಕ: 31.08.2024 ರಂದು ಮುಕ್ತಾಯಗೊಳಿಸಲು ನಿರ್ಧರಿಸಲಾಗಿದೆ ಎಂದು ಬೆಳಗಾಂ ಶುಗರ್ಸ ಪ್ರೈ ಲಿ ಕಾರ್ಖಾನೆಯ ಹಿರಿಯ ಉಪಾಧ್ಯಕ್ಷರಾದ ಎಲ್.ಆರ್. ಕಾರಗಿ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ವಿಷಯ ತಿಳಿಸಿದ ಅವರು, ಸನ್ 2023-24ರ ಹಂಗಾಮಿನಲ್ಲಿ ನಮ್ಮ ಕಾರ್ಖಾನೆಗೆ ಕಬ್ಬು ಪೂರೈಸಿದ ಎಲ್ಲ ರೈತ ಬಾಂಧವರಿಗೆ ತಿಳಿಸುವುದೇನದರೆ, ತಾವು ಪೂರೈಸಿದ ಪ್ರತಿ ಟನ್ ಕಬ್ಬಿಗೆ 500 ಗ್ರಾಂ. (ಅರ್ಧಕೆ.ಜಿ)ಯಂತೆ ಸಕ್ಕರೆಯನ್ನು ಪ್ರತಿ ಕಿ.ಗ್ರಾಂ.ಗೆ ರೂ. 20/-ರ ರಿಯಾಯಿತಿ ದರದಲ್ಲಿ ವಿತರಿಸುವ ಕುರಿತು ಕಾರ್ಖಾನೆಯ ಆಡಳಿತ ಮಂಡಳಿಯಲ್ಲಿ ನಿರ್ಧರಿಸಿದಂತೆ, ದಿನಾಂಕ 22.07.2024 ರಿಂದ ಸಕ್ಕರೆಯನ್ನು ಬೆಳಗಾಂ ಶುಗರ್ಸ ಪ್ರೈಲಿ, ಹುದಲಿ, ಕಾರ್ಖಾನೆಯ ಆವರಣದಲ್ಲಿ ವಿತರಿಸಲಾಗುತ್ತಿದ್ದು, ಸಕ್ಕರೆ ವಿತರಣೆಯನ್ನು ದಿನಾಂಕ: 31.08.2024 ರಂದು ಮುಕ್ತಾಯ ಗೊಳಿಸಲು ನಿರ್ಧರಿಸಲಾಗಿದೆ.
ಕಾರಣ, ಸನ್ 2023-24 ರ ಹಂಗಾಮಿನಲ್ಲಿ ಕಬ್ಬು ಪೂರೈಸಿದ ಎಲ್ಲ ರೈತ ಬಾಂಧವರು ಇದುವರೆಗೆ ಸಕ್ಕರೆಯನ್ನು ಪಡೆಯದಿದ್ದಲ್ಲಿ ತಾವು ಖುದ್ದಾಗಿ ಅಥವಾ ತಮ್ಮ ಪ್ರತಿನಿಧಿಯ ಮೂಲಕ ಕಾರ್ಖಾನೆಯ ಆವರಣದ ಸಕ್ಕರೆ ವಿತರಣಾ ಕೇಂದ್ರದಲ್ಲಿ ಕಬ್ಬಿನ ತೂಕದ ಪಾವತಿ, ಗುರುತಿನ ಚೀಟಿ ಹಾಗೂ ಪ್ರತಿನಿಧಿಯಾಗಿದ್ದಲ್ಲಿ ಸಂಬಧಪಟ್ಟ ವಲಯ ಕಚೇರಿಗಳಿಂದ ಅನುಮೋದಿಸಲ್ಪಟ್ಟ ಸಮ್ಮತಿ ಪತ್ರಗಳನ್ನು ಕಡ್ಡಾಯವಾಗಿ ಕಚೇರಿ ವೇಳೆಯಲ್ಲಿ ಹಾಜರು ಪಡಿಸಿ ದಿನಾಂಕ: 31.08.2024 ರ ಒಳಗಾಗಿ ಸಕ್ಕರೆಯನ್ನು ಪಡೆದುಕೊಳ್ಳಲು ವಿನಂತಿಸಲಾಗಿದೆ. ತದನಂತರ ಬಂದ ವಿನಂತಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.