ಟಿಳಕವಾಡಿ ಪೊಲೀಸರ ಭರ್ಜರಿ ಬೇಟೆ.
15 ದಿನಗಳ ಶ್ರಮಕ್ಕೆ ಸಿಕ್ಕ ಪ್ರತಿಫಲ.
ಗಣೇಶ ಹಬ್ಬದಲ್ಲಿ ಅಶಾಂತಿ ಕದಡುವ ಹುನ್ನಾರಕ್ಕೆ ಬ್ರೆಕ್ ಹಾಕಿದ ಪೊಲೀಸರು.
ಕಾಲೇಜು ಹುಡುಗರಿಗೆ ಮಾದಕ ವಸ್ತು ಪೂರೈಸುತ್ತಿದ್ದ ಖತರನಾಕ್ ಗ್ಯಾಂಗ್ ಅಂದರ್.
ಟಿಳಕವಾಡಿ ಸಿಪಿಐ ಪೂಜೇರಿ ನೇತೃತ್ವದಲ್ಲಿ ಆರೋಪಿಗಳು ಅಂದರ್
ಟಿಳಕವಾಡಿ ಪೊಲೀಸರ ಕಾರ್ಯಕ್ಕೆ ಪೊಲೀಸ್ ಆಯುಕ್ತರು, ಡಿಸಿಪಿ, ಎಸಿಪಿ ಬಹುಪರಾಕ್
ಬೆಳಗಾವಿ..
ಕಳ್ಳರು, ದಂಧೆಕೋರರು ಚಾಪೆ ಕೆಳಗೆ ನುಗ್ಗಿದರೆ, ಪೊಲೀಸರು ರಂಗೋಲಿ ಕೆಳಗೆ ನುಗ್ಗುತ್ತಾರೆ ಎನ್ನುವ ಮಾತಿದೆ.
ಅಂದರೆ ಅಷ್ಟು ಚಾಣಾಕ್ಷ ತನದಿಂದ ಪ್ರಕರಣವನ್ನು ಬೆನ್ನಟ್ಟಿ ದಂಧೆಕೋರರ ಹೆಡಮುರಿ ಕಟ್ಟುತ್ತಾರೆ ಎನ್ನುವುದನ್ಬು ಬೆಳಗಾವಿ ಟಿಳಕವಾಡಿ ಪೊಲೀಸರು ಸಾಬೀತು ಮಾಡಿದ್ದಾರೆ.
ಬೆಳಗಾವಿ ಅನಗೋಳದ ಕೆಲವೇ ಕೆಲ ಕಿಡಿಗೇಡಿಗಳು ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತುವನ್ನು ಪೂರೈಕೆ ಮಾಡುತ್ತಿದ್ದರು.

ಪೊಲೀಸ್ ಆಯುಕ್ತ ಯಡಾ ಮಾರ್ಬನ್ಯಾಂಗ್ ಡಿಸಿಪಿ ಜಗದೀಶ ರೋಹನ್, ನುರಂಜನ ರಾಜೆ ಮ ತ್ತು ಎಸಿಪಿ ಎಚ್. ಶೇಖರಪ್ಪ ಅ ವರ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖೆಗೆ ಬೆನ್ನಟ್ಟಿದ ಟಿಳಕವಾಡಿ ಸಿಪಿಐ ಪರಶುರಾಮ ಪೂಜೇರಿ ಅವರು 5 ಜನರ ಹೆಡಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಗಣೇಶ ಹಬ್ಬದ ಸಂದರ್ಭದಲ್ಲಿ ಮಾದಕ ವಸ್ತುವನ್ನು ಹೆಚ್ಚಿಗೆ ಮಾರಾಟ ಮಾಡಿ ಅಶಾಂತಿ ಸೃಷ್ಟಿಸುವ ಹುನ್ನಾರ ಇದರ ಹಿಂದೆ ಇತ್ತು ಎನ್ನುವ ಆಘಾತಕಾರಿ ಸಙಗತಿ ಪೊಲೀಸರು ನಡೆಸಿದ ವಿಚಾರಣೆಯಲ್ಲಿ ಬೆಳಿಕಿಗೆ ಬಂದಿದೆ ಎಂದು ಗೊತ್ತಾಗಿದೆ.

ಸುಶಾಂತ ಗೋವಿಂದ ಕಂಗ್ರಾಳ್ಕರ, ನಾರಾಯಣ ಬಾಬುರಾವ್ ಪಾಟೀಲ, ಪ್ರಫುಲ್ ಗಜಾನನ ಪಾಟೀಲ ಸುನೀಲ ಭೈರು ಅಸಲ್ಜರ ಮತ್ತು ಸಲ್ಮಾನ ಬಾಬರ್ ಮೊಕಾಶಿ ( ಎಲ್ಲರೂ ಅನಗೋಳದವರು} ಈಗ ಪೊಲೀಸರು ಬೀಸಿದ ಬಲೆಗೆ ಬಿದ್ದವರು.
ಬಂಧಿತರಿಂದ 31500 ಮೊತ್ತದ ಹೆರಾಯಿನ್ ನ್ನು ಪೊಲೀಸರು ಜಪ್ತಿಮಾಡಿಕೊಂಡಿದ್ದಾರೆ.
ಟಿಳಕವಾಡಿ ಠಾಣೆಯ ಸಿಪಿಐ ಪರಶುರಾಮ ಪೂಜೇರಿ ಅವರ ಜೊತೆ ಪಿಎಸ್ಐ ಸಂತೋಷ ದಳವಾಯಿ, ಪಿಸಿಗಳಾದ ಮಹೇಶ ಪಾಟೀಲ, ಅರ್ಜುನ ನೀಲಪ್ಪನವರ, ಸಂಜು ಸಙಗೋಟಿ, ಮಲ್ಲಿಕಾರ್ಜುನ ಪಾತ್ರೋಟ್, ಲಾಡ್ಕಿಸಾಬ ಮುಲ್ತಾನಿ , ನಾಗೇಂದ್ರ ತಳವಾರ ಅವರು ಈ ಪ್ರಕರಣ ಬೇಧಿಸುವಲ್ಲಿ ಶ್ರಮಿಸಿದ್ದಾರೆ.