ಬೆಳಗಾವಿಗೆ ಬರಲಿದೆ ಸಿಎಂ ಅದೃಷ್ಟ..!?

ಸಿಎಂ ರೇಸ್ ನಲ್ಲಿ ಸತೀಶ್ ಜಾರಕಿಹೊಳಿ ಹೆಸರು ಮುನ್ನೆಲೆಗೆ.

ಸಿದ್ದು ಅವರಿಂದಲೇ ಸತೀಶ್ ಹೆಸರು ಪ್ರಸ್ತಾಪ!?.

ದೆಹಲಿ ದೌಡಾಯಿಸಿದ ಸತೀಶ್ ಜಾರಕಿಹೊಳಿ.

ಬೆಂಗಳೂರು. ಮೈಸೂರು ಮೂಡಾ ಹಗರಣದ ವಿಚಾರಣೆ ನಡೆದಿರುವ ಬೆನ್ನ ಹಿಂದೆಯೇ ಕಾಂಗ್ರೆಸ್ ಹೈ ಕಮಾಂಡ್ ಮುಖ್ಯಮಂತ್ರಿ ಬದಲಾವಣೆ ಸಿದ್ಧತೆ ನಡೆಸಿದೆಯೇ?

ರಾಜಕೀಯವಲಯದಲ್ಲಿ ಕೇಳಿ ಬರುತ್ತಿರುವ ಚರ್ಚೆಗಳು ಮತ್ತು ಹೈ ಕಮಾಂಡ ಒಬ್ಬೊಬ್ಬರನ್ನೇ ಕರೆದು ಅಭಿಪ್ರಾಯ ಕೇಳುತ್ತಿರುವುದನ್ನು ಗಮನಿಸಿದರೆ ಸಿಎಂ ಬದಲಾವಣೆ ಪಕ್ಕಾ ಎನ್ನಲಾಗುತ್ತಿದೆ.

Oplus_0

ಇನ್ನೂ ಅಚ್ಚರಿ ಸಂಗತಿ ಎಂದರೆ, ತಮ್ಮ ಉತ್ತರಾಧಿಕಾರಿ ಆಯ್ಕೆ ಹೊಣೆಯನ್ನೂ ಸಹ ಹೈಕಮಾಂಡ ಸಿದ್ಧರಾಮಯ್ಯನವರಿಗೆ ಬಿಟ್ಟಿದೆ ಎಂಸು ದೆಹಲಿ ಮೂಲಗಳು ತಿಳಿಸಿವೆ.

ಈಗಾಗಲೇ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಉತ್ತರಾಧಿಕಾರಿ ಡಿ.ಕೆ ಆಯ್ಕೆ ಬಗ್ಗೆ ಅಸಮ್ಮತಿ ಸೂಚಿಸಿದ್ದಾರೆ. ಅಷ್ಟೇ ಅಲ್ಲ ತಮ್ಮ‌ಪರಮಾಪ್ತ ಸತೀಶ್ ಜಾರಕಿಹೊಳಿ ಹೆಸರು ಪ್ರಸ್ತಾಪಿಸುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಕೂಡ್ ಸತೀಸ್ ಜಾರಕಿಹೊಳಿ ಅವರನ್ನು ದೆಹಲಿಗೆ ಕರೆಯಿಸಿಕೊಂಡು ಮಾತುಕತೆ ನಡೆಸಿದೆ.

ಈ ಎಲ್ಲ ಬೆಳವಣಿಗೆ ಗಮನಿಸಿದರೆ, ಬೆಳಗಾವಿಗೆ ಮುಂದಿನ‌ ದಿನಗಳಲ್ಲಿ ಲಕ್ ಒದಗಿಬರಲಿದೆ..

Leave a Reply

Your email address will not be published. Required fields are marked *

error: Content is protected !!