ಬೆಳಗಾವಿ.
ರಾಜ್ಯದಲ್ಲಿ ಹೊಸ ಸಿಎಂ ಕೂಗಿನ ಬೆನ್ನ ಹಿಂದೆಯೇ ನಿಮ್ಮ ಹೆಸರು ರೇಸ್ ನಲ್ಲಿದೆಯಾ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಚಿವ SATISH JARKIHOLI ಕೊಟ್ಟ ಉತ್ತರ ಏನು ಗೊತ್ತಾ?
ಮುಗುಳ್ನಗೆ..!
ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಿತ್ತೂರು ಉತ್ಸವ ಸಂಬಂಧ ಪೂರ್ವ ಸಿದ್ಧತಾ ಸಭೆಯ ನಂತರ ಪತ್ರಕರ್ತರು ಕೇಳಿದ ಪ್ರಶ್ನೆಗೆ ಮುಗುಳ್ನಕ್ಕು ಎದ್ದು ಬಿಟ್ಟರು.
ಇತ್ತೀಚೆಗೆ ದೆಹಲಿಗೂ ಹೋಗಿದ್ದಿರಿ. ಹೈಕಮಾಂಡ ಕೂಡ ತಮ್ಮೊಂದಿಗೆ ಮಾತನಾಡಿದೆ ಅಲ್ಲವಾ ಎಂದು ಪತ್ರಕರ್ತರು ಮರು ಪ್ರಶ್ನೆ ಮಾಡಿದರೂ ಸಚಿವ ಜಾರಕಿಹೊಳಿ ಯಾವುದೇ ರೀತಿಯ ಉತ್ತರ ಕೊಡದೇ ಮತ್ತೇ ನಕ್ಕರು.

ನಾನು ದೆಹಲಿಗೆ ಮೇಲಿಂದ ಮೇಲೆ ಹೋಗ್ತಿರುವೆ. ಅದಕ್ಕೆ ಬೇರೆ ಅರ್ಥ ಬೇಡ ಎಂದು ದೆಹಲಿ ಪ್ರವಾಸದ ಬಗ್ಗೆ ಸಮಜಾಯಿಷಿ ನೀಡಿದರು.
ಕಿತ್ತೂರು ಶಾಸಕ ಬಾಬಾಗೌಡ ಪಾಟೀಲ, ಬೆಳಗಾವಿ ಉತ್ತರ ಶಾಸಕ ಆಸೀಫ್ ಶೇಠ, ಬೂಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.