ನಾವೇನೂ ಬೈಯ್ಯುವಂತೆ ಹೇಳಿಲ್ಲ: ಸಚಿವ ಜಾರಕಿಹೊಳಿ ಟಾಂಗ್

ಶಾಸಕ ಮುನಿರತ್ನಗೆ ನಾವೇನೂ ಬೈಯ್ಯುವಂತೆ ಹೇಳಿಲ್ಲ: ಸಚಿವ ಜಾರಕಿಹೊಳಿ ಟಾಂಗ್
ಬೆಳಗಾವಿ: ಶಾಸಕ ಮುನಿರತ್ನ ಅವರಿಗೆ ಬೈಯ್ಯುವಂತೆ, ಸಿಕ್ಕ ಸಿಕ್ಕ ಹಾಗೆ, ಬಾಯಿಗೆ ಬಂದಂತೆ ಬೈಯ್ಯವಂತೆ ನಾವೇನು ಹೇಳಿಲ್ಲ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಟಾಂಗ್ ಕೊಟ್ಟಿದ್ದಾರೆ.
ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗ ಮಾತನಾಡಿದ ಅವರು, ಮುನಿರತ್ನ ಅವರನ್ನು ರಾಜಕೀಯ ದ್ವೇಷದಿಂದ ಬಂಧಿಸಿಲ್ಲ. ನಾವೇನೂ ಅವರಿಗೆ ಬೈಯ್ಯುವಂತೆ ಹೇಳಿಲ್ಲವಲ್ಲ ಎಂದು ಬಿಜೆಪಿ ನಾಯಕರ ಆರೋಪಕ್ಕೆ ತಿರುಗೇಟು ನೀಡಿದರು.

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಮಾನವ ಸರಪಳಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಐತಿಹಾಸಿಕ ಕಾರ್ಯಕ್ರಮವಾಗಿದೆ. ದೇಶದಲ್ಲಿ ಮೊಟ್ಟ ಮೊದಲು ಮಾನವ ಸರಪಳಿ ಮುಖಾಂತರ ಪ್ರಜಾಪ್ರಭುತ್ವ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆಗೆ ಎದುರಾಗಿದ್ದ ಆತಂಕ ದೂರವಾಗಿದೆ. ಜಾಗವನ್ನು ಕಳೆದುಕೊಂಡವರಿಗೆ ಮರಳಿ ಜಾಗ ನೀಡಲಾಗುತ್ತಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದರು.


ಶಾಸಕ ಮುನಿರತ್ನ ಅವರಿಗೆ ಕಾಂಗ್ರೆಸ್ ನವರು ಅಥವಾ ಬಿಜೆಪಿ, ಜೆಡಿಎಸ್ ನವರು ಬೈಯ್ಯುವಂತೆ ಹೇಳಿದ್ದಾರಾ. ಇದರಲ್ಲಿ ತರಾತುರಿಯಲ್ಲಿ ನಾವು ಬಂಧಿಸಿಲ್ಲ. ಅವರ ಆರೋಪಕ್ಕೆ ಏನೂ ಮಾಡಲು ಆಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಅರವತ್ತು ಸಾವಿರ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ನಾಗಮಂಗಲ ಗಲಾಟೆಯನ್ನು ಪ್ರಸ್ತಾಪಿಸುವುದು ಸರಿಯಲ್ಲ. ರಾಜ್ಯದಲ್ಲಿ ಎಲ್ಲೋ ಒಂದು ಆಕಸ್ಮಿಕ ಘಟನೆ ಆಗಿರಬಹುದು. ಪೊಲೀಸರು ಅದನ್ನು ನೋಡಿಕೊಳ್ತಾರೆ. ಆ ವಿಷಯನ್ನು ಅಷ್ಟೇಕೆ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಸಚಿವರು ಹೇಳಿದರು.

Leave a Reply

Your email address will not be published. Required fields are marked *

error: Content is protected !!