.ಪರಿಹಾರದ ಬದಲು ಜಾಗ ಕೊಡಲು ನಿರ್ಧಾರ: ಸಭೆಯಲ್ಲಿ ತೀರ್ಮಾಣವಾಗಬೇಕು ಪಾಲಿಕೆ ಪರಿಷತ್ ಸುಪ್ರೀಂ: ರಮೇಶ ಕುಡಚಿ ಬೆಳಗಾವಿ:
ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಜಾಗ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರದ ಬದಲು ಜಾಗ ಕೊಡಲು ನಿರ್ಧರಿಸುವ ತೀರ್ಮಾನ ಪಸಲಿಜದ ಕೌನ್ಸಿಲ್ ದಲ್ಲೇ ಆಗಬೇಕು ಎಂದು ಮಾಜಿ ಶಾಸಕ ರಮೇಶ ಕುಡಚಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಪರಿಹಾರ ಹಣದ ಬದಲು ಜಾಗೆ ಮರಳಿಸುವ ತೀರ್ಮಾನವನ್ನು ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಮಾಡಬೇಕಿಲ್ಲ..
ಪಾಲಿಕೆ ಸಾಮಾನ್ಯ ಸಭೆಯಲ್ಲಿಯೇ ಈ ನಿರ್ಧಾರ ಆಗಬೇಕೆಂದು ತಿಳಿಸಿದರು. ಪಾಲಿಕೆಗೆ ಪರಿಷತ್ ಸಭೆ ಸುಪ್ರೀಂ. ಹೀಗಾಗಿ, ಪಾಲಿಕೆ ಪರಿಷತ್ ಗಮನಕ್ಕೆ ತರದೇ ಯಾವುದೇ ನಿರ್ಣಯ ಕೈಗೊಳ್ಳುವಂತಿಲ್ಲ ಎಂದರು. 2021ರಲ್ಲಿ ಬೆಳಗಾವಿ ಪಾಲಿಕೆ ಆಯುಕ್ತರು ನೀಡಿದ ಅನುಮತಿ ಪತ್ರದ(ಎನ್ ಓಸಿ) ಆಧಾರದ ಮೇಲೆ ಸ್ಮಾರ್ಟ್ ಸಿಟಿ ಯೋಜನೆಯಡಿ 80 ಅಡಿ ರಸ್ತೆಯನ್ನು ಮಾಡಲಾಗಿದೆ. ಅದರ ಫಲವಾಗಿ ಈಗ ಮಹಾನಗರ ಪಾಲಿಕೆಗೆ 20 ಕೋಟಿ ರೂ .ಸಂಕಷ್ಟ ಎದುರಾಗಿದೆ. ಇದಕ್ಕೆ ಕಾರಣ ಯಾರು ಎಂಬುದನ್ನು ಬರಹಿರಂಗೊಳಿಸಬೇಕೆಂದು ಅವರು ಒತ್ತಾಯಿಸಿದರು
. ಭೂ ಮಾಲೀಕರಿಗೆ 20 ಕೋಟಿ ರೂ.ಗಳ ಪರಿಹಾರ ಕೊಡಬೇಕು, ಇಲ್ಲವೇ ಭೂಮಿ ಮರಳಿಸಬೇಕು. ರಸ್ತೆಯನ್ನು ಸಂಪೂರ್ಣ ಕಿತ್ತೊಗೆದು ಅದರ ನಷ್ಟವನ್ನೂ ಭರಿಸಿಕೊಡಬೇಕು. ತಪ್ಪು ಮಾಡಿದ ಅಧಿಕಾರಿಗೆ ಕೊನೆಯವರೆಗೂ ಬಡ್ತಿ ಸಿಗದಂತೆ ಸೇವಾ ಪುಸ್ತಕದಲ್ಲಿ ಬರೆಯಬೇಕೆಂದು ನ್ಯಾಯಾಲಯ ಕಟ್ಟಪ್ಪಣೆ ಮಾಡಿದೆ . ಆದರೆ, ಇದನ್ನು ಈಗಿನ ಮಹಾನಗರ ಪಾಲಿಕೆ ಆಯುಕ್ತರು ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ನಲ್ಲಿ ಒಪ್ಪಂದದ ರಾಜಕಾರಣ…..
ಬೆಳಗಾವಿ ಕಾಂಗ್ರೆಸ್ಸಿನಲ್ಲಿ ಒಪ್ಪಂದದ ರಾಜಕಾರಣ ನಡೆದಿದೆ ಎಂದು ಸ್ವಪಕ್ಷದ ವಿರುದ್ಧವೇ ಮಾಜಿ, ಶಾಸಕ ರಮೇಶ ಕುಡಚಿ ಅಸಮಾಧಾನ ವ್ಯಕ್ತಪಡಿಸಿದರು. ಈ ಹಿಂದೆ ನಡೆದಂತಹ ಚುನಾವಣೆಗಳಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರಿಗೆ ಕಾಂಗ್ರೆಸ್ ಸದಸ್ಯತ್ವ ನೀಡಲಾಗುತ್ತಿದೆ. ಬೇರೆ ತಾಲೂಕಿನಿಂದ ಬಂದವರೂ ಈಗ ಬುಡಾ ಅಧ್ಯಕ್ಷರಾಗಿದ್ದಾರೆ. ಇದು ನ್ಯಾಯವೇ ಎಂದು ಪ್ರಶ್ನಿಸಿದ ಅವರು, ಕುರುಬ ಸಮಾಜಕ್ಕೆ ಅಧ್ಯಕ್ಷ ಸ್ಥಾನ ನೀಡಲೇಬೇಕಾಗಿದ್ದರೆ ಬೆಳಗಾವಿಯಲ್ಲಿ ಕುರುಬ ಸಮಾಜದ ನಾಯಕರು ಇರಲಿಲ್ಲವೇ.? ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿನ ಯಾವುದೇ ಕಾರ್ಯಕರ್ತನಿಗೂ ಕೊಟ್ಟರೂ ನಡೆಯುತ್ತಿತ್ತು. ನಮಗೇ ಬೇಕೆಂದು ನಾವು ಕೇಳಿಲ್ಲ, ಕೇಳುವುದೂ ಇಲ್ಲ ಎನ್ನುವ ಮೂಲಕ ಲಕ್ಷ್ಮಣರಾವ ಚಿಂಗಳೆ ನೇಮಕದ ವಿರುದ್ಧ ಅಸಮಾಧಾನ ಹೊರ ಹಾಕಿದರು.
ಬಿಜೆಪಿ ಸೇರಿದಂತೆ ಇನ್ನುಳಿದವರಿಗೆ ಬೆಂಬಲ ಸೂಚಿಸಿ ಆರಿಸಿ ತರುವ ಕೆಲಸವನ್ನು ಮಾಡಿದವರೇ ಕಾಂಗ್ರೆಸ್ಸಿಗರು. ಜಿಲ್ಲೆಯಲ್ಲಿ ಒಪ್ಪಂದದ ರಾಜಕಾರಣ ನಡೆದಿದ್ದು, ಡಿಸಿಎಂ ಡಿ.ಕೆ. ಶಿವಕುಮಾರ ಅವರು ಜಿಲ್ಲೆಗಾದ ಅನ್ಯಾಯವನ್ನು ಸರಿಪಡಿಸಬೇಕೆಂದು ಒತ್ತಾಯಿಸಿದರು. ಜಿಲ್ಲಾಧ್ಯಕ್ಷ, ಗ್ರಾಮೀಣ ಅಥವಾ ಬ್ಲಾಕ್ ಅಧ್ಯಕ್ಷರನ್ನೂ ಕೂಡ ಬದಲಾಯಿಸಲಾಗಿಲ್ಲ. ಕಳೆದ 12 ವರ್ಷಗಳಿಂದ ಅವರೇ ಅಧ್ಯಕ್ಷರಾಗಿದ್ದಾರೆ. ಈ ವ್ಯವಸ್ಥೆಯನ್ನೂ ಬದಲಾಯಿಸಲು ಡಿಸಿಎಂ ಡಿ.ಕೆ. ಶಿವಕುಮಾರ ಗಮನಹರಿಸಬೇಕೆಂದು ರಮೇಶ ಕುಡಚಿ ಆಗ್ರಹಿಸಿದರು.