ಚನ್ನಮ್ಮವಿವಿ ಅರ್ಥಶಾಸ್ತ್ರ ಉಪನ್ಯಾಸಕರ ಮುಷ್ಕರ
ಬೆಳಗಾವಿ. ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ವಾಣಿಜ್ಯ ವಿಭಾಗದ ಅರ್ಥಶಾಸ್ತ್ರ ವಿಷಯವನ್ನು ನಿಯಮ ಬಾಹಿರವಾಗಿ ಕಡಿಮೆ ಮಾಡಿರುವ ವಿಷಯಕ್ಕೆ ಸಂಬಂಧಪಟ್ಟಂತೆ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಉಪನ್ಯಾಸಕರ ವೇದಿಕೆ (ಪೋರಮ್) ಸದಸ್ಯರು ಮೌಲ್ಯಮಾಪನವನ್ನು ಬಹಿಷ್ಕರಿಸಿ ಮೌಲ್ಯಮಾಪನ ಕೇಂದ್ರ ಮುಖ್ಯಸ್ಥರಾದ ಎಚ್ಚ ಜೆ ಮೂಳೆರಕಿ ಅವರಿಗೆ ಮನವಿಪತ್ರ ಸಲ್ಲಿಸಿ ನೀಡಿದ್ದಾರೆ.
ಸೋಮವಾರದಿಂದ ಸ್ಥಳೀಯ ಮರಾಠ ಮಂಡಳ ಪದವಿ ಕಾಲೇಜಿನಲ್ಲಿ ಆರಂಭವಾಗಿರುವ ಪದವಿ ಮೌಲ್ಯಮಾಪನ ಕೇಂದ್ರದಲ್ಲಿ ನಡೆಯುತ್ತಿರುವ ಈ ಮುಷ್ಕರ, ಮೊದಲಿನಿಂದಲೂ ವಾಣಿಜ್ಯಶಾಸ್ತ್ರದಲ್ಲಿ ಅರ್ಥಶಾಸ್ತ್ರ ವಿಷಯವನ್ನು ಅಧ್ಯಯನ ವಿಷಯವಾಗಿ ಹೇಳಲಾಗಿದೆ. ಅರ್ಥಶಾಸ್ತ್ರ ವಿಷಯವು ವಾಣಿಜ್ಯ ವಿಭಾಗದ ತಾಯಿಬೇರು ಇದ್ದಂತೆ ಆದರೆ ವಾಣಿಜ್ಯಶಾಸ್ತ್ರ ವಿಭಾಗದ ಕೆಲವರ ಕುತಂತ್ರದಿಂದ ಅಕ್ರಮವಾಗಿ ಅರ್ಥಶಾಸ್ತ್ರ ಶೀರ್ಷಿಕೆ ಬದಲಾವಣೆ ಮಾಡಲಾಗಿದೆ. ಅರ್ಥಶಾಸ್ತ್ರ ಅನುದಾನಿತ ಹಾಗೂ ಅತಿಥಿ ಉಪನ್ಯಾಸಕರಿಗೆ ಕಾರ್ಯಭಾರದ ಕೊರತೆ ಆಗುವಂತೆ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ನೂರಾರು ಉಪನ್ಯಾಸಕರು ಕೆಲಸ ಕಳೆದುಕೊಂಡು ನಿರುದ್ಯೋಗಿಗಳು ಆಗುತ್ತಾರೆ. ವಾಣಿಜ್ಯ ಶಾಸ್ತ್ರದಲ್ಲಿ ಅರ್ಥಶಾಸ್ತ್ರ ವಿಷಯವನ್ನು ಅಂತರ್ ವಿಷಯಕ (ಇಂಟರ್ ಡಿಸಿಪ್ಲಿನರಿ) ಅಧ್ಯಯನವಾಗಿ ಕಡ್ಡಾಯವಾಗಿ ಕಲಿಸಬೇಕಾಗುತ್ತದೆ ಆದರೆ ಅರ್ಥಶಾಸ್ತ್ರ ವಿಷಯವನ್ನು ಒಳಗೊಂಡ ಪಠ್ಯವನ್ನು ಕಲಿಸಲು ಉಪನ್ಯಾಸಕರಿಗೆ ನಿರಾಕರಿಸಲಾಗುತ್ತಿದೆ. ರಾಜ್ಯದಾದ್ಯಂತ ಕೆಲವು ವಿವಿಗಳಲ್ಲಿ ಈ ಸಮಸ್ಯೆ ಇದೆ ಆದ್ದರಿಂದ ನಾವು ಮೌಲ್ಯಮಾಪನ ಬಹಿಷ್ಕರಿಸುತ್ತೇವೆ ಎಂದು ಉಪನ್ಯಾಸಕರು ಮನವಿ ಪತ್ರ ಸಲ್ಲಿಸಿದರು.

ಕಾಂಗ್ರೆಸ್ ಕಚೇರಿಯಲ್ಲಿ ಧರಣಿ
ನಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೋಳಿ ಆವರನ್ನು ಭೇಟಿಯಾದ ವೇದಿಕೆಯ ಸದಸ್ಯರಾದ ಗಣಪತಿ ಸಂಗೋಟಿ ಮಲ್ಲಿಕಾರ್ಜುನ್ ಉಗಲವಾಟ ರಾಜು ಕಪಾಲಿ ಪ್ರಮೋದ್ ಜಾಧವ ಎಸ್ ವೈ ಗಟ್ಟಿ ಅಜಿತ್ ಕೋಳಿ ಜಯಶ್ರೀ ಅಂಚಿನಮನಿ ಪ್ರಶಾಂತ್ ಮುಗಳಿ ಮಲ್ಲಿಕಾರ್ಜುನ್ ರಾಂಪುರ್ ಹನುಮಂತಪ್ಪ ಚುಳುಕಿ ಮುಂತಾದವರು ಅವರ ಕಚೇರಿಯಲ್ಲಿ ಧರಣಿ ಸತ್ಯಾಗ್ರಹ ನಡೆಸಿ ವಿವಿ ಕುಲಪತಿಗಳಿಗೆ ಕೂಡಲೇ ಅರ್ಥಶಾಸ್ತ್ರ ವಿಷಯವನ್ನು ಕಡ್ಡಾಯವಾಗಿ ಅಳವಡಿಸಲು ಸೂಚಿಸಬೇಕು ಎಂದು ಕೋರಿದರು.