ಆ ಪ್ರಭಾವಿ ಸಚಿವರ ವಿರುದ್ಧವೂ ರೆಡಿ ಆಗ್ತಿದೆ ದೂರು.
ದಾಖಲೆ ಮುಂದಿಟ್ಟುಕೊಂಡು ಡ್ರಾಫ್ಟ್ ಸಿದ್ದಪಡಿಸುತ್ಯಿರುವ ಬಿಜೆಪಿಗರು ಮತ್ತು ಕೆಲ ವಕೀಲರು.
ಶೀಘ್ರವೇ ಲೋಕಾಯುಕ್ತರಿಗೆ ದೂರು. ಕ್ರಮಚಾಗದಿದ್ದರೆ ಗೌರ್ನರಗೆ ದೂರು.
ಬೆಂಗಳೂರು.
40/ವರ್ಷಗಳ ಕಾಲ ರಾಜಕೀಯ ಜೀವನದಲ್ಲಿ ಶುದ್ಧ ಹಸ್ತ ಎಂದೇ ಗುರುತಿಸಿಕೊಂಡಿರುವ ಸಿದ್ದರಾಮಯ್ಯನವರಿಗೆ ಈಗ ಮುಡಾ ಅಕ್ರಮದ ಕಂಟಕ ಎದುರಾಗಿದೆ.
ಹೈಕೋರ್ಟ್ ಮತ್ತು ಜನಪ್ರತಿನಿಧಿಗಳ ನ್ಯಾಯಾಲದ ತನಿಖೆ ಆದೇಶದ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡುತ್ತಾರಾ ಎಂಬ ಪ್ರಶ್ನೆ ಎದ್ದಿದೆ.

ನಾಲ್ಕು ದಶಕಗಳಲ್ಲಿ :ಶುದ್ಧರಾಮಯ್ಯ ಎಂದೇ ಹೆಸರು ಪಡೆದವರು ಸಿದ್ದರಾಮಯ್ಯ ವರ್ಚಸ್ಸಿಗೆ ಕಪ್ಪು ಚುಕ್ಕೆ ಬಂದಿದೆ..
ಗಮನುಸಬೇಕಾದ ಸಂಗತಿ ಎಂದರೆ ಈಗಿನ ಬಹುತೇಕ ಮಂತ್ರಿಗಳ ಇಲಾಖೆ ಬಗ್ಗೆ ತನಿಖೆ ನಡೆಸುತ್ತ ಹೋದರೆ ಜಾಮೀನು ತೆಗೆದುಕೊಳ್ಳುವ ಪರಿಸ್ಥಿತಿ ಬಂದರೂ ಅಚ್ಚರಿಪಡಬೇಕಿಲ್ಲ.

ಸಧ್ಯ ಹೇಗಾಗಿದೆ ಎಂದರೆ ಸಿದ್ಧರಾಮಯ್ಯ ಸರ್ಕಾರದಲ್ಲಿ ತಮ್ಮಷ್ಟಕ್ಕೆ ತಾವೇ ಪ್ರಭಾವಿ ಎನಿಸಿಕೊಳ್ಳುವ ಸಚಿವರು ತಮ್ಮ ಇಲಾಖೆಯ ಕರ್ಮಕಾಂಡಗಳು ಹೊರಗೆ ಬರಬಾರದು ಎನ್ನುವ ಉದ್ದೇಶದಿಂದ ಕೋರ್ಟ ಮೆಟ್ಟಿಲು ಹತ್ತಿ ಅದಕ್ಕೆ ತಡೆಯಾಜ್ಞೆ ತಂದಿದ್ದರು.ಈಗ ಅದು ತಡೆಯಾಜ್ಞೆ ತೆರವು ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಆದರೆ ಆ ಸಚಿವರು ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಬೇರೆ ಯಾರಿಗೂ ಗೊತ್ತಾಗುವುದಿಲ್ಲ ಎನ್ನುವ ಹಾಗಿದ್ದಾರೆ. ಆದರೆ ಅದೆಲ್ಲವೂ ಜಗಜ್ಜಾಹೀರವಾಗಿದೆ.
ಸಿದ್ಧರಾಮಯ್ಯನವರ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಗೌರ್ನರ ಪ್ರಾಸಿಕ್ಯೂಶನಗೆ ಅನುಮತಿ ಕೊಟ್ಟ ನಂತರ ಆ ಸಚಿವರ ವಿರುದ್ಧವೂ ಗೌರ್ನರಗೆ ದೂರು ಕೊಡುವ ಚಿಂತನೆಯನ್ನು ಬಿಜೆಪಿ ನಡೆಸಿದೆ ಎಂದು ಗೊತ್ತಾಗಿದೆ.
ಈ ನಿಟ್ಟಿನಲ್ಲಿ ವಕೀಲರ ಗುಂಪು ದಾಖಲೆ ಮುಂದಿಟ್ಟುಕೊಂಡು ಡ್ರಾಫ್ಟ್ ಸಿದ್ಧಪಡಿಸುವ ಕೆಲಸ ನಡೆಸಿದೆ. ಅಚ್ಚರಿ ಸಂಗತಿ ಎಂದರೆ, ಇದರ ಹಿಂದೆ ಬೆಳಗಾವಿಯ ಕೆಲ ಬಿಜೆಪಿಗರು ಮತ್ತು ವಕೀಲರು ಇದ್ದಾರೆ.
ದೊಡ್ಡ ಕಳಂಕ
ಅತೀ ದೊಡ್ಡ ಕಳಂಕ. ಮುಡಾ ಅಕ್ರಮದಲ್ಲಿ ಮುಖ್ಯಮಂತ್ರಿಗಳ ವಿರುದ್ಧ ತನಿಖೆಗೆ ಹೈಕೋರ್ಟ್ ಆದೇಶ ನೀಡಿದೆ. ಹಾಗಾದ್ರೆ ಸಿದ್ದರಾಮಯ್ಯನವರ ಸಿಂಹಾಸನಕ್ಕೆ ಕೊನೆಗೂ ಕಂಟಕ ಎದುರಾದಂತಾಗಿದೆ.
.