ಬೆಂಗಳೂರು.
ಮೈಸೂರು ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ FIR ದಾಖಲಾಗುತ್ತಿದ್ದಂತೆಯೇ ಕಾಂಗ್ರೆಸ್ ಪಾಳಯದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ.
ಅದರಲ್ಲೂ ಏಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಳೆದ ದಿನ ಪಕ್ಷ ಶಾಶ್ವತ..ಇವತ್ತು ಅವರು, ನಾಳೆ ಬೇರೆಯವರು ಎನ್ನುವ ಮಾತು ಸಿದ್ಧು ವಿರೋಧಿ ಬಣ ಮತ್ತಷ್ಟು ಪುಟಿದೇಳುವಂತೆ ಮಾಡಿದೆ.

ಮೇಲ್ನೋಟಕ್ಕೆ ಡಿಕೆಶಿ ಬಣದಲ್ಲಿ ಗುರುತಿಸಿಕೊಂಡ ಸಚಿವರು, ಬಿಜೆಪಿಯನ್ನು ಟೀಕಿಸಿ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಪ್ರಶ್ನೆ ಇಲ್ಲ ಎನ್ನುತ್ತಲೇ ಪರೋಕ್ಷವಾಗಿ ಡಿಕೆಶಿಯನ್ಬು ಆ ಪಟ್ಟಕ್ಕೆ ಕುಳ್ಳಿರಿಸುವ ಪ್ರಯತ್ನ ನಡೆಸಿದ್ದಾರೆ.
ಆದರೆ ಇಲ್ಲಿ ಹೈಕಮಾಂಡ ಸಿದ್ದರಾಮಯ್ಯ ಅವರನ್ಬು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದರೂ ಸಹ ಉತ್ತರಾಧಿಕಾರ ಆಯ್ಕೆ ಸಿದ್ಧು ಹೆಗಲಿಗೆ ಬೀಳುವುದರಲ್ಲಿ ಎರಡು ಮಾತಿಲ್ಲ.

ಹೀಗಾಗಿ ಸಿದ್ಧರಾಮಯ್ಯ ಅವರು ತಮ್ನ ಪರಮಾಪ್ತರ ಹೆಸರನ್ನು ಹೇಳಬಹುದು. ಇಲ್ಲಿ ಹಲವರು ಊಹಿಸುವ ಪ್ರಕಾರ ಸಿದ್ದರಾಮಯ್ಯ ಅವರು ಯಮಕನಮರಡಿ ಶಾಸಕರೂ ಆಗಿರುವ ಪ್ರಭಾವಿ ಸಚಿವ ಸತೀಶ್ ಜಾರಕಿಹೊಳಿ ಹೆಸರು ಪ್ರಮುಖವಾಗಿ ಹೇಳಬಹುದು. ಅಥವಾ ಗೃಹ ಸಚಿವ ಜಿ.ಪರಮೇಶ್ವರ ಹೆಸರು ಹೇಳುವ ಸಾಧ್ಯತೆಗಳಿವೆ.
ಬರೀ ಲಾ ಪಾಯಿಂಟ್..!
ಮಾತು ಮಾತಿಗೂ ಲಾ ಪಾಯಿಂಟ್ ಹೇಳುವ . ಮುಖ್ಯಮಂತ್ರಿ ಸಿದ್ದರಾಮಯ್ಯ ನಿಜವಾಗಿ ಕಾನೂನು ಪ್ರಕಾರ ನಡೆದು ಕೊಳ್ಳುತ್ತಿದ್ದಾರೆಯೇ?

ಅಖಾಡದಲ್ಲಿ ಸಟೆದು ಎಲ್ಲಕ್ಕೂ ಸಿದ್ಧ ಎನ್ನುವ ಸಿದ್ಣರಾಮಯ್ಯ. ತಾವು ಹೋಗುತ್ತಿರುವ ದಾರಿ ಸರಿಯಿಲ್ಲ ಎಂಬುದು ಗೊತ್ತಿದ್ದರೂ ತಪ್ಪು ದಾರಿಗೆ ಹೊರಟಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಅಥವಾ ಯಾರಾದರೂ ಸಿಎಂ ಸಿದ್ದರಾಮಯ್ಯ ಅವರ ದಾರಿ ತಪ್ಪಿಸಿದರೇ ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ.

ಮುಡಾ ಹಗರಣದಲ್ಲಿ ಎಫ್ಐಆರ್: ಸಿಎಂ ಸಿದ್ದರಾಮಯ್ಯ ಎ1, ಪಾವರ್ತಿ ಎ2 ಮತ್ತು ಭಾಮೈದ ಮಲ್ಲಿಕಾರ್ಜುನ ಎ3
ಮುಡಾ ಹಗರಣದಲ್ಲಿ ತಾವು ನಿರಪರಾಧಿ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಲೇ ಬಂದಿದ್ದಾರೆ. ತಾವು ಯಾವುದೇ ತಪ್ಪು ಮಾಡಿಲ್ಲ, ಹೀಗಾಗಿ ರಾಜೀನಾಮೆ ಪ್ರಶ್ನೆಯೇ ಇಲ್ಲ ಅಂತ ಸಿದ್ದರಾಮಯ್ಯ ಖಂಡಾತುಂಡವಾಗಿ ಹೇಳುತ್ತಿದ್ದಾರೆ. ಸಿದ್ದರಾಮಯ್ಯನವರ ತಪ್ಪು ಇಲ್ಲ ಅಂದ್ರೆ, ತಪ್ಪು ಮಾಡಿದ್ದು ಯಾರು.? ಕಳೆದ 8 ವರ್ಷಗಳ ಹಿಂದೆ ಸತ್ತಮಗನಿಗೆ ಈ ಮುಡಾ ಅಕ್ರಮದ ಮಹಾ ಸತ್ಯ ಗೊತ್ತಿತ್ತಾ.? ಆ ಸತ್ಯ ರಾಕೇಶ್ ಸಾವಿನೊಂದಿಗೆ ಸಮಾಧಿಯಾಗಿ ಹೋಗಿತ್ತಾ.? ಈಗ ಎದ್ದು ಕೂತಿರೋ ಅದೇ ಸತ್ಯ ಸಿದ್ದರಾಮಯ್ಯನವರ ಸಿಂಹಾಸವನ್ನು ಅಲುಗಾಡಿಸುತ್ತಿದೆ.