ಅಭಯ ಪಾಟೀಲ ಸ್ಪಷ್ಟನೆ
ಪಾಲಿಕೆ ಕೌನ್ಸಿಲ್ದಲ್ಲಿಯೇ ಉತ್ತರಿಸುವೆ…!
ಬೆಳಗಾವಿ.
20 ಕೋಟಿ ರೂ ಪರಿಹಾರ ಬದಲು ಭೂ ಮಾಲಿಕರಿಗೆ ಜಾಗೆಯನ್ನೇ ಮರಳಿ ಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಏನೂ ಮಾತನಾಡಲ್ಲ. ಅದಕ್ಕೆ ಪಾಲಿಕೆ ಕೌನ್ಸಿಲ್ದಲ್ಲಿಯೇ ಎಲ್ಲವನ್ನು ಬಿಚ್ಚಿಡುವುದಾಗಿ ಶಾಸಕ ಅಭಯ ಪಾಟೀಲ ಗುಡುಗಿದ್ದಾರೆ,
ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ವಿಷಯಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ನಾನೂ ಏನೂ ಪ್ರತಿಕ್ರಿಯೆ ನೀಡಿಲ್ಲ.
ಆದರೆ ಇಲ್ಲಿನ ಬೆಳವಣಿಗೆಗಳು ಏನಾಗಿವೆ ಎನ್ನುವುದು ಸೇರಿದಂತೆ ಎಲ್ಲ ದಾಖಲೆಗಳನ್ನು ಮುಂದಿಟ್ಟುಕೊಂಡು ಮಾತನಾಡುವುದಾಗಿ ಹೇಳಿದರು.

ಪಾಲಿಕೆ ಅಧಿಕಾರಿಗಳು ಆರಂಭದಲ್ಲಿ ಹೈಕೋರ್ಟಗೆ ಹೇಳಿದಂತೆ ನಡೆದುಕೊಂಡಿದ್ದಾರೆಯೇ ಎನ್ನುವುದು ಸೇರಿದಂತೆ ಎಲ್ಲವನ್ನು ಬಿಚ್ಚಿಡಲಾಗುವುದು ಎಂದು ಶಾಸಕರು ತಿಳಿಸಿದರು.