ನಾಚಿಕೆ ಯಾರಿಗೆ ಇರಬೇಕಿತ್ತು?
ಸಚಿವೆಗೆ ಕೌಂಟರ್ ಕೊಟ್ಟ ಅಭಯ
ಬೆಳಗಾವಿ.
ಮುಖ್ಯಮಂತ್ರಿಗಳ ರಾಜೀನಾಮೆ ಕೇಳುತ್ತಿರುವ ಬಿಜೆಪಿಗರಿಗೆ ನಾಚಿಕೆಯಾಗಬೇಕು ಎಂದು ಹೇಳಿಕೆ ನೀಡಿದ್ದ ಸಚಿವೆ ಹೆಬ್ಬಾಳಕರ ಮಾತಿಗೆ ಶಾಸಕ ಅಭಯ ಪಾಟೀಲ ಜಾಣತನದಿಂದ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಹಜವಾಗಿ ಇಂತಹ ಮಾತುಗಳಿಗೆ ನಾನು ಪ್ರತಿಕ್ರಿಯಿಸಲು ಹೋಗಲ್ಲ. ಆದರೆ ಹಿಂದಿನ ಬೆಳವಣಿಗೆಗಳನ್ನು ಮೆಲುಕುಹಾಕಿದರೆ `ನಾಚಿಕೆ’ ಯಾರಿಗೆ ಇರಬೇಕಿತ್ತು ಎನ್ನುವುದನ್ನು ನೀವೇ ಊಹಿಸಿಕೊಳ್ಳಬಹುದು ಎಂದರು,

ಮುಡಾ ಹಗರಣದಲ್ಲಿ ಎಫ್ಐಆರ್ ದಾಖಲಾದರೂ ಸಿಎಂ ಸಿದ್ಧರಾಮಯ್ಯ ರಾಜೀನಾಮೆ ನೀಡದ ವಿಚಾರಕ್ಕೆ ಪ್ರತಿಕ್ರಿಯಸಿದ ಅವರು, ಹಿಂದೆ ಯಡಿಯೂರಪ್ಪ ಮೇಲೆ ಆರೋಪ ಮಾಡಿದಾಗ ಇದೇ ಸಿದ್ದರಾಮಯ್ಯ ನೈತಿಕತೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ್ದರು,ಆದರೆ ಈಗ ಅದೇ ಸಿದ್ಧರಾಮಯ್ಯನವರಿಗೆ ನೈತಿಕತೆಬರುವುದಿಲ್ಲವೇ ಎಂದು ಪ್ರಶ್ನೆ ಮಾಡಿದರು, ಯಡಿಯೂರಪ್ಪನವರಿಗೆ ಒಂದು ನಿಮಗೆ ಒಂದು ಕಾಯ್ದೆನಾ ಎಂದು ಪ್ರಶ್ನೆ ಮಾಡಿದ ಶಾಸಕ ಅಭಯ ಪಾಟೀಲರು,
ನಿಜವಾಗಿ ಸಿದ್ದರಾಮಯ್ಯ ನೈತಿಕತೆ ಇದ್ದರೆ ರಾಜೀನಾಮೆ ಕೊಡಬೇಕು ಎಂದರು,
ಸಿದ್ದರಾಮಯ್ಯನವರ ಬಗ್ಗೆ ಬಹಳ ಗೌರವ ಇತ್ತು, ಅವರು ಅಧಿಕಾರಕ್ಕೆ ಅಂಟಿಕೊಳ್ಳುವುದಿಲ್ಲ ಎನ್ನುವ ಮಾತಿದೆ, ಆದರೆ ಈಗ ಅವರೇ ಕುಚರ್ಿಗೆ ಫಿವಿಕಾಲ್ ಹಚ್ಚಿಕೊಂಡು ಕುಳಿತಿದ್ದಾರೆಂದರು,
ಕೇಂದ್ರ ಸಚಿವೆ ನಿರ್ಮಲಾ ಸೀತಾರಮನ್ ಮೇಲೆ ಎಫ್ಐಆರ್ ದಾಖಲು ಮಾಡಿದ್ದು ರಾಜಕೀಯ ಪ್ರೇರಿತ ಎಂದ ಅವರು, ಇಷ್ಟು ದಿನ ಮಲಗಿಕೊಂಡಿದ್ದರಾ ಎಂದು ಖಾರವಾಗಿ ಪ್ರಶ್ನೆ ಮಾಡಿದರು,