ಕೊಲೆಗೆ ಆ ಚೆಲ್ಲಾಟ ಕಾರಣವಾ?

ಇದೂ ಕೂಡ ಪೆನ್ ಡ್ರೈವ್ ಕಥೆನೇ.?

ಪತ್ನಿಯ ಮುಂದೆ ಮಾಡಬಾರದ್ದನ್ನು ಮಾಡುತ್ತಿದ್ದನಂತೆ ಸಂತೋಷ..?

ಇದರಿಂದಲೇ ಉಮಾ ಪಿತ್ತ ನೆತಗತಿಗೇರಿತ್ತಂತೆ

ಮಾಡಬಾರದ್ದನ್ಬು ಮಾಡುತ್ತ ಮನೆಯ ಸಂತೋಷವನ್ನೇ ಹಾಳು ಮಾಡಿದ್ದನಾ ಸಂತೋಷ?

.ಕಟ್ಟಿಕೊಂಡವಳನ್ಬು ಬಿಟ್ಟು ಇಟ್ಟುಕೊಂಡವಳ ಪ್ರೀತಿಗೆ ಸೋತು ಹೋಗಿದ್ದನಾ?

ಮಕ್ಕಳ ಮುಂದಿನ ಭವುಷ್ಯದ ಉದ್ದೇಶದಿಂದ ಸಂತೋಷನ ಸಂತೋಷಕ್ಕೆ ಅಂತ್ಯ ಹಾಡಿದಳಾ ಉಮಾ?


ಬೆಳಗಾವಿ.
ಕೋಟ್ಯಾಧೀಶ, ಲೇವಾದೇವಿ ವ್ಯವಹಾರ ನಡೆಸುತ್ತಿದ್ದ ಸಂತೋಷ ಪದ್ಮಣ್ಣವರ ಕೊಲೆಗೆ ಕಾರಣಗಳೇನು ಎನ್ನುವುದು ಸ್ಪಷ್ಟವಾಗಿ ಎಲ್ಲರಿಂದಲೂ ಗೊತ್ತಾಗಿ ಬಿಟ್ಟಿದೆ, ಅಷ್ಟೇ ಏಕೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಪೊಲೀಸರ ಕೈಗೆ ಸಂತೋಷನ ಆ ಆಟದ ಹಳೆಯ ಸಿಸಿಟಿವಿ ದೃಶ್ಯಾವಳಿಗಳು ಸಿಕ್ಕಿಬಿಟ್ಟಿವೆ, ‘
ಇಲ್ಲಿ ಪತ್ನಿ ಉಮಾ ಮಾಡಿದ್ದನ್ನು ಯಾರೂ ಸಮಥರ್ಿಸಿಕೊಳ್ಳುವ ಕೆಲಸ ಮಾಡುವುದಿಲ್ಲ. ಆದರೆ ಜೀವಿತಾವಧಿಯಲ್ಲಿ ತನ್ನ ಪತ್ನಿಯ ಸಮ್ಮುಖದಲ್ಲಿಯೇ ಸಂತೋಷ ಮಾಡಬಾರದ್ದನ್ನು ಮಾಡಿದ್ದರಿಂದ ಮಕ್ಕಳ ಮುಂದಿನ ಭವಿಷ್ಯದ ಚಿಂತೆ ಮಾಡಿ ಈ ನಿಧರ್ಾರ ಮಾಡಿರಬಹುದು ಎನ್ನುವ ಮಾತಿದೆ,.


ಸಂತೋಷ ಪದ್ಮಣ್ಣವರ ಕೊಲೆ ಪ್ರಕರಣವನ್ನು ಬೇಧಿಸಿದ ಪೊಲೀಸರು ಪತ್ನಿ ಉಮಾ ಸೇರಿದಂತೆ ಮೂವರನ್ನು ಬಂಧಿಸಿ ಜೈಲಿಗೂ ಕಳಿಸಿದ್ದಾರೆ,ನ್ಯಾಯಾಲಯವು ಅವರನ್ನು 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.
ಉಮಾ ಪದ್ಮನ್ನವರ ಮೂರು ಮಕ್ಕಳ ತಾಯಿ. ಮೊದಲ ಮಗಳು ಬೆಂಗಳೂರಿನಲ್ಲಿ ಬಿಇ ಓದುತ್ತಿದ್ದರೆ ಉಳಿದಿಬ್ಬರು ಚಿಕ್ಜ ಹುಡುಗರು ಇಲ್ಲಿಯೇ ಓದುತ್ತಿದ್ದರು.
ಮದುವೆಯಾದ ಹೊಸದರಲ್ಲಿ ಸಂಭಾವಿತನಾಗಿದ್ದ ಸಂತೋಷ ಹಣ ಹೆಚ್ಚಿದಂತೆ ಶೋಕಿಯೂ ಹೆಚ್ಚಿಸಿಕೊಂಡಿದ್ದ. ಇತ್ತೀಚೆಗೆ ಹೆಣ್ಣಿನ ಹುಚ್ಚು ಏರಿಸಿಕೊಂಡಿದ್ದ ಎನ್ನಲಾಗಿದೆ,


ಮೊದಲ ಪತ್ನಿಗೆ ಗೊತ್ತಿಲ್ಲದಂತೆ ಎರಡನೆ ಹೆಂಡತಿಯ ಜತೆಯಲ್ಲಿ ಜಾಸ್ತಿ ಸಮಯ ಕಳೆಯುತ್ತಿದ್ದನು ಎನ್ನುವ ಮಾತಿದೆ. ಅಷ್ಟೇ ಅಲ್ಲ ಅವಳಿಗಾಗಿ ಹಣವನ್ನು ನೀರಿನಂತೆ ವ್ಯಯಿಸುತ್ತಿದ್ದನಂತೆ, ಸಹಜವಾಗಿಯೇ ಆತನ ಈ ಎಲ್ಲ ವರ್ತನೆ ಉಮಾಳನ್ನು ಕಂಗೆಡಿಸಿತ್ತು. ಇದೇ ರೀತಿ ಮುಂದುವರೆದರೆ ತನ್ನ ಮಕ್ಕಳ ಭವಿಷ್ಯದ ಕತೆ ಏನು ಎಂಬ ಆತಂಕ ಹೆಚ್ಚಾಯಿತು. ಇದೇ ಕಾರಣಕ್ಕೆ ತನ್ನ ಗೆಳೆಯನ ಜತೆ ಸೇರಿ ಪತಿಯನ್ನೆ ಪರಂಧಾಮಕ್ಕೆ ಸೇರಿಸಿಬಿಟ್ಟಳು ಎನ್ನುವ ಮಾತು ಕೇಳಿಬರುತ್ತಿದೆ,

ಆದರೆ ವಿಪರ್ಯಾಸ ವೆಂದರೆ ಯಾವ ಮಕ್ಕಳ ಭವಿಷ್ಯದ ಗುಂಗಿನಲ್ಲಿ ಉಮಾ ಈ ಕೊಲೆ ಕೃತ್ಯ ಎಸಗಿದಳೋ ಅದೇ ಮಗಳು ಈಗ ಅಮ್ಮನನ್ನು ಕಂಬಿಯ ಹಿಂದೆ ಕಳುಹಿಸಿದ್ದಾಳೆ

`ಆ ಆಟ’ವೇ ಸಾವಿಗೆ ಕಾರಣವಾಯಿತಾ?.
ಇಂತಹುದೊಂದು ಪ್ರಶ್ನೆ ಪೊಲೀಸ್ ಇಲಾಖೆ ಅಷ್ಟೇ ಅಲ್ಲ ಬಹುತೇಕರನ್ನು ಕಾಡುತ್ತಿದೆ.

ಯಾವ ಹೆಣ್ಣೂ ಸಹಿಸಿಕೊಳ್ಳದ ಅಂತಹ ಚೆಲ್ಲಾಟ ಮತ್ತು ಆತ ಕೊಡುತ್ತಿದ್ದ ಎನ್ನಲಾದ ಕಿರುಕುಳವನ್ನು ತಡೆಯದೇ ಸಂತೋಷನ ಸಂತೋಷವನ್ನು ಅಂತ್ಯಗೊಳಿಸುವ ನಿಧರ್ಾರಕ್ಕೆ ಉಮಾ ಬಂದಿರಬಹುದು ಎನ್ನಲಾಗುತ್ತಿದೆ,

ಶೋಕಿಲಾಲ್
ಒಂದು ರೀತಿಯಲ್ಲಿ ಶೋಕಿಲಾಲ್ ಎಂದು ಕರೆಯಿಸಿಕೊಳ್ಳುವ ಸಂತೋಷನಿಗೆ ಹಣದ ಮದವೂ ಇತ್ತು,
ಕಾರಿನಲ್ಲಿ ಹೋಗುವಾಗ ಕೈಯ್ಯಲ್ಲಿ ಸಿಗರೇಟ ಹಿಡಿದುಕೊಂಡು ಇದರ ಬೆಲೆ ಕನಿಷ್ಟ 1500 ರೂ, ಇಂತಹವನ್ನು ನಾನು ದಿನಕ್ಕೆ ಹತ್ತು ಸೇದುತ್ತೇನೆ ಎನ್ನುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಕೆಲಸವನ್ನು ಈತ ಮಾಡಿದ್ದನು.

ಕಳೆದ ಕೆಲ ವರ್ಷಗಳ ಹಿಂದೆ ಈತನ ಮನೆಯ ಕಳ್ಳತನ ಪ್ರಕರಣದಲ್ಲಿ ಕಳೆದುಹೋಗಿದ್ದ ಚಿನ್ನಾಭರಣವನ್ನು ವಸೂಲಿ ಮಾಡಿಕೊಡಲಿಲ್ಲ ಎನ್ನುವ ಕಾರಣದಿಂದ ಪೊಲೀಸ್ ಅಧಿಕಾರಿಗಳ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಕೆಟ್ಟದಾಗಿ ಪೋಸ್ಟ ಮಾಡುತ್ತಿದ್ದನು.

ಗೊತ್ತಿಲ್ಲದಂತೆ ಇದ್ದಳು…!
ಕಳೆದ 9 ರಂದು ಮನೆಯಲ್ಲಿಯೇ ಸಂತೋಷನ ಕೊಲೆಯಾಗಿದೆ, ಆದರೆ ಇದೆಲ್ಲ ಹೊರಗಿನವರಿಗೆ ಗೊತ್ತಾಗಬಾರದು ಎನ್ನುವ ಉದ್ದೇಶದಿಂದ ಆತನ ಕಣ್ಣುಗಳನ್ನು ದಾನಮಾಡಿದ್ದರು,

ಆದರೆ ಬೆಂಗಳೂರಿನಿಂದ ಬಂದ ಮಗಳು ಸಂಜನಾ ತನ್ನ ತಂದೆಯ ಕೊನೆಯ ಕ್ಷಣವನ್ನು ನೋಡಲು ಸಿಸಿಟಿವಿ ನೋಡಲು ಮುಂದಾಗಾಗ ಸಾವಿನ ಅಸಲಿಯತ್ತು ತೆರೆದುಕೊಂಡಿತು, ಈಗ ಉಮಾ ತನ್ನಮಕ್ಕಳನ್ನು ಅನಾಥರನ್ನಾಗಿ ಮಾಡಿ ಜೈಲು ಕಂಬಿ ಎಣಿಸಬೇಕಾದ ಪರಿಸ್ಥಿತಿ ಬಂದಿದೆ.

Leave a Reply

Your email address will not be published. Required fields are marked *

error: Content is protected !!