ಬೆಳಗಾವಿ ಕೇಳಿ ಮಾಡಬ್ಯಾಡ್ರಿ ತಪ್ಪ…!

Oplus_131106

ಈಗಿನಿಂದಲೇ ನಡೆದಿದೆ ರಾಜ್ಯೋತ್ಸವ ಸಿದ್ಧತೆ

ಚನ್ನಮ್ಮ ವೃತ್ತದಲ್ಲಿ ಶುಭಾಶಯ ಕೋರುವ ಫಲಕಗಳು.

ಸಂಭ್ರಮಕ್ಕೆ‌ ಕ್ಷಣಗಣನೆ


ಬೆಳಗಾವಿ.
ಬ್ರಟೀಷರಿಗೆ ಕೊಡಲಿಲ್ಲ ಕಪ್ಪ.
ಬೆಳಗಾವಿ ಕೇಳಿ ಮಾಡಬ್ಯಾಡ್ರಿ ತಪ್ಪ…!

ಕನ್ನಡ ರಾಜ್ಯೋತ್ಸವಕ್ಕೆ ಇನ್ನೂ ಬರೊಬ್ಬರಿ ಹನ್ನೊಂದು ದಿನ ಬಾಕಿ ಉಳಿದಿರುವಾಗಲೇ ಗಡಿನಾಡ ಬೆಳಗಾವಿಯಲ್ಲಿ ಕನ್ನಡಿಗರ ಮೈ ನವಿರೇಳಿಸುವಂತಹ ಇಂತಹ ಬರಹವುಳ್ಳ ಟೀ ಶರ್ಟಗಳು ಮಾರುಕಟ್ಟೆಗೆ ಬಂದಿವೆ.
ಕಿತ್ತೂರು ಚನ್ನಮ್ಮ ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಭವನದ ಆವರಣದಲ್ಲಿ ಕನ್ನಡಿಗರೇ ಇಂತಹ ಟಿ ಶರ್ಟಗಳನ್ನು ಮಾರಾಟ ಮಾಡುತ್ತಿದ್ದಾರೆ, ಅಷ್ಟೇ ಅಲ್ಲ ಸಾಮಾಜಿಕ ಜಾಲತಾಣದಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಬೆಳಗಾವಿಗೆ ಬನ್ನಿ ಎಂದು ಆಹ್ವಾನ ಕೊಡುತ್ತಿರುವ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ,

ಅಷ್ಟೇ ಅಲ್ಲ ಬೆಳಗಾವಿಯ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಈಗಲೇ ರಾಜ್ಯೋತ್ಸವಕ್ಕೆ ಶುಭಾಶಯ ಕೋರುವ ಆಳೆತ್ತರದ ಬ್ಯಾನರುಗಳು ರಾರಾಜಿಸುತ್ತಿವೆ,. ಇದರ ಜೊತೆಗೆ ಚನ್ನಮ್ಮ ವೃತ್ತದಿಂದ ಕಾಕತಿವೇಸ್ ವೃತ್ತದ ಕಡೆಗೆ ಬರುವ ರಸ್ತೆಯ ಎರಡೂ ಬದಿಗೆ ರಾಜ್ಯೋತ್ಸವಕ್ಕಾಗಿ ಪೆಂಡಾಲು ಹಾಕುವ ಕೆಲಸ ಕೂಡ ಈಗಿನಿಂದಲೇ ನಡೆದಿದೆ, ಅಂದರೆ ಈ ಬಾರಿ ಗಡಿನಾಡ ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವದ ಸಡಗರ ನೋಡಲು ನಿಜಕ್ಕೂ ಎರಡು ಕಣ್ಣು ಸಾಲದು

ಸಂಘಟನೆಗಳಲ್ಲಿ ಉತ್ಸಾಹ..!
ಕನ್ನಡ ರಾಜ್ಯೋತ್ಸವ ಅದ್ದೂರಿ ಆಚರಣೆ
ಮಾಡಬೇಕು ಎನ್ನುವ ನಿಟ್ಟಿನಲ್ಲಿ ಕನ್ನಡ ಪರ ಸಂಘಟನೆಗಳು ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳುತ್ತಿವೆ, ಮೆರವಣಿಗೆ ಸಂದರ್ಭದಲ್ಲಿ ಕನ್ನಡ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕಲು ಡಿಜೆಗೆ ಮುಂಗಡ ಕೊಟ್ಟು ಬುಕ್ ಮಾಡಿಕೊಂಡಿದ್ದಾರೆ,

ಮತ್ತೊಂದು ಸಂಗತಿ ಎಂದರೆ, ಕನ್ನಡ ರಾಜ್ಯೋತ್ಸವದಲ್ಲಿ ಭಾಗವಹಿಸಲು ಈ ಬಾರಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಕನ್ನಡಿಗರು ಬರಲು ಕಾತುರರಾಗಿದ್ದಾರೆ.

ಭೇಷ್ ಡಿಸಿ..!
ಕನ್ನಡಿಗರ ಹಬ್ಬ ಎಂದೇ ಕರೆಯಲಾಗುತ್ತಿರುವ ಕನ್ನಡ ರಾಜ್ಯೋತ್ಸವಕ್ಕೆ ಹಬ್ಬರ ಸ್ವರೂಪ ಕೊಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅಧ್ಯಕ್ಷತೆಯಲ್ಲಿ ಭರ್ಜರಿ ಸಿದ್ಧತೆಗಳು ನಡೆದಿವೆ.

ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಕನ್ನಡ ಸಂಘಟನೆಗಳ ಜೊತೆ ಸಭೆ ನಡೆಸಿ ಚಚರ್ೆ ಕೂಡ ನಡೆಸಿದ್ದಾರೆ, ಅದ್ದೂರಿ ಆಚರಣೆಯಲ್ಲಿ ಯಾವುದಕ್ಕೂ ಕಡಿಮೆ ಇರಲ್ಲ ಎನ್ನುವ ಭರವಸೆಯನ್ನುಅವರು ನೀಡಿದ್ದಾರೆ, ಗಮನಿಸಬೇಕಾದ ಸಂಗತಿ ಎಂದರೆ, ಕಿತ್ತೂರು ಉತ್ಸವ ಆಚರಣೆಗೆ ಜಿಲ್ಲಾಧಿಕಾರಿಗಳು ತೆಗೆದುಕೊಂಡ ಕ್ರಮವನ್ನು ನೋಡಿ ಕನ್ನಡಿಗರು ಫುಲ್ ಖುಷ್ ಆಗಿದ್ದಾರೆ.
ಇದೆಲ್ಲದರ ಮಧ್ಯೆ ಕನ್ನಡ ರಾಜ್ಯೋತ್ಸವದಂತೆ ಕರಾಳ ದಿನಕ್ಕೆ ಅನುಮತಿ ಕೊಡಿ ಎಂದು ಬಂದಿದ್ದ ನಾಡದ್ರೋಹಿ ಎಂಇಎಸ್ ನವರಿಗೆ ತಮ್ಮ ಶೈಲಿಯಲ್ಲಿಯೇ ಖಡಕ್ ಆಗಿ ಉತ್ತರ ನೀಡಿದ್ದಾರೆ,
ನಾನು ಎಲ್ಲ ಹೋರಾಟಗಾರರನ್ನು ಗೌರವಿಸುತ್ತೇನೆ. ಆದರೆ ರಾಜ್ಯೋತ್ಸವದಂದು ಇಂತಹ ಕರಾಳ ದಿನಕ್ಕೆ ಮುಂದಾದರೆ ಯಾವುದೇ ಕಾರಣಕ್ಕೂ ಬಿಡಲ್ಲ ಎನ್ನುವ ಎಚ್ಚರಿಕೆ ಸಂದೇಶ ಕೊಟ್ಟು ವಾಪಸ್ಸು ಕಳಿಸಿದ್ದಾರೆ
.

ಮತ್ತೊಂದು ಕಡೆಗೆ ಪೊಲೀಸ್ ಆಯುಕ್ತ ಇಡಾ ಮಾಟರ್ಿನ್ ಅವರೂ ಸಹ ನಾಡದೋಹಿಗಳೀಗೆ ಬಾಲ ಬಿಚ್ಚಿದರೆ ಹುಷಾರ್ ಎನ್ನುವ ಎಚ್ಚರಿಕೆ ನೀಡಿದ್ದಾರೆ,

ಬೆಂಡೆತ್ತುವ ಕೆಲಸ ಮಾಡಿ
ಕಳೆದ ಬಾರಿ ಕೂಡ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿಯವರಿಗೆ ಕರಾಳ ದಿನ ಆಚರಿಸಲು ಅನುಮತಿ ನೀಡಿರಲಿಲ್ಲ.
ಆದರೂ ಅವರು ಮೆರವಣಿಗೆ ನಡೆಸಿ ಭಂಡತನ ಮೆರೆದಿದ್ದರು. ಆದರೆ‌ಈ ಬಾರಿ ಅವರಿಗೆವಾಂತಹ ಮೆರವಣಿಗೆಗೂ ಅವಕಾಶ ಕೊಡಬಾರದು ಎಂದು ಕನ್ನಡಿಗರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!