ಇದು ವಾಲ್ಮಿಕಿ, ಮೂಡಾ ಹಗರಣ ಮೀರಿಸಬಹುದು.
400 ಪುಟದ ದಾಖಲೆಗಳು ಸಾಕ್ಷಿ ನುಡಿಯುತ್ತಿವೆ ಬ್ರಹ್ಮಾಂಡ ಭ್ರಷ್ಟಾಚಾರ.
.kmf ಸಿಬ್ಬಂದಿ ಈಗ ಭದ್ರಾವತಿ ಸಿಡಿಪಿಓ.
ಬೆಂಗಳೂರು.
ಈ ಇಲಾಖೆಯಲ್ಲಿ ಇದೊಂದೇ ನೇಮಕದ ವಿಷಯ ಮುಂದಿಟ್ಟುಕೊಂಡು ವಿಚಾರಣೆ ಮಾಡುತ್ತ ಹೋದರೆ ಕರ್ಮಕಾಂಡದ ಬ್ರಹ್ಮಾಂಡವೇ ತೆರೆದುಕೊಳ್ಖುತ್ತದೆ.
ರಾಜ್ಯದಲ್ಲಿ ವರ್ಗಾವಣೆಗೆ ನಿರ್ದಿಷ್ಟ ಅವಧಿ ಎನ್ನುವುದು ಇರುತ್ತದೆ.ಆದರೆ ಅದು ಇಲ್ಲಿ ನಿತ್ಯ ನಿರಂತರ. ಎಲ್ಲವೂ ಗ್ಯಾರಂಟಿನೇ!

ಆ ಕರ್ಮಕಾಂಡದ ನಾಲ್ಕುನೂರಕ್ಕೂ ಹೆಚ್ಚು ಪುಟಗಳ ದಾಖಲೆಗಳನ್ನು ತಿರುವಿದರೆ ಈ ಇಲಾಖೆಗೆ ಹೇಳೊರು, ಕೇಳೋರು ಇಲ್ಲ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ.
ಅಷ್ಟೇ ಅಲ್ಲ ಈ ಇಲಾಖೆ ವಾಲ್ಮೀಕಿ, ಮೂಡಾ ಹಗರಣವನ್ನು ಮೀರಿಸುತ್ತದೆ. ಕೆಲವರ ಪ್ರಕಾರ ಈ ಇಲಾಖೆ ಬಗ್ಗೆ ಯಾರಾದರೂ ರಾಜ್ಯಪಾಲರಿಗೆ ದಾಖಲೆ ಸಮೇತ ದೂರು ನೀಡಿದರೆ ಅವರು ಹಿಂದೆ ಮುಂದೆ ನೋಡದೇ ತಕ್ಷಣ ಪ್ರಾಸಿಕ್ಯೂಶನಗೆ ಅನುಮತಿ ಕೊಡಬಹುದು.
ಈಗ ಅದೆಲ್ಲ ಬಿಡಿ.ಬೆಂಗಳೂರು KMF ದಲ್ಲಿ ಪಶು ಪಶು ಆಹಾರ ಘಟಕದಲ್ಲಿ ಉಪನಿರ್ದೇಶಕರಾಗಿ ಕೆಲಸ ಮಾಡುತ್ತಿರುವ ಈರಪ್ಪ ಅವರನ್ನು ಭದ್ರಾವತಿಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನೇಮಕಮಾಡಲಾಗಿದೆ. ಒಂದುಬಸರ್ಕಾರಿ ಅಂಗ ಸಂಸ್ಥೆಯಲ್ಲಿದ್ದವರನ್ನು ಸರ್ಕಾರದ ಇಲಾಖೆಯ ಪಿಡಿಓ ಆಗಿ ನೇಮಕ ಮಾಡಬಹುದಾ ಎನ್ನುವ ಪ್ರಶ್ನೆ ಇಲಾಖೆಯವರನ್ನೇ ಕಾಡುತ್ತಿದೆ.
ಆಡಳಿತಾತ್ಮಕ ದೃಷ್ಟಿಯಿಂದ ಎಂದು ಉಲ್ಲೇಖಿಸಿ ಕಳೆದ ದಿ.. 15 ರಂದು ಆದೇಶ.ಮಾಡಲಾಗಿದೆ. ಇಲಾಖೆಯಲ್ಲಿದ್ದವರಿಗೆ ಇನ್ನೂ ಸರಿಯಾಗಿ ಬಡ್ತಿ ಸಿಗುತ್ತಿಲ್ಲ.ಅಂತಹುದರಲ್ಲಿ ಈ ನೇಮಕ ಹೇಗಾಯಿತು.?