ಬ್ರಾಹ್ಮಣ ಸಮಾವೇಶ ಹಿನ್ನೆಲೆ
ಬೆಂಗಳೂರಿನಲ್ಲಿ ಜನೇವರಿ 18,19 ರಂದು ಸಮಾವೇಶ.
ಸಮಾವೇಶದ ಸಿದ್ಧತೆಯಲ್ಲಿ ಎಕೆಬಿಎಂಎಸ್. ಅಶೋಕ ಹಾರನಹಳ್ಳಿ ನೇತೃತ್ವ.
ಬೆಂಗಳೂರು:
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ 2025ನೆ. ಜನವರಿ18.19 ಶನಿವಾರ ಮತ್ತು ಭಾನುವಾರ ಹಮ್ಮಿಕೊಂಡಿರುವ 11ನೇ ಬ್ರಾಹ್ಮಣ ಮಹಾ ಸಮ್ಮೇಳನ ಸುವರ್ಣ ಮಹೋತ್ಸವ ಅಂಗವಾಗಿ ಲೋಕಕಲ್ಯಾಣಾರ್ಥವಾಗಿ.24 ಕೋಟಿ ಗಾಯತ್ರಿ ಜಪವನ್ನು ರಾಜ್ಯದ ಎಲ್ಲಾ ತ್ರಿಮತಸ್ಥ ವಿಪ್ರ ಬಾಂಧವರು ಪ್ರತಿನಿತ್ಯ ಕನಿಷ್ಠ108 ಗಾಯತ್ರಿ ಜಪವನ್ನುಅನುಷ್ಠಾನ ಮಾಡಬೇಕೆಂದು ದಕ್ಷಿಣಾಮ್ನಾಯ ಶ್ರೀಶೃಂಗೇರಿ ಶಾರದಾ ಪೀಠದ ಜಗದ್ಗುರುಗಳಾದ ಶ್ರೀ ಶ್ರೀ ವಿದುಶೇಖರ ಭಾರತಿ ಸನ್ನಿಧಾನಂಗಳವರು ಅಪ್ಪಣೆ ಮಾಡಿ ಯಾಗದ ಆಹ್ವಾನ ಪತ್ರಿಕೆಯನ್ನು ಅನುಗ್ರಹಿಸಿ ಬಿಡುಗಡೆ ಮಾಡಿದರು .

ಮಧುಗಿರಿಯಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಮಹಾಸಭಾ ಅಧ್ಯಕ್ಷರಾದ ಶ್ರೀ ಅಶೋಕ ಹಾರನಹಳ್ಳಿ , ಪದಾಧಿಕಾರಿಗಳಾದ ವೇದಮೂರ್ತಿ ಭಾನುಪ್ರಕಾಶ್ ಶರ್ಮ ವೇದಮೂರ್ತಿ ರಾಘವೇಂದ್ರ ಭಟ್ ಹಾಗೂ ಡಿ.ವಿ. ರಾಜೇಂದ್ರ ಪ್ರಸಾದ್ ಕಾರ್ತಿಕ್ ಬಾಪಟ್ ಸುಧಾಕರ್ ಬಾಬು. ಮುರುಳಿಧರ್ ಅರುಣ್ ಕುಮಾರ್ ಉಪಸ್ಥಿತರಿದ್ದರು