ಗಣವೇಶದಲ್ಲಿ ಮಿಂಚಿದ ಶಾಸಕ ಅಭಯ

ಗಣವೇಶದಲ್ಲಿ ಮಿಂಚಿದ ಶಾಸಕ ಅಭಯ, ಅನಿಲ ಬೆನಕೆ‌ ಮತ್ತಿತರರು

ಬೆಳಗಾವಿಯಲ್ಲಿ ಶಿಸ್ತುಬದ್ಧ RSS ಪಥಸಂಚಲನ ಸರಿಯಾದ ಸಮಯಕ್ಕೆ ಆರಂಭಗೊಂಡ ಪಥ ಸಂಚಲನ.


ಬೆಳಗಾವಿ.
ರಾಷ್ಟ್ರೀಯ ಸ್ವಯಂ ಸೇವಕರು ಶಿಸ್ತು ಬದ್ಧ ಪಥ ಸಂಚಲನ ನಡೆಸುವ ಮೂಲಕ ಗಡಿನಾಡ ಬೆಳಗಾವಿಯಲ್ಲಿ ಜನರಲ್ಲಿ ಒಂದು ರೀತಿಯ ಸಂಚಲನ ಮೂಡಿಸಿದರು,

oplus_2

ಜನರಲ್ಲಿ ರಾಷ್ಟ್ರಪ್ರೇಮ ಬೆಳೆಸುವ ಉದ್ದೇಶದಿಂದ ಈ ಪಥ ಸಂಚನ ನಡೆಸಲಾಯಿತು, ಗಣವೇಶ ಧರಿಸಿ ಕೈಯ್ಯಲ್ಲೊಂದು ಕೋಲು ಹಿಡಿದುಕೊಂಡು ಅತ್ಯಂತ ಶಿಸ್ತು ಬದ್ಧವಾಗಿ ಪಥ ಸಂಚಲನದಲ್ಲಿ ಭಾಗವಹಿಸಿದ್ದರು, ಚಿಕ್ಕಮಕ್ಕಳೂ ಸಹ ಇದರಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು,


ನಿಗದಿ ಪಡಿಸಿದ್ದ ಸಮಯಕ್ಕೆ ಸರಿಯಾಗಿ ಅಂದರೆ 3,45 ಕ್ಕೆ ಲಿಂಗರಾಜು ಕಾಲೇಜ ಮೈದಾನದಿಂದ ಪಥಸಂಚಲನ ಆರಂಭಗೊಂಡಿತು,

ಗಮನಿಸಬೇಕಾದ ಸಂಗತಿ ಎಂದರೆ, ಕಳೆದ ಬಾರಿ ಸಾಗಿದ್ದ ಮಾರ್ಗವನ್ನು ಈ ಬಾರಿ ಬದಲಿಸಲಾಗಿತ್ತು, ಪಥ ಸಂಚಲನವು ಲಿಂಗರಾಜು ಕಾಲೇಜಿನಿಂದ ಆರಂಭಗೊಂಡು ಕಾಕತಿವೇಸ್ದಿಂದ ಕೆಳಗೆ ಬಾರದೇ ಜಿಲ್ಲಾ ಪಂಚಾಯಿತಿ ಮೂಲಕ ಖಡಬಜಾರ ಮೂಲಕ ಸಾಗಿ ಕೊನೆಗೆ ಮತ್ತೇ ಅದೇ ಸ್ಥಳಕ್ಕೆ ಕೊನೆ ಗೊಂಡಿತು,
ಬಿಜೆಪಿ ನಗರಸೇವಕರು ಕೆಲವೊಂದು ಕಡೆಗೆ ಪಥ ಸಂಚಲನದ ಮೇಲೆ ಹೂವಿನ ಸುರಿಮಳೆಗೈದರು. ಸಂಘ ಪರಿವಾರದವರೂ ಅಷ್ಟೇ ಅಲ್ಲ ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಅನಿಲ ಬೆನಕೆ, ಬಿಜೆಪಿ ಅಧ್ಯಕ್ಷ ಸುಭಾಸ ಪಾಟೀಲ ಮುಂತಾದವರು ಗಣವೇಶದಲ್ಲಿ ಸಾಗಿದರು.

ಪಥ ಸಂಚಲನ

ಪಥ ಸಂಚಲನ ಸಂದರ್ಭದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಪಥ ಸಂಚಲನ ಮುಗಿದು ಲಿಂಗರಾಜು ಕಾಲೇಜಿನಲ್ಲಿ ವೇದಿಕೆ ಕಾರ್ಯಕ್ರಮ ಮುಗಿಯುವ ಹಂತಕ್ಕೆ ಬಂದಾಗ ಜೋರಾಗಿ ಮಳೆ ಬಂದಿತು, ಹೀಗಾಗಿ ಸ್ವಲ್ಪ ಅಸ್ತವ್ಯಸ್ತವಾಯಿತು

Leave a Reply

Your email address will not be published. Required fields are marked *

error: Content is protected !!