ಕನ್ನಡಿಗರಿಗೆ ಎಂಥಾ ಕಾಲವಯ್ಯ…!

ಅರ್ಜ ಹಾಕಿ ಸನ್ಮಾನ ಮಾಡಿಸಿಕೊಳ್ಳಿ.

ಕನ್ನಡ ಹೋರಾಟಗಾರರ ಸ್ವಾಭಿಮಾನಕ್ಕೆ ಧಕ್ಕೆ ತಂದ ಆಡಳಿತ.

ಜಿಲ್ಲಾಡಳಿತದಿಂದ ಸನ್ಮಾನ ಬೇಕಿದ್ದರೆ ಅರ್ಜಿ ಗುಜರಾಯಿಸಿ..

ಇದು ಬಾಯಿ ಇದ್ದವರ ಕಾಲ..

ಬೆಳಗಾವಿ.
ಕನ್ನಡ ನಾಡು ನುಡಿಯ ವಿಷಯದಲ್ಲಿ ನೀವು ಹೋರಾಟ ಮಾಡಿದ್ದಿರಾ? ಹಾಗಿದ್ದರೆ ಈಗ ನಿಮ್ಮ ಹೋರಾಟವನ್ನು ಗುರುತಿಸಿ ಸನ್ಮಾನ ಮಾಡುವ ಕಾಲ ಹೋಯಿತು

ಬಾರಿ ನಿಮಗೇನಾದರೂ ಜಿಲ್ಲಾಡಳಿತದಿಂದ ಸನ್ಮಾನ ಮಾಡಿಸಿಕೊಳ್ಳುವುದಿದ್ದರೆ ಅರ್ಜಿ ಹಾಕಬೇಕು,!
ಗಡಿನಾಡ ಕನ್ನಡ ಹೋರಾಟಗಾರರಿಗೆ ಅರ್ಜಿ ಹಾಕಿ ಸನ್ಮಾನ ಮಾಡಿಸಿಕೊಳ್ಳುವ ಪರಿಸ್ಥಿತಿ ಇದೆಯಾ ಎನ್ನುವ ಬಹುದೊಡ್ಡ ಪ್ರಶ್ನೆ ಬಹುತೇಕರನ್ನು ಕಾಡುತ್ತಿದೆ,

ಅಂದರೆ ಕನ್ನಡ ಹೋರಾಟಗಾರರನ್ನು ಗುರುತಿಸಿ ಸನ್ಮಾನ ಮಾಡುವಲ್ಲಿಯೂ ಜಿಲ್ಲಾಡಳಿತಕ್ಕೆ ಆಗುತ್ತಿಲ್ಲ ಅಂದರೆ ಪರುಸ್ಥಿತಿ ಯಾವ ಮಟ್ಟಕ್ಕೆ ಹೋಗಿ ನಿಂತಿದೆ ಎನ್ನುವುದನ್ನು ನೀವೇ ಊಹಿಸಿ.

ಇದೆಲ್ಲಕ್ಕಿಂತ ಜಿಲ್ಲಾಡಳಿತಕ್ಜೆ ಅರ್ಜಿ ಹಾಕಿ ಪ್ರಶಸ್ತಿಹಾಕಬೇಕು ಎನ್ನುವ ಪುಕ್ಸಟ್ಟೆ ಸಲಹೆ ಕೊಟ್ಟ ಪುಣ್ಯಾತ್ಮ ಯಾರು ಎನ್ನುವುದು ಈಗ ಚರ್ಚೆಯ ವಿಷಯವಾಗಿದೆ.

ಈಗ ಜಿಲ್ಲಾಡಳಿತ ಸನ್ಮಾನ ಬೇಕಿದ್ದರೆ ಅರ್ಜಿ ಹಾಕಿ ಎಂದು ಪ್ರಕಟನೆ ಹೊರಡಿಸಿದೆ
ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಕನ್ನಡ ನಾಡು-ನುಡಿ ಹೋರಾಟಗಾರರನ್ನು ಜಿಲ್ಲಾಡಳಿತದ ವತಿಯಿಂದ ಗುರುತಿಸಿ ಸನ್ಮಾನಿಸಲು ತೀರ್ಮಾನಿಸಲಾಗಿದ್ದು, ಬೆಳಗಾವಿ ಜಿಲ್ಲೆಯ ಅರ್ಹ ಕನ್ನಡಪರ ಹೋರಾಟಗಾರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕನ್ನಡ ಹೋರಾಟಗಾರರ ಸನ್ಮಾನ ಆಯ್ಕೆ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ತಿಳಿಸಿದ್ದಾರೆ.
ಕನ್ನಡ ನಾಡು ನುಡಿಗಾಗಿ ಹೋರಾಡಿದ 40 ವರ್ಷ ಮೇಲ್ಪಟ್ಟವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಕನಿಷ್ಠ 5 ವರ್ಷಗಳ ಕಾಲ ಕನ್ನಡಪರ ಹೋರಾಟಗಳ ನೇತೃತ್ವ ವಹಿಸಿದವರು ಅಥವಾ ಮುಂಚೂಣಿಯಲ್ಲಿದ್ದವರು ಮತ್ತು ಯಾವುದೇ ವೈಯಕ್ತಿಕ ಕ್ರಿಮಿನಲ್ ಮೊಕದ್ದಮೆಗಳು ಹೊಂದಿರದವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಆಸಕ್ತರು, ತಮ್ಮ ಸ್ವ-ವಿವರ ಮಾಹಿತಿ, ಛಾಯಾಚಿತ್ರಗಳು, ಪತ್ರಿಕಾ ವರದಿ ಇನ್ನಿತರ ಲಭ್ಯ ದಾಖಲೆಗಳ ಸಮೇತ ಅಕ್ಟೋಬರ್ 26 ರೊಳಗಾಗಿ “ಉಪ ವಿಭಾಗಾಧಿಕಾರಿಗಳ ಕಚೇರಿ, ನ್ಯಾಯಾಲಯ ಆವರಣ, ಬೆಳಗಾವಿ” ಇಲ್ಲಿ ಸಲ್ಲಿಸಬಹುದು ಎಂದು ಅಧ್ಯಕ್ಷರು, ಕನ್ನಡ ಹೊರಾಟಗಾರರ ಸನ್ಮಾನ ಆಯ್ಕೆ ಸಮಿತಿ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ರಾಹುಲ್ ಶಿಂಧೆ ತಿಳಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!