ಬೆಳಗಾವಿ
ವೀರರಾಣಿ ಕಿತ್ತೂರು ಚನ್ನಮ್ಮಳ ೨೦೦ ನೇ ವಿಜಯೋತ್ಸವವನ್ನು ಹಿನ್ನೆಲೆಯಲ್ಲಿ ಕಿತ್ತೂರು, ಬೆಳಗಾವಿ ಮತ್ತು ಕಾಕತಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಕಾಕತಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ, ಸಂಸದ ಜಗದೀಶ್ ಶೆಟ್ಟರ್, ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಶಾಸಕ ಆಸೀಫ್ ಶೇಠ, ಜಿಲ್ಲಾಧಿಕಾರಿ ಮೊಹಮ್ಮದ ರೋಷನ್. ಜಿಲ್ಲಾ ಪಂಚಾಯತ ಸಿಇಒ ರಾಹುಲ್ ಶಿಂದೆ, ಪಾಲಿಕೆ ಆಯುಕ್ತೆ ಶುಭ ಮುಂತಾದವರು ಚನ್ನಮ್ಮನಪ್ರತಿಮೆಗೆ ಗೌರವ ಅರ್ಪಿಸಿದರು.

ಬೆಳಗಾವಿಯಲ್ಲಿ ಉಪಮೇಯರ್ ಆನಂದ ಚವ್ವಾಣ, ಆಡಳಿತ ಪಕ್ಷದ ನಾಯಕ ಗಿರೀಶ್ ಧೋಂಗಡಿ, ನಗರಸೇವಕಿ ವಾಣಿ ಜೋಶಿ, ರೇಷ್ಮಾ ಕಾಮಕರ, ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅದ್ಯಕ್ಷ ಅಶೋಕ ಚಂದರಗಿ ಅವರು ಚೆನ್ನಮ್ಮನ ಪ್ರತಿಮೆಗೆ ಹೂವಿನ ಹಾರ ಹಾಕಿದರು
